ಪರಿಷತ್ : ಮುಸ್ಲಿಂ ಅಥವಾ ಕ್ರೈಸ್ತರಿಗೆ ಅವಕಾಶಕ್ಕೆ ಸಿದ್ದರಾಮಯ್ಯ ಪಟ್ಟು!

ಕಾಂಗ್ರೆಸ್‍ನಲ್ಲಿ(Congress) ವಿಧಾನಪರಿಷತ್ ಚುನಾವಣೆಯ(VidhanaParishath Election) ಕಾವು ಜೋರಾಗಿದೆ. ಪಕ್ಷದ ಟಿಕೆಟ್ ಗಿಟ್ಟಿಸಿಕೊಳ್ಳಲು ಅನೇಕ ನಾಯಕರು ಪ್ರಾದೇಶಿಕ, ಜಾತಿ, ಸಂಘಟನೆ, ಹಿರಿತನ ಹೀಗೆ ಅನೇಕ ಮಾನದಂಡಗಳನ್ನು ಇಟ್ಟುಕೊಂಡು ಲಾಬಿ ನಡೆಸುತ್ತಿದ್ದಾರೆ.

ರಾಜ್ಯಸಭೆಯ ಟಿಕೆಟ್ ಜೈರಾಮ್ ರಮೇಶ ಅವರಿಗೆ ಪಕ್ಕಾ ಆಗಿದ್ದು, ಹೀಗಾಗಿ ವಿಧಾನಪರಿಷತ್ ಟಿಕೆಟ್‍ಗೆ ಭಾರೀ ಬೇಡಿಕೆ ಸೃಷ್ಟಿಯಾಗಿದೆ. ಇನ್ನು ವಿಧಾನಪರಿಷತ್‍ಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಸಂಬಂಧ ಕಾಂಗ್ರೆಸ್ ಅಧ್ಯಕ್ಷ(Congress President) ಡಿ.ಕೆ.ಶಿವಕುಮಾರ್(DK Shivkumar)ಮತ್ತು ಪಕ್ಷದ ಶಾಸಕಾಂಗ ನಾಯಕ ಸಿದ್ದರಾಮಯ್ಯ ಈಗಾಗಲೇ ಸಭೆ ನಡೆಸಿದ್ದಾರೆ. ಆದರೆ ಅಂತಿಮ ನಿರ್ಣಯ ತೆಗೆದುಕೊಳ್ಳಲು ಸಾಧ್ಯವಾಗಿಲ್ಲ. ಅಭ್ಯರ್ಥಿ ಆಯ್ಕೆ ಕುರಿತಂತೆ ಸಿದ್ದು-ಡಿಕೆಶಿ ನಡುವೆ ಒಮ್ಮತ ಮೂಡುತ್ತಿಲ್ಲ.

ಇನ್ನು ವಿಧಾನಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಎರಡು ಸ್ಥಾನಗಳನ್ನು ಗೆಲ್ಲಬಹುದು. ಹೀಗಾಗಿ ಒಂದು ಸ್ಥಾನವನ್ನು ಹಿಂದುಳಿದ ವರ್ಗಕ್ಕೂ ಮತ್ತೊಂದು ಸ್ಥಾನವನ್ನು ಮುಸ್ಲಿಮರು ಅಥವಾ ಕ್ರೈಸ್ತರಿಗೆ ನೀಡುವಂತೆ ಸಿದ್ದರಾಮಯ್ಯ ಹೈಕಮಾಂಡ್‍ಗೆ ಮನವಿ ಮಾಡಿದ್ದಾರೆ ಎನ್ನಲಾಗಿದೆ. ಒಂದು ಸ್ಥಾನವನ್ನು ಅಲ್ಪಸಂಖ್ಯಾತ ವರ್ಗಕ್ಕೆ ನೀಡಲೇಬೇಕೆಂದು ಸಿದ್ದರಾಮಯ್ಯ ಹೈಕಮಾಂಡ್ ಮೇಲೆ ಒತ್ತಡ ಹಾಕುತ್ತಿದ್ದಾರೆ.

ಇನ್ನು ಸ್ಥಳೀಯ ಸಂಸ್ಥೆಗಳ ಮೂಲಕ ವಿಧಾನಪರಿಷತ್‍ಗೆ ಆಯ್ಕೆಯಾಗಲು ಟಿಕೆಟ್ ಸಿಗದೇ ಬೇಸರಗೊಂಡಿರುವ ಎಸ್.ಆರ್. ಪಾಟೀಲ್‍ಗೆ ಈ ಬಾರಿ ಟಿಕೆಟ್ ಕೊಡಿಸುವ ನಿಟ್ಟಿನಲ್ಲಿ ಡಿ.ಕೆ.ಶಿವಕುಮಾರ್ ಬಿಗಿ ಪಟ್ಟು ಹಿಡಿದಿದ್ದಾರೆ. ಹಿರಿತನ ಆಧಾರದಲ್ಲಿ ಎಸ್.ಆರ್.ಪಾಟೀಲ್‍ರಿಗೆ ಟಿಕೆಟ್ ನೀಡಬೇಕೆಂದು ಡಿಕೆಶಿ ಒತ್ತಾಯಿಸಿದ್ದಾರೆ. ಇನ್ನು ಕಾಂಗ್ರೆಸ್‍ನಿಂದ ವಿಧಾನಪರಿಷತ್‍ಗೆ ನಿವೇದಿತಾ ಆಳ್ವಾ, ತಿಪ್ಪಣ್ಣ ಕಮಕಾನೂರು, ಎಂ.ಸಿ.ವೇಣುಗೋಪಾಲ.

ಎಂ.ಡಿ.ಲಕ್ಷ್ಮೀನಾರಾಯಣ್, ಮನ್ಸೂರ್ ಅಲಿ ಖಾನ್, ಎಂ.ಆರ್. ಸೀತಾರಾಮ್, ಆಸ್ಕರ್ ಫರ್ನಾಡಿಸ್ ಪುತ್ರಿ ಹೆಸರು ಅಂತಿಮವಾಗಿದೆ ಎನ್ನಲಾಗಿದೆ. ಅದೇ ರೀತಿ ರಾಜ್ಯಸಭೆಗೆ ಹಾಲಿ ಸಂಸದ ಜೈರಾಮ್ ರಮೇಶ್ ಹೆಸರು ಬಹುತೇಕ ಅಂತಿಮವಾಗಿದೆ.

Exit mobile version