ಸೋಶಿಯಲ್ ಮೀಡಿಯಾ ಬಳಕೆಗೆ ಮಕ್ಕಳ ವಯೋಮಿತಿ ನಿಗದಿ: ಹೈಕೋರ್ಟ್ ಸಲಹೆ

ಸಾಮಾಜಿಕ ಜಾಲತಾಣಗಳಲ್ಲಿ ವಯಸ್ಸಿನ ಅರ್ಹತೆಯನ್ನು ನಿರ್ಧರಿಸುವುದು ಸೂಕ್ತ ಎಂದು ಹೈಕೋರ್ಟ್ (Highcourt) ಅಭಿಪ್ರಾಯಪಟ್ಟಿದ್ದು, ಈ ಕುರಿತಂತೆ ಸರ್ಕಾರಕ್ಕೆ ಚಿಂತನೆ ನಡೆಸುವಂತೆ ಸಲಹೆ ನೀಡಿದೆ. ಶಾಲಾ ಮಕ್ಕಳು ಸೇರಿದಂತೆ ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣಗಳ ಬಳಕೆಗೆ ದಾಸರಾಗಿದ್ದಾರೆ. 17-18 ವರ್ಷದ ಮಕ್ಕಳಿಗೆ ದೇಶದ ಹಿತಾಸಕ್ತಿಗೆ ಯಾವುದು ಒಳ್ಳೇದು, ಯಾವುದು ಕೆಟ್ಟದು ಎಂದು ನಿರ್ಧಾರ ಮಾಡುವಷ್ಟು ಪ್ರೌಢಿಮೆ ಇರುತ್ತದೆಯೇ

ಹಾಗಾಗಿ ಮತದಾನಕ್ಕೆ ನಿಗದಿ ಮಾಡಿರುವಂತೆ ಸೋಶಿಯಲ್ ಮೀಡಿಯಾ (Social Media) ಬಳಕೆದಾರರಿಗೂ 21 ವರ್ಷವಿದ್ದರೆ ಸೂಕ್ತ ಹಾಗೂ ಸಾಮಾಜಿಕ ಜಾಲತಾಣವನ್ನು ಚಿಕ್ಕವರಿಗೆ ನಿಷೇಧಿಸುವುದು ಉತ್ತಮ. ಈ ಕುರಿತು ಕೇಂದ್ರ ಸರ್ಕಾರ ಚಿಂತನೆ ನಡೆಸಬೇಕಿದೆ ಎಂದು ಹೈಕೋರ್ಟ್ ಮೌಖಿಕ ಸಲಹೆಯನ್ನು ನೀಡಿದ್ದು, ನಿರ್ದಿಷ್ಟ ಟ್ವಿಟ್ಗಳನ್ನು ಹಾಗೂ ಕೆಲವು ಖಾತೆಗಳನ್ನು ರದ್ದುಪಡಿಸುವಂತೆ

ಕೇಂದ್ರ ಸರ್ಕಾರ ಹೊರಡಿಸಿರುವ ಆದೇಶ ಪ್ರಹನಿಸಿ ಎಕ್ಸ್ ಕಾರ್ಪ್ (Ex Corp) ಸಲ್ಲಿಸಿರುವ ಮೇಲ್ಮನವಿ ಅರ್ಜಿ ವಿಚಾರಣೆ ವೇಳೆ ನ್ಯಾಯಮೂರ್ತಿ ಜಿ. ನರೇಂದರ್ (G Narendar) ಮತ್ತು ನ್ಯಾ. ವಿಜಯ್ ಕುಮಾರ್ ಎ ಪಾಟೀಲ್ (Vijay Kumar A Patil) ಅವರಿದ್ದ ವಿಭಾಗೀಯ ಪೀಠ ಈ ಸಲಹೆಯನ್ನು ನೀಡಿದೆ.

ದಾಖಲೆ ನೀಡುವ ವ್ಯವಸ್ಥೆ ಸಾಮಾಜಿಕ ಜಾಲತಾಣಕ್ಕೆ ವಿಸ್ತರಿಸಿ
ಕೆಲವು ಆನ್‌ಲೈನ್‌ ಗೇಮ್‌ (Online Game) ಆಡಲು ಕಾನೂನಿನ ಪ್ರಕಾರ ಈಗ ಆಧಾರ್‌ ಮತ್ತು ಇತರೆ ದಾಖಲೆಗಳನ್ನು ಸಲ್ಲಿಸಬೇಕು ಎಂದು ಕೇಂದ್ರ ಸರಕಾರ ಪ್ರತಿನಿಧಿಸಿದ್ದ ವಕೀಲ ಎಂ.ಎನ್‌. ಕುಮಾರ್‌ (M N Kumar) ಅವರು ಹೇಳಿದರು. ಆಗ ನ್ಯಾಯಪೀಠವು ಹಾಗಾದರೆ ಆ ಕ್ರಮಗಳನ್ನು ಸಾಮಾಜಿಕ ಮಾಧ್ಯಮ ಬಳಕೆ ಮಾಡುವವರಿಗೆ ಏಕೆ ವಿಸ್ತರಿಸಿಲ್ಲ. ಈಗ ಎಲ್ಲದಕ್ಕೂ ಜನರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ನಿಮ್ಮ ಕಕ್ಷಿದಾರರು (ಟ್ವೀಟರ್‌) ಇದಕ್ಕೆ ಒಪ್ಪದಿರಬಹುದು,” ಎಂದು ಹೇಳಿತು.

ಕೇಂದ್ರ ಸರ್ಕಾರವು ದೇಶದ ಹಿತಾಸಕ್ತಿಗೆ ವಿರುದ್ದವಾಗಿರುವ ಟ್ವಿಟ್ಗಳನ್ನು ತೆಗೆದು ಹಾಕುವಂತೆ ಎಕ್ಸ್ ಕಾರ್ಪ್ (ಟ್ವಿಟರ್)ಗೆ ಆದೇಶ ನೀಡಿತ್ತು. ಇದನ್ನು ಪ್ರಶ್ನಿಸಿ ಎಕ್ಸ್ ಕಾರ್ಪ್ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿತ್ತು. ಏಕ ಸದಸ್ಯ ಪೀಠವು ಮನವಿ ತಿರಸ್ಕರಿಸಿದ್ದ ಹಿನ್ನಲೆಯಲ್ಲಿ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಲಾಗಿದ್ದು,

ಈ ಅರ್ಜಿ ವಿಚಾರಣೆ ನಡೆಸುತ್ತಿರುವ ಹೈಕೋರ್ಟ್ ವಿಭಾಗೀಯ ಪೀಠ ಸಾಮಾಜಿಕ ಜಾಲತಾಣಗಳ ದುರ್ಬಳಕೆ ಕುರಿತು ಚರ್ಚಿಸುವ ವೇಳೆ ವಯೋಮಿತಿ ಜಾರಿಗೊಳಿಸುವ ಕುರಿತು ಸಲಹೆ ನೀಡಿದೆ.

ಭವ್ಯಶ್ರೀ ಆರ್.ಜೆ

Exit mobile version