ಸಿಂಧೂ ನಡವಳಿಕೆ ಭಾವುಕಗೊಳಿಸಿತು: ಚೀನಾ ಒಲಿಂಪಿಕ್ ಬ್ಯಾಡ್ಮಿಂಟನ್‌ ಆಟಗಾರ್ತಿ

ಟೋಕಿಯೋ, ಅ. 02: ಚೀನಾ ತೈಪೆಯ ತೈ ತ್ಝು ಯಿಂಗ್ ವಿರುದ್ಧ ಟೋಕಿಯೋ ಒಲಂಪಿಕ್ಸ್ ನ ಮಹಿಳೆಯರ ಸಿಂಗಲ್ಸ್ ಬ್ಯಾಡ್ಮಿಂಟನ್ ಸೆಮಿಪಫೈನಲ್ ನಲ್ಲಿ ಕಂಚಿನ ಪದಕ ಪಡೆದ ಭಾರತೀಯ ಸ್ಟಾರ್ ಆಟಗಾರ್ತಿ ಪಿ ವಿ ಸಿಂಧು, ಸೋತ ಬಳಿಕವೂ ವಿಶ್ವದ ನಂ. 1 ಶಟಲ್ ಪ್ಲೇಯರ್ ತೈ ತ್ಝು ಯಿಂಗ್ ಅವರಿಗೆ ಚೀನಾದ ಚೆನ್ ಯುಫೈ ವಿರುದ್ಧ ಫೈನಲ್ ಪಂದ್ಯದಲ್ಲಿ ಆಡಲು ಅಗತ್ಯ ಸ್ಥೈರ್ಯ ನೀಡಿದರೆಂದು ತೈ ತ್ಝು ಯಿಂಗ್ ಇನ್ಸ್ಟಾಗ್ರಾಮ್ ನಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಗೋಲ್ಡ್ ಮೆಡಲ್ ಗೆಲ್ಲುವ ಅವಕಾಶ ತಪ್ಪುವಾಗ ಆಗುವ ಮುಜುಗರ ಹಾಗೂ ಅದರಿಂದ ಹೊರಬರಲು ಬೇಕಾಗಿರುವ ಪ್ರೋತ್ಸಾಹವನ್ನು ನನಗೆ ಸಿಂದಧು ನೀಡಿದರೆಂದು ಯಿಂಗ್ ಹೇಳಿದರು.

ಫೈನಲ್‌ನಲ್ಲಿ 18-21, 21-19, 18-21 ರಿಂದ ಯುಫೈ ವಿರುದ್ಧ ಸೋತ ಯಿಂಗ್ ಕಠಿಣ ಎದುರಾಳಿಯಾಗಿದ್ದರು. ಮ್ಯಾಚ್ ಮುಗಿದ ನಂತರ ನನ್ನ ಪ್ರದರ್ಶನ ನನಗೆ ಸಮಾಧಾನ ತಂದಿತ್ತು. ನಂತರ ಸಿಂಧು ಓಡಿ ಬಂದು ನನ್ನನ್ನು ತಬ್ಬಿ, ನೀನು ಈಗ ಸಮಾದಧಾನವಾಗಿಲ್ಲ ಅಂತ ಗೊತ್ತು, ಇವತ್ತು ನೀನು ಬಹಳ ಚೆನ್ನಾಗಿ ಆಡಿದ್ದೀಯಾ, ಆದರೆ ಇವತ್ತು ನಿನ್ನ ದಿನವಾಗಿರಲಿಲ್ಲ ಎಂದು ಹೇಳುತ್ತಾ ನನ್ನ ಕೈ ಹಿಡಿದುಕೊಂಡರು. ಈ ಪ್ರೋತ್ಸಾಹ ನನ್ನನ್ನು ಭಾವುಕಳಾಗಿಸಿತು, 5 ವರ್ಷಗಳ ನನ್ನ ಆಟದಲ್ಲಿ ಇನ್ನಷ್ಟು ಒಳ್ಳೆ ಪ್ರದರ್ಶನ ನೀಡುವೆ ಎಂದು ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ.

ಸಿಂಧು ಮೊದಲ ಬಾರಿ 2006ರ ರಿಯೋ ಒಲಂಪಿಕ್ ನಲ್ಲಿ ಸ್ಪೈನ್ ನ ಕ್ಯಾರೊಲಿನಾ ಮರಿನ್ ವಿರುದ್ಧ ಫೈನಲ್ ಪಂದ್ಯದಲ್ಲಿ ಬೆಳ್ಳಿ ಪದಕ ಗೆದ್ದಿದ್ದ ಅವರು ಈ ಬಾರಿ ಹೀ ಬಿಂಗ್ ಜಿಯಾಒ ಅವರನ್ನು ಸೋಲಿಸಿ ಕಂಚಚನ್ನು ಗೆದ್ದು, ನಿರಂತರವಾಗಿ 2 ಒಲಂಪಿಕ್ ಪದಕ ಪಡೆದ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಈ ಮ್ಯಾಚ್ ಗಾಗಿ ನಾನು ನನ್ನ ಎಲ್ಲಾ ಶಕ್ತಿ, ಸಾಮರ್ಥ್ಯವನ್ನು ಬಳಸಿದ್ದೇನೆ. ನಾನು ದೇಶಕ್ಕಾಗಿ ಮೆಡಲ್ ಪಡೆದಿರುವುದು ನನಗೆ ಮಾತ್ರವಲ್ಲದೇ ಜನರಿಗೂ ಹೆಮ್ಮೆ ತಂದಿದೆಯೆಂದು ಭಾವಿಸಿದ್ದೇನೆಂದು ಅವರು ಹೇಳಿಕೊಂಡಿದ್ದಾರೆ.

Exit mobile version