ಸಿದ್ದರಾಮಯ್ಯನವರ ಬಾಡಿ ಲಾಂಗ್ವೇಜ್ನಿಂದಲೇ ಪಕ್ಷಕ್ಕೆ ಸಮಸ್ಯೆಯಾಗಬಹುದು ; ರಾಹುಲ್‌ಗಾಂಧಿ ತಂಡದ ಸಲಹೆಗೆ ಸಿದ್ದು ಸಿಡಿಮಿಡಿ

Bengaluru : ಮುಂಬರುವ ವಿಧಾನಸಬಾ ಚುನಾವಣೆಯ ಹಿನ್ನಲೆಯಲ್ಲಿ ಕಾಂಗ್ರೆಸ್‌ನಾಯಕ ರಾಹುಲ್‌ಗಾಂಧಿ (Siddaramaih Vs Rahul gandhi) ನೇತೃತ್ವದ ತಂಡವೊಂದು ರಾಜ್ಯದಲ್ಲಿ ಚುನಾವಣಾ ಸಮೀಕ್ಷೆ ನಡೆಸುತ್ತಿದೆ.

ಕರ್ನಾಟಕದಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಅನುಕೂಲಕರ ವಾತಾವರಣವಿದೆ.

ಹೀಗಾಗಿ ಪಕ್ಷದ ನಾಯಕರೆಲ್ಲರೂ ಒಟ್ಟಾಗಿ ಚುನಾವಣೆ ಎದುರಿಸಿದರೆ, ಕರ್ನಾಟಕದಲ್ಲಿ ಕಾಂಗ್ರೆಸ್‌ (Siddaramaih Vs Rahul gandhi) ಮತ್ತೆ ಅಧಿಕಾರಕ್ಕೆ ಬರುವ ಸಾಧ್ಯತೆ ಹೆಚ್ಚಿದೆ.

ಆದರೆ ಈ ಸಮೀಕ್ಷೆಯಲ್ಲಿ ಕೆಲವು ಮಹತ್ವದ ವಿಷಯಗಳ ಕುರಿತು ಸಮೀಕ್ಷೆಯ ತಂಡ ರಾಹುಲ್‌ಗಾಂಧಿ ಅವರಿಗೆ ಮಾಹಿತಿ ನೀಡಿದೆ.

ಅದರಲ್ಲಿ ಮುಖ್ಯವಾಗಿ ವಿಪಕ್ಷ ನಾಯಕ ಸಿದ್ದರಾಮಯ್ಯನವರ ಬಾಡಿ ಲಾಂಗ್ವೇಜ್‌ ಕುರಿತು ಸಮೀಕ್ಷಾ ತಂಡ ಕೆಲವು ಸಲಹೆಗಳನ್ನು ನೀಡಿದೆ.

ಸಮೀಕ್ಷೆ ತಂಡ ನೀಡಿರುವ ಸಲಹೆ : ಸಿದ್ದರಾಮಯ್ಯನವರು ಹಿಂದುತ್ವದ ವಿಚಾರ ಬಂದಾಗ ಅಳೆದು ತೂಗಿ ಮಾತನಾಡಬೇಕು. ಉಡಾಫೆಯಾಗಿ ಮಾತನಾಡುವ ರೀತಿಯಲ್ಲಿ ಮಾತನಾಡಿದರೆ,

https://fb.watch/hgcNfH6szO/ ಗರ್ಭವತಿಯಾದ ರೋಬೋಟ್! ವಿಜ್ಞಾನ ಜಗತ್ತಿನ ಅಚ್ಚರಿ! Please share to All.

ಅದರ ಪರಿಣಾಮ ಕಾಂಗ್ರೆಸ್‌ ಪಕ್ಷದ ಮೇಲಾಗುತ್ತದೆ. ಸಿದ್ದರಾಮಯ್ಯ ಜನಪ್ರಿಯ ನಾಯಕ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ.


ಆದರೆ ಕೆಲ ವಿಚಾರಗಳ ಕುರಿತು ಮಾತನಾಡುವಾಗ ಅವರು ಬಳಸುವ ಬಾಡಿ ಲಾಂಗ್ವೇಜ್ನಿಂದ ಪಕ್ಷಕ್ಕೆ ಸಮಸ್ಯೆಯಾಗಬಹುದು.

ಕಳೆದ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಇದನ್ನೇ ಇಟ್ಟುಕೊಂಡು ಬಿಜೆಪಿ (BJP) ಅಪಪ್ರಚಾರ ನಡೆಸಿ, ಯಶಸ್ವಿಯಾಗಿತ್ತು.

ಧಾರ್ಮಿಕ ವಿಷಯಗಳ ಕುರಿತು ಮಾತನಾಡುವ ವೇಳೆ ಸಾಧ್ಯವಾದಷ್ಟು ತಟಸ್ಥ ನೀತಿಯನ್ನು ಅನುಸರಿಸುವುದು ಒಳ್ಳೆಯದು ಎಂದು ರಾಹುಲ್‌ಗಾಂಧಿ ತಂಡ ಸಿದ್ದರಾಮಯ್ಯನವರಿಗೆ ಸಲಹೆ ನೀಡಿದೆ.

https://vijayatimes.com/shiv-sena-smeared-karnataka-buses/

ಆದರೆ ಈ ಸಲಹೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಸಿಡಿಮಿಡಿಗೊಂಡಿದ್ದಾರೆ ಎನ್ನಲಾಗಿದೆ.

ಇನ್ನು ಈ ಸಲಹೆಗೆ ಸಿದ್ದರಾಮಯ್ಯ ಸಿಡಿಮಿಡಿಗೊಂಡಿದ್ದು, ಚುನಾವಣೆಗೂ, ನನ್ನ ಬಾಡಿ ಲಾಂಗ್ವೇಜ್ಗೂ ಏನು ಸಂಬಂಧ? ನಾನು ಅನೇಕ ವರ್ಷಗಳಿಂದ ರಾಜಕೀಯದಲ್ಲಿದ್ದೇನೆ.

ಈ ರೀತಿಯ ಸಲಹೆಯನ್ನು ನಾನು ಒಪ್ಪುವುದಿಲ್ಲ. ನಾನು ಈಗ ಹೇಗಿದ್ದೇನೋ ಮುಂದೆಯೂ ಹಾಗೆಯೇ ಇರುತ್ತೇನೆ. ಚುನಾವಣೆಗಾಗಿ ನಾನು ಬದಲಾವಣೆ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ ಎನ್ನಲಾಗಿದೆ.
Exit mobile version