ಬಾಲ್ಯವಿವಾಹದಿಂದ ಶೋಷಣೆಗೊಳಗಾದ ಸಂತ್ರಸ್ತೆಯನ್ನು ತಬ್ಬಿಕೊಂಡು ಧೈರ್ಯ ತುಂಬಿದ ಸಚಿವೆ ಸ್ಮೃತಿ ಇರಾನಿ

New Delhi : ಕೇಂದ್ರ ಸಚಿವೆ (Union Minister) ಸ್ಮೃತಿ ಇರಾನಿ (Smrithi Irani) ಅವರು ಇತ್ತೀಚೆಗೆ ರಾಷ್ಟ್ರ ರಾಜಧಾನಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ, ಯುವತಿಯೊಬ್ಬಳಿಗೆ ಸಾಂತ್ವನ ಹೇಳಿದರು.

ತನ್ನ ಬಾಲ್ಯ ವಿವಾಹದ (Child Marriage) ಭಯಾನಕತೆಯನ್ನು ನೆನಪಿಸಿಕೊಳ್ಳುತ್ತಾ, ದುಃಖದಿಂದ ಉಸಿರುಗಟ್ಟಿದ 18 ವರ್ಷದ ಯುವತಿಯನ್ನು ತಬ್ಬಿಕೊಂಡು ಸಮಾಧಾನಿಸಿದರು.

ಕಾರ್ಯಕ್ರಮದ ಹಿಂದಿನ ದಿನ ಮಹಿಳೆಯರಿಗಾಗಿ ಆಯೋಜಿಸಿದ್ದ ಸಮಾವೇಶದಲ್ಲಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರು ಬಾಲ್ಯವಿವಾಹದ ಕೂಪದಿಂದ ಹೊರಬಂದವರನ್ನು ಹುರಿದುಂಬಿಸಲು ಪ್ರಯತ್ನಿಸಿದರು.


ಈ ಸಂದರ್ಭದಲ್ಲಿ, 18 ವರ್ಷದ ಯುವತಿಯೊಬ್ಬಳು ತನ್ನ ಬಾಲ್ಯ ವಿವಾಹದ ಕಥೆಯನ್ನು ವಿವರಿಸುತ್ತಾ, ಎನ್‌ಜಿಒಗಳ(NGO) ಮೂಲಕ ಕೌಶಲ್ಯ ಅಭಿವೃದ್ಧಿ ತರಬೇತಿಯು ಆರ್ಥಿಕವಾಗಿ ಸ್ವತಂತ್ರವಾಗಲು ಹೇಗೆ ಸಹಾಯ ಮಾಡಿತು ಎಂದು ಹೇಳಿದರು.

ಜೀವನವನ್ನೇ ನರಕ ಮಾಡಿದ್ದ ಬಾಲ್ಯ ವಿವಾಹದಿಂದ ತಪ್ಪಿಸಿಕೊಂಡ ನಂತರ, ಈ ಹುಡುಗಿ ಈಗ ಬೇಕರಿ ಕೆಲಸವನ್ನು ನಿರ್ವಹಿಸುತ್ತಿದ್ದಾಳೆ.

https://fb.watch/g8JKnByae7/ ಭಾರಿ ಮಳೆಗೆ ಕೊಚ್ಚಿ ಹೋದ ಸೇತುವೆ !

ಈ ಬಗ್ಗೆ ಮಾತನಾಡಿದ ಯುವತಿ, “ನನ್ನ ಹೆಸರು ಗುಲಾಬ್ಷಾ ಪರ್ವೀನ್. ನಾನು ಬಿಹಾರದ ಮಸೌರ್ಹಿ ಎಂಬ ಸಣ್ಣ ಹಳ್ಳಿಯ ನಿವಾಸಿ. ನಾನು 15 ವರ್ಷದವಳಿದ್ದಾಗ,

ನನ್ನ ಅಜ್ಜ ನನ್ನನ್ನು 55 ವರ್ಷದ ವ್ಯಕ್ತಿಗೆ ಬಲವಂತವಾಗಿ ಮದುವೆ ಮಾಡಿದರು” ಎಂದು ದುಃಖದಿಂದ ಹೇಳುವ ಸಮಯದಲ್ಲಿ ಆಕೆ ಉಸಿರುಗಟ್ಟಲು ಪ್ರಾರಂಭಿಸುತ್ತಾಳೆ.

ಈ ಸಂದರ್ಭದಲ್ಲಿ ಇರಾನಿಯವರು, ಯುವತಿಯ ಕೈಯನ್ನು ಒತ್ತಿ ಸಾಂತ್ವನಿಸುತ್ತಾ ಮಾತನಾಡುವುದನ್ನು ಮುಂದುವರಿಸಲು ಹೇಳಿದರು. ನಂತರ ಮಾತು ಮುಂದುವರಿಸಿದ ಗುಲಾಬ್‌ ಶಾ,

“ಆ ವ್ಯಕ್ತಿಗೆ ಈಗಾಗಲೇ ಮದುವೆಯಾಗಿ ಎಂಟರಿಂದ ಒಂಬತ್ತು ಮಕ್ಕಳಿದ್ದರು, ಮದುವೆಯಾದ ಎರಡೇ ದಿನದಲ್ಲಿ ಅತ್ತೆ ಮತ್ತು ಮನೆಯವರು ನನ್ನನ್ನು ಅಪಹಾಸ್ಯ ಮಾಡುತ್ತಾ,

ಅವಾಚ್ಯವಾಗಿ ನಿಂದಿಸುತ್ತಾ, ವಿವಿಧ ರೀತಿಯಲ್ಲಿ ಹಿಂಸಿಸಲು ಪ್ರಾರಂಭಿಸಿದರು. ನಾನು ಈ ಬಗ್ಗೆ ನನ್ನ ಹೆತ್ತವರಿಗೆ ಹೇಳಿದಾಗ, ಅದು ಈಗ ನಿನ್ನ ಮನೆ, ಎಲ್ಲವನ್ನೂ ಸಹಿಸಿಕೊಳ್ಳಬೇಕು ಎಂದು ಹೇಳಿದರು” ಎಂದು ಗುಲಾಬ್ ಶಾ ದುಃಖ ತೋಡಿಕೊಂಡರು.
ಗುಲಾಬ್ಶಾ ನಂತರ ಸೆಂಟ್ರಲ್ ಹೋಮ್ ಗೆ ತೆರಳಿದರು ಮತ್ತು ಜೀವನದ ಹೊಸ ಪ್ರಯಾಣವನ್ನು ಪ್ರಾರಂಭಿಸಿದರು.

ನಂತರ ವಿದ್ಯಾಭ್ಯಾಸ ಮುಂದುವರಿಸಿ, ಒಂದು ದಿನದ ಮಟ್ಟಿಗೆ ಬಿಹಾರದ ಕೇಂದ್ರೀಯ ಗೃಹದ ನಿರ್ದೇಶಕಿಯಾಗಿಯೂ ನೇಮಿಸಿಲ್ಪಟ್ಟರು. “ನನಗೆ 18 ವರ್ಷವಾದಾಗ,

ಕೇಂದ್ರ ಗೃಹ ಅಧಿಕಾರಿಗಳು ನನ್ನ ಕುಟುಂಬವನ್ನು ಕರೆಸಿ ನನ್ನನ್ನು ಮನೆಗೆ ಕಳುಹಿಸಿದರು. ನಾನು ಮನೆಗೆ ಹೋದಾಗ, ಪರಿಸ್ಥಿತಿ ಇನ್ನೂ ಹದಗೆಟ್ಟಿತು.

ಇದನ್ನೂ ಓದಿ : https://vijayatimes.com/our-party-is-democratic-says-siddaramaiah/

ನನ್ನ ಕುಟುಂಬವು ನನ್ನನ್ನೇ ತೆಗಳಲು ಪ್ರಾರಂಭಿಸಿತು. ಇಷ್ಟು ವರ್ಷ ಎಲ್ಲಿದ್ದೆ, ಯಾರ ಜೊತೆ ವಾಸಿಸುತ್ತಿದ್ದೆ, ಎಂದು ನನ್ನನ್ನು ಅನುಮಾನಿಸತೊಡಗಿದರು. ನಂತರ ನಾನು ಯುನಿಸೆಫ್‌ಗೆ(UNICEF) ತಲುಪಿದೆ, ಅಲ್ಲಿನ ಅಧಿಕಾರಿಗಳು ಹಲೋ ಸ್ಮೈಲ್ ಎಲ್‌ಎಲ್‌ಪಿ ಬಗ್ಗೆ ತಿಳಿಸಿದರು.

ಹೀಗೆ, ಹೊರಗೆ ಹೋದ ನಂತರ ಜಗತ್ತು ಹೇಗಿದೆ ಎಂದು ತಿಳಿದುಕೊಂಡೆ ಮತ್ತು ಈಗ ನನ್ನನ್ನು “ಧಾರಾ ಸ್ಯಾಂಡಿಲ್ಯ” ಎಂದು ಕರೆಯಲಾಗುತ್ತದೆ” ಎಂದು ಹೆಮ್ಮೆಯಿಂದ ಹೇಳಿಕೊಂಡರು.

ಅದೇ ರೀತಿ, 18 ವರ್ಷ ವಯಸ್ಸಿನವರೆಗೆ ಶಿಶುಪಾಲನಾ ಸಂಸ್ಥೆಗಳಲ್ಲಿ ಇರುವ ಮಕ್ಕಳಿಗೆ ಹೊರಗಿನ ಪ್ರಪಂಚವನ್ನು ನಿಭಾಯಿಸಲು ಸಾಧ್ಯವಾಗದ ಕಾರಣ, ಅವರಿಗೆ ಜೀವನ ಕೌಶಲ್ಯಗಳ ಬಗ್ಗೆ ತರಬೇತಿ ನೀಡಬೇಕು ಎಂದು ಗುಲಾಬ್ ಶಾ ಸ್ಮೃತಿ ಇರಾನಿಯವರನ್ನು ಕೇಳಿಕೊಂಡರು.


ಗುಲಾಬ್ ಶಾ ಅವರ ಈ ಹೃದಯ ವಿದ್ರಾವಕ ಕಥೆ ಮತ್ತು ತನ್ನ ಛಲ ಹಾಗೂ ಧೈರ್ಯದಿಂದ ಈಕೆ ಆರ್ಥಿಕವಾಗಿ ಸಬಲಳಾದ ಕಥೆಯು ಅನೇಕ ಹೆಣ್ಣುಮಕ್ಕಳಿಗೆ ಸ್ಫೂರ್ತಿಯಾಗಿದೆ.
Exit mobile version