ಸಿಮ್ ಕಾರ್ಡ್ ಹೊಸ ನಿಯಮ: ಇಂದಿನಿಂದ ರೂಲ್ಸ್ ಬ್ರೇಕ್ ಮಾಡಿದ್ರೆ 10 ಲಕ್ಷ ದಂಡ

ಡಿಸೆಂಬರ್ (December) 1, 2023 ರಿಂದ ಹೊಸ ಸಿಮ್ ಕಾರ್ಡ್ ನಿಯಮಗಳನ್ನು ಜಾರಿಗೆ ತರುತ್ತಿದ್ದು, ದೂರಸಂಪರ್ಕ ಇಲಾಖೆ, ನಕಲಿ ಸಿಮ್ ಕಾರ್ಡ್‌ಗಳಿಗೆ ಸಂಬಂಧಿಸಿದ ವಂಚನೆಗಳನ್ನು ತಡೆಗಟ್ಟಲು ನಕಲಿ ಸಿಮ್ ಕಾರ್ಡ್‌ಗಳಿಗೆ ಲಿಂಕ್ (Sim Card Link) ಮಾಡಲಾದ ವಂಚನೆಗಳನ್ನು ಪರಿಹರಿಸಲು ಈ ನಿಯಮಗಳನ್ನು ರೂಪಿಸಲಾಗಿದ್ದು, ಒಂದು ವೇಳೆ ಅನುಸರಿಸದಿದ್ದಲ್ಲಿ ದಂಡ ಮತ್ತು ಜೈಲು ಶಿಕ್ಷೆಗೆ ಒಳಗಾಗುವ ಸಾಧ್ಯತೆ ಇದೆ.

ದೂರಸಂಪರ್ಕ ಇಲಾಖೆಯ ಈ ನಿಯಮವನ್ನು ಪಾಲಿಸದಿದ್ದರೆ 10 ಲಕ್ಷ ರೂಪಾಯಿಗಳವರೆಗೆ ದಂಡ ಕಟ್ಟಬೇಕು. ದೇಶದಲ್ಲಿ ಹೆಚ್ಚುತ್ತಿರುವ ಸಿಮ್ ಕಾರ್ಡ್ ವಂಚನೆ ದರವನ್ನು ತಡೆಯಲು ಸರ್ಕಾರದಿಂದ ಈ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ನಕಲಿ ಸಿಮ್ ಕಾರ್ಡ್‌ಗಳ ಮಾರಾಟವನ್ನು ತಡೆಯಲು ಮಾರಾಟಗಾರರಿಗೆ ಈ ನಿಯಮ ತಂದಿದ್ದರೂ, ಇದು ಖರೀದಿದಾರರ ಮೇಲೂ ಪರಿಣಾಮ ಬೀರುತ್ತದೆ. ಬಹಳ ದಿನಗಳಿಂದ ಬರುತ್ತಿರುವ ದೂರುಗಳಿಗೂ ಸ್ವಲ್ಪ ಮಟ್ಟಿಗೆ ಪರಿಹಾರ ದೊರೆಯಲಿದೆ.

ದಿನದಿಂದ ದಿನಕ್ಕೆ ಪ್ರಿ-ಆಕ್ಟಿವೇಟೆಡ್ (Free Activated) ಸಿಮ್ ಕಾರ್ಡ್‌ಗಳು ದೇಶದಲ್ಲಿ ಮಾರಾಟವಾಗುತ್ತಿದ್ದು, ಹೆಚ್ಚಿನ ಸಂದರ್ಭಗಳಲ್ಲಿ, ಆ ಸಿಮ್‌ಗಳನ್ನು ಬೇರೆಯವರ ಹೆಸರಿನಲ್ಲಿ ನೋಂದಾಯಿಸಲಾಗಿದೆ. ಈಗ ಸಿಮ್ ಕಾರ್ಡ್ ಮಾರಾಟವನ್ನು ಕಟ್ಟುನಿಟ್ಟಾಗಿ ಮಾಡಲು ಸಾಧ್ಯವಾದರೆ, ಅಂತಹ ವಂಚನೆಯ ಪ್ರಕರಣಗಳು ಕಡಿಮೆಯಾಗುತ್ತವೆ ಎಂದು ಸರ್ಕಾರ ಹೇಳಿದೆ.

ಹೊಸ ನಿಯಮವು ಜಾರಿಗೆ ಬಂದ ನಂತರ, ಮಾರಾಟಗಾರರು ಪೂರ್ವ-ಸಕ್ರಿಯಗೊಳಿಸಿದ ಸಿಮ್‌ಗಳನ್ನು ಇತರರಿಗೆ ವರ್ಗಾಯಿಸಲು ಸಾಧ್ಯವಾಗುವುದಿಲ್ಲ. ಇದರಿಂದಾಗಿ ಸಿಮ್ ಕಾರ್ಡ್ ಮಾರಾಟ ಮಾಡುವ ಮಾರಾಟಗಾರರ ಮೇಲೆ ನಿಗಾ ಇಡುವ ಮೂಲಕ ಗ್ರಾಹಕರ ಸಮಸ್ಯೆಗೆ ಅಂತ್ಯ ಹಾಡಲು ದೂರಸಂಪರ್ಕ ಇಲಾಖೆ (ಡಿಒಟಿ) ಮುಂದಾಗಿದೆ.

ಸಿಮ್ ಮಾರಾಟಗಾರನು ತನ್ನ ಅಂಗಡಿ ಸಿಬ್ಬಂದಿಯ ಎಲ್ಲಾ ಮಾಹಿತಿಯ ದಾಖಲೆಯನ್ನು ಇಟ್ಟುಕೊಳ್ಳಬೇಕು. ಅಂಗಡಿ ಸಿಬ್ಬಂದಿ ಕೂಡ ಪೊಲೀಸ್ ಪರಿಶೀಲನೆಗೆ ಹೋಗಬೇಕಾಗುತ್ತದೆ. DoT ನ ಹೊಸ ನಿಯಮಗಳ ಪ್ರಕಾರ, ಕಾರ್ಪೊರೇಟ್ ID ಸಂಖ್ಯೆ ಅಥವಾ CIN ಸಂಖ್ಯೆಯನ್ನು ಪ್ರತಿ SIM ಕಾರ್ಡ್ ಅಂಗಡಿಗೆ (ಚಿಲ್ಲರೆ) ನೀಡಲಾಗುತ್ತದೆ. ಈ ತುರ್ತು ಸಂಖ್ಯೆ ಇಲ್ಲದೆ ಯಾರೂ ಸಿಮ್ ಕಾರ್ಡ್ ಅನ್ನು ಮಾರಾಟ ಮಾಡಲು ಸಾಧ್ಯವಿಲ್ಲ.

DoT ಅಡಿಯಲ್ಲಿ ನೋಂದಾಯಿಸಲು ಚಿಲ್ಲರೆ ಅಂಗಡಿಯು ಆಧಾರ್, PAN, ಪಾಸ್‌ಪೋರ್ಟ್ ಮತ್ತು GST ವಿವರಗಳನ್ನು ಒದಗಿಸಬೇಕಾಗಿದೆ. ನೋಂದಣಿ ಇಲ್ಲದೆ ಯಾವುದೇ ಅಂಗಡಿಯು ಸಿಮ್ ಕಾರ್ಡ್ ಅನ್ನು ಮಾರಾಟ ಮಾಡಲು ಸಾಧ್ಯವಿಲ್ಲ. ಈ ನೋಂದಣಿ ಇಲ್ಲದೆ ಅಂಗಡಿಯು ಸಿಮ್ ಕಾರ್ಡ್‌ಗಳನ್ನು ಮಾರಾಟ ಮಾಡಿದರೆ, ಅದರ ಐಡಿಯನ್ನು ನಿರ್ಬಂಧಿಸಲಾಗುತ್ತದೆ.

ಇನ್ನು ಒಂದುವೇಳೆ ಒಬ್ಬ ವ್ಯಕ್ತಿಯು ಸಿಮ್ ಕಾರ್ಡ್ ಅನ್ನು ಕಳೆದುಕೊಂಡರೆ ಅಥವಾ ಸಿಮ್ ಕಟ್ (Sim Cut) ಆದರೆ, ಅವನು ಪರಿಶೀಲನೆ ಪ್ರಕ್ರಿಯೆಯ ಮೂಲಕವೇ ಹೋಗಬೇಕಾಗುತ್ತದೆ. ಸಿಮ್ ಕಾರ್ಡ್‌ಗಳನ್ನು ಮಾರಾಟ ಮಾಡಲು ಈ ನಿಯಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸಲು ಜಿಯೋ, ಏರ್ಟೆಲ್ (Airtel), ವಿ, ಬಿಎಸ್​ಎನ್​ಎಲ್​ಗೆ ನಿರ್ದೇಶನ ನೀಡಲಾಗಿದೆ.

ಭವ್ಯಶ್ರೀ ಆರ್.ಜೆ

Exit mobile version