ಮುಟ್ಟು ಅಂಗವೈಕಲ್ಯವಲ್ಲ, ಮುಟ್ಟಿನ ರಜೆ ಬೇಕಿಲ್ಲ – ಸಚಿವೆ ಸ್ಮೃತಿ ಇರಾನಿ

New Delhi: ಮಹಿಳೆಯರ ನೈಸರ್ಗಿಕ ಪ್ರಕ್ರಿಯೆಯಾಗಿರುವ ಮುಟ್ಟು ಅಂಗವೈಕಲ್ಯವಲ್ಲ. ಹೀಗಾಗಿ ಮುಟ್ಟಿನ (Smriti Irani about Menstrual Leave) ದಿನದಂದು ರಜೆ ನೀಡಬೇಕಾದ ಅಗತ್ಯವಿಲ್ಲ

ಎಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಸ್ಮೃತಿ ಇರಾನಿ (Smruthi Irani) ಅವರು ಹೇಳಿದ್ದಾರೆ.

ದೇಶದಲ್ಲಿ ಮುಟ್ಟಿನ ನೈರ್ಮಲ್ಯ ನೀತಿಯ ಕುರಿತು ಮೇಲ್ಮನೆಯಲ್ಲಿ ರಾಷ್ಟ್ರೀಯ ಜನತಾ ದಳ (Rashtriya Janata Dal) ಸದಸ್ಯ ಮನೋಜ್ ಕುಮಾರ್ ಝಾ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು,

ಋತುಚಕ್ರವು ಅಂಗವೈಕಲ್ಯವಲ್ಲ, ಇದು ಮಹಿಳೆಯರ ಜೀವನ ಪಯಣದ ಸಹಜ ಭಾಗವಾಗಿದೆ. ಮುಟ್ಟಾಗದ ಯಾರಾದರೂ ಮುಟ್ಟಿನ ಬಗ್ಗೆ ನಿರ್ದಿಷ್ಟ ದೃಷ್ಟಿಕೋನವನ್ನು ಹೊಂದಿದ್ದಾರೆ ಎಂಬ ಕಾರಣಕ್ಕಾಗಿ

ಮಹಿಳೆಯರಿಗೆ ಸಮಾನ ಅವಕಾಶಗಳನ್ನು ನಿರಾಕರಿಸುವ (Smriti Irani about Menstrual Leave) ಸಮಸ್ಯೆಗಳನ್ನು ನಾವು ಪ್ರಸ್ತಾಪಿಸಬಾರದು.

ಕಳೆದ ವಾರ, ಕಾಂಗ್ರೆಸ್ ಸಂಸದ ಶಶಿ ತರೂರ್ (Shashi Taruru) ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ್ದ ಸ್ಮೃತಿ ಇರಾನಿ ಅವರು, “ಎಲ್ಲಾ ಕೆಲಸದ ಸ್ಥಳಗಳಿಗೆ ಪಾವತಿಸಿದ ಮುಟ್ಟಿನ ರಜೆ

(Menstrual leave)ಯನ್ನು ಕಡ್ಡಾಯಗೊಳಿಸುವ ಯಾವುದೇ ಪ್ರಸ್ತಾವನೆ ಸರ್ಕಾರದ ಪರಿಗಣನೆಯಲ್ಲಿ ಇಲ್ಲ” ಎಂದು ಲೋಕಸಭೆಗೆ ತಿಳಿಸಿದ್ದರು.

ಇನ್ನು ಸಚಿವೆ ಸ್ಮೃತಿ ಇರಾನಿ ಅವರು ನೀಡಿರುವ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ರಾಜ್ಯ ಕಾಂಗ್ರೆಸ್ , ಬಿಜೆಪಿ (Congress) ತನ್ನ ಪಕ್ಷದ ಮಹಿಳೆಯರಲ್ಲೂ ಮಹಿಳಾ ವಿರೋಧಿ ಧೋರಣೆಯನ್ನು

ತುಂಬುತ್ತದೆ. ಮಹಿಳೆಯರು ಅನುಭವಿಸುವ ಋತುಚಕ್ರದ ನೋವು, ಮಾನಸಿಕ ಹಾಗೂ ದೈಹಿಕ ಅಸಮತೋಲನವು ಸ್ವತಃ ಮಹಿಳೆಯಾಗಿರುವ ಸ್ಮೃತಿ ಇರಾನಿಯವರಿಗೆ ಅರ್ಥವಾಗಿಲ್ಲ ಎಂದರೆ ಬಿಜೆಪಿ

(BJP) ಅವರನ್ನು ಅದೆಷ್ಟು ಸಂವೇದನಾ ಶೂನ್ಯರನ್ನಾಗಿಸಿರಬಹುದು.

ಮಹಿಳೆಯರಿಗೆ ವೇತನಸಹಿತ ಋತುಚಕ್ರದ ರಜೆ ನೀಡಬಾರದು ಎಂದಿರುವ ಸ್ಮೃತಿ ಇರಾನಿ ಸಮಸ್ತ ಮಹಿಳೆಯರಲ್ಲಿ ಕ್ಷಮೆ ಕೇಳಬೇಕು ಎಂದು ಟೀಕಿಸಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿ, ಕಾಮಾಲೆ

ಕಣ್ಣಿನವರಿಗೆ ಕಾಣುವುದೆಲ್ಲ ಹಳದಿ ಎಂಬಂತೆ ಮಹಿಳಾ ವಿರೋಧಿ ಕಾಂಗ್ರೆಸ್ಗೆ ಎಲ್ಲರೂ ಹಾಗೆಯೇ ಕಾಣುವುದರಲ್ಲಿ ಆಶ್ಚರ್ಯವೇನಿಲ್ಲ. ಇಷ್ಟಕ್ಕೂ ಮಹಿಳೆಯರ ಸ್ವಾಭಿಮಾನದ ರಕ್ಷಣೆಯ ಬಗೆಗಿನ ಸಚಿವರ

ಹೇಳಿಕೆಯನ್ನು ತಿರುಚಿ ವಿಕೃತ ಆನಂದ ಪಡೆಯುವ ಕಾಂಗ್ರೆಸ್ ಮಾನಸಿಕತೆ ವಾಕರಿಕೆ ತರಿಸುತ್ತದೆ.

ಅಂದ ಹಾಗೆ ರಾಜ್ಯ ಕಾಂಗ್ರೆಸ್ ಕಛೇರಿಯಲ್ಲಿ ಸೂಕ್ಷ್ಮತೆಯಿಂದ ಭಾಷಾಂತರ ಮಾಡುವವರ, ಅನುವಾದಕರ ಕೊರತೆ ಇದ್ದ ಹಾಗಿದೆ. ಬೇಕಿದ್ದರೆ ಅವರನ್ನು ಕಳಿಸಿಕೊಡುವ ಕೆಲಸ ಮಾಡುತ್ತೇವೆ, ಹಾಗಾದರೂ

ಮಹಿಳೆಯರ ಅಪಮಾನ ಮಾಡುವುದನ್ನು ಅವರು ನಿಲ್ಲಿಸಲಿ ಎಂದಿದೆ.

ಇದನ್ನು ಓದಿ: ಹೊಸ ವರ್ಷಕ್ಕೆ ಹಾಲು, ಮೊಸರು ದರ ಏರಿಕೆ: ಸುಳಿವು ನೀಡಿದ ರಾಜ್ಯ ಸರ್ಕಾರ

Exit mobile version