ಸಿಂಗರ್ ಆದ ಅಂಬಾರ್..!

ಹೌದು, ನಟ ಪೃಥ್ವಿ ಅಂಬಾರ್ ಅವರು ಗಾಯಕರಾಗಿದ್ದಾರೆ! ಆದರೆ ಅವರು ಗಾನಾಲಾಪನೆ ಮಾಡಿರುವುದು ಅವರೇ ನಾಯಕರಾಗಿ ನಟಿಸುತ್ತಿರುವ ಚಿತ್ರಕ್ಕಾಗಿ. ಚಿತ್ರದ ಹೆಸರು `ಲೈಫ್ ಈಸ್ ಬ್ಯೂಟಿಫುಲ್’.

ದಿಯಾ ಚಿತ್ರದ ಮೂಲಕ ಜನಪ್ರಿಯರಾದ ನಾಯಕ ಪೃಥ್ವಿ ಅಂಬಾರ್. ಅವರ ನಟನೆಯ ಬಗ್ಗೆ ಎಲ್ಲೆಡೆಯಿಂದ ಪ್ರಶಂಸೆ ದೊರಕಿತ್ತು. ಇದೀಗ ಗಾನದಿಂದ ಗುಣಗಾನ ಪಡೆಯಲು ಸಜ್ಜಾಗಿದ್ದಾರೆ. ಅವರೇ ಹೇಳುವಂತೆ ಸಂಗೀತ ಅಭ್ಯಾಸ ಮಾಡಿದವರಲ್ಲ. ಆದರೆ ಹಾಡಿನ ಬಗ್ಗೆ ಒಲವು ಇರಿಸಿಕೊಂಡವರು. ಹಾಗಾಗಿಯೇ ಅವಕಾಶ ಸಿಕ್ಕಾಗಲೆಲ್ಲ ಆರ್ಕೆಸ್ಟ್ರಾದಲ್ಲಿ ಹಾಡಿದ ಅನುಭವ ಇತ್ತು. ಮೈಕಲ್ ಜಾಕ್ಸನ್ ನಿಂದ ಪ್ರಭಾವಿತಗೊಂಡು ನಟನಾಗಿರುವ ಕಾರಣ ಡಾನ್ಸ್, ಹಾಡು ಜೊತಯಲ್ಲೇ ಬಂದಿತ್ತು! ನೊಬಿನ್ ಪೌಲ್ ಸ್ವರ ಸಂಯೋಜನೆಗೆ ಪೃಥ್ವಿ ಅಂಬಾರ್ ಕಂಠ ನೀಡಿದಾಗ ಚಿತ್ರತಂಡ ಮೆಚ್ಚಿಕೊಂಡಿದೆ. ಉತ್ತಮವಾಗಿ ಹಾಡುತ್ತಾರೆ ಎನ್ನುವ ಕಾರಣದಿಂದಲೇ ಹಾಡುವಂತೆ ಒತ್ತಾಯ ಮಾಡಿದ್ದಾಗಿ ಸಂಗೀತ ನಿರ್ದೇಶಕ ನೊಬಿನ್ ಹೇಳುತ್ತಾರೆ.

ಅರುಣ್ ಕುಮಾರ್ ಎಂ ಮತ್ತು ಸಾಬು ಅಲೋಶಿಯಸ್ ಜಣಡಿಯಾಗಿ ನಿರ್ದೇಶನ ಮಾಡಿರುವ ಈ ಚಿತ್ರಕ್ಕೆ ಕಿಶೋರ್ ನರಸಿಂಹಯ್ಯ ನಿರ್ಮಾಪಕರಾಗಿದ್ದಾರೆ. ಪ್ರೈಡ್ ಫಿಲ್ಮ್ಸ್ ಮತ್ತು ಸಿಲ್ವರ್ ಟ್ರೇನ್ ಇಂಟರ್ ನ್ಯಾಶನಲ್ ಸಹಯೋಗದೊಂದಿಗೆ ಸಿನಿಮಾದ ನಿರ್ಮಾಣವಾಗಿದೆ.

Exit mobile version