ರಾಹುಲ್ ಗಾಂಧಿಯವರು ಸಾಧನೆಯ ಮೂಲಕ ಈ ಪದವಿಯನ್ನು ಗಳಿಸಿದ್ದಾರೆ – ರಾಗಾ ಕುರಿತು ಸಿಎಂ ಸಿದ್ದು ಮಾತು

Bengaluru: ಸೇಡಿನ ರಾಜಕಾರಣ ಮತ್ತು ನಿರಂತರವಾದ ವೈಯಕ್ತಿಕ ಚಾರಿತ್ರ್ಯಹನನವನ್ನು ಎದುರಿಸುತ್ತಲೇ ತನ್ನ ದಣಿವರಿಯದ ಹೋರಾಟದ ಮೂಲಕ ಸರ್ವಾಧಿಕಾರಿ ಆಡಳಿತದಿಂದ ದೇಶವನ್ನು ರಕ್ಷಿಸಿದ ರಾಹುಲ್ ಗಾಂಧಿ ಯವರು ಸಾಧನೆಯ ಮೂಲಕ ಈ ಪದವಿಯನ್ನು ಗಳಿಸಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಅಭಿಪ್ರಾಯಪಟ್ಟಿದ್ದಾರೆ.

Politics

ಲೋಕಸಭೆಯ ವಿರೋಧ ಪಕ್ಷದ ನಾಯಕನಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಆಯ್ಕೆಯ ಕುರಿತು ಪ್ರಕ್ರಿಯಿಸಿರುವ ಅವರು, ರಾಹುಲ್ ಗಾಂಧಿಯವರು ಲೋಕಸಭೆಯ ವಿರೋಧ ಪಕ್ಷದ ಸ್ಥಾನವನ್ನು ಸ್ವೀಕರಿಸಬೇಕೆಂದು ನಾನು ಕೂಡ ಸಲಹೆ ನೀಡಿದ್ದೆ. ರಾಹುಲ್ ಗಾಂಧಿ ಅವರು ಈ ಜವಾಬ್ದಾರಿಯನ್ನು ವಹಿಸಿಕೊಂಡಿರುವುದು ದೇಶದ ಹಿತದೃಷ್ಟಿಯಿಂದ ಒಳ್ಳೆಯದು. ಬಿಜೆಪಿ ಹಾಗೂ ನರೇಂದ್ರ ಮೋದಿ (Narendra Modi) ಅವರನ್ನು ಎದುರಿಸಲು ಅವರು ಅತ್ಯಂತ ಸೂಕ್ತ ವ್ಯಕ್ತಿ.

ರಾಹುಲ್ ಗಾಂಧಿ (Rahul Gandhi)ಅವರು ವಿಪಕ್ಷ ನಾಯಕ ಸ್ಥಾನದ ಜವಾಬ್ದಾರಿಯನ್ನು ವಹಿಸಿಕೊಂಡಿರುವುದು ದೇಶದ ಹಿತದೃಷ್ಟಿಯಿಂದ ಒಳ್ಳೆಯದು. ರಾಹುಲ್ ಗಾಂಧಿಯವರು ಲೋಕಸಭೆಯ ವಿರೋಧ ಪಕ್ಷದ ಸ್ಥಾನವನ್ನು ಸ್ವೀಕರಿಸಬೇಕೆಂದು ನಾನು ಕೂಡ ಸಲಹೆ ನೀಡಿದ್ದೆ.

ನರೇಂದ್ರ ಮೋದಿ ಅವರನ್ನು ಎದುರಿಸಬೇಕಾದರೆ ನೀವೇ ವಿರೋಧಪಕ್ಷದ ನಾಯಕರಾಗಬೇಕೆಂಬುದು ನನ್ನ ಹಾಗೂ ಕಾರ್ಯಕಾರಿಣಿ ಸಮಿತಿಯ ಒತ್ತಾಯವಾಗಿತ್ತು. ಆ ಹುದ್ದೆ ಅಲಂಕರಿಸಿರುವುದಕ್ಕೆ ಅವರಿಗೆ ತುಂಬು ಹೃದಯದ ಅಭಿನಂದನೆಗಳು.

ಸೇಡಿನ ರಾಜಕಾರಣ ಮತ್ತು ನಿರಂತರವಾದ ವೈಯಕ್ತಿಕ ಚಾರಿತ್ರ್ಯಹನನವನ್ನು ಎದುರಿಸುತ್ತಲೇ ತನ್ನ ದಣಿವರಿಯದ ಹೋರಾಟದ ಮೂಲಕ ಸರ್ವಾಧಿಕಾರಿ ಆಡಳಿತದಿಂದ ದೇಶವನ್ನು ರಕ್ಷಿಸಿದ ರಾಹುಲ್ ಗಾಂಧಿಯವರು ಸಾಧನೆಯ ಮೂಲಕ ಈ ಪದವಿಯನ್ನು ಗಳಿಸಿದ್ದಾರೆ. ಸೈದ್ಧಾಂತಿಕ ಬದ್ಧತೆ, ದೂರದರ್ಶಿತ್ವ ಮತ್ತು ಜನಪರ ಕಾಳಜಿಯ ರಾಹುಲ್ ಗಾಂಧಿಯವರು ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿ ಆಡಳಿತ ಪಕ್ಷಕ್ಕೆ ಸಿಂಹ ಸ್ವಪ್ನರಾಗಲಿದ್ದಾರೆ ಎಂದು ಹೇಳಿದ್ದಾರೆ.

Exit mobile version