ಲೋಕಸಭಾ ಚುನಾವಣೆಗಾಗಿ 3 ನಿರ್ಣಾಯಕ ಸಮಿತಿಗಳನ್ನು ರಚಿಸಿದ ಕಾಂಗ್ರೆಸ್!

politics

ರಾಜಸ್ಥಾನದ(Rajasthan) ಉದಯಪುರದಲ್ಲಿ(Udaipur) ನಡೆದ ಕಾಂಗ್ರೆಸ್(Congress) ಚಿಂತನಾ ಶಿಬಿರದ ನಿರ್ಣಯದಂತೆ ಮುಂಬರುವ ಲೋಕಸಭಾ ಚುನಾವಣೆ(Loksabha Election)ವೇಳೆಗೆ ಪಕ್ಷವನ್ನು ಬಲಪಡಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ಆಧ್ಯಕ್ಷೆ(Congress President) ಸೋನಿಯಾ ಗಾಂಧಿ(Sonia Gandhi) ಮೂರು ನಿರ್ಣಾಯಕ ಸಮಿತಿಗಳನ್ನು ರಚಿಸಿ ಆದೇಶ ಹೊರಡಿಸಿದ್ದಾರೆ.

ಮುಂಬರುವ ಲೋಕಸಭಾ ಚುನಾವಣೆಯನ್ನು ಕೇಂದ್ರೀಕರಸಿಕೊಂಡು ಈ ಸಮಿತಿಗಳು ಕಾರ್ಯನಿರ್ವಹಿಸಲಿವೆ. ಇನ್ನು ರಾಜಕೀಯ ವ್ಯವಹಾರಗಳ ಸಮಿತಿ, ಚುನಾವಣಾ ಕಾರ್ಯತಂತ್ರ ಸಮಿತಿ, ಭಾರತ್ ಜೋಡೋ ಯಾತ್ರಾ ಸಮಿತಿ ಹೀಗೆ ಮೂರು ಮಹತ್ವದ ಸಮಿತಿಗಳನ್ನು ರಚಿಸಲಾಗಿದೆ. ಇನ್ನು ಮೂರು ಸಮಿತಿಗಳಲ್ಲಿ ಜಿ-23 ನಾಯಕರು, ರಾಹುಲ್ ಗಾಂಧಿ(Rahul Gandhi), ಪ್ರಿಯಾಂಕಾ ಗಾಂಧಿ(Priyanka Gandhi), ಸಚಿನ್ ಪೈಲಟ್ ಸದಸ್ಯರಾಗಿದ್ದರೆ, ದಿಗ್ವಿಜಯ ಸಿಂಗ್ ಮತ್ತು ಕೆ.ಸಿ.ವೇಣುಗೋಪಾಲ್‍ರಾವ್ ಎರಡು ಸಮಿತಿಗಳಲ್ಲಿದ್ದಾರೆ.

ಮುಖ್ಯವಾಗಿ ರಾಜಕೀಯ ವ್ಯವಹಾರಗಳ ಸಮಿತಿ ನೇತೃತ್ವವನ್ನು ಸೋನಿಯಾ ಗಾಂಧಿ ವಹಿಸಿಕೊಂಡಿದ್ದು, ಮಲ್ಲಿಕಾರ್ಜುನ್ ಖರ್ಗೆ, ಗುಲಾಂ ನಬಿ ಆಜಾದ್, ಅಂಬಿಕಾ ಸೋನಿ, ಆನಂದ್ ಶರ್ಮಾ, ಜಿತೇಂದ್ರ ಸಿಂಗ್, ದಿಗ್ವಿಜಯ ಸಿಂಗ್, ಕೆ.ಸಿ.ವೇಣುಗೋಪಾಲ ಮತ್ತು ರಾಹುಲ್ ಗಾಂಧಿ ಸದಸ್ಯರಾಗಿದ್ದಾರೆ. ಇನ್ನು ಅಚ್ಚರಿಯ ಬೆಳವಣಿಗೆಯಲ್ಲಿ 2014ರಲ್ಲಿ ನರೇಂದ್ರ ಮೋದಿಯವರ ಪರವಾಗಿ ಚುನಾವಣಾ ಪ್ರಚಾರ ಕಾರ್ಯತಂತ್ರ ರೂಪಿಸಿದ್ದ ಕಾನುಗೋಲ ದಿಢೀರನೇ ಕಾಂಗ್ರೆಸ್ ಸೇರಿದ್ದಾರೆ.

2014ರಲ್ಲಿ ಪ್ರಶಾಂತ್ ಕಿಶೋರ್ ಮತ್ತು ಕಾನುಗೋಲ ಒಟ್ಟಾಗಿ ಬಿಜೆಪಿ ಪರವಾಗಿ ಚುನಾವಣಾ ಕಾರ್ಯತಂತ್ರ ರೂಪಿಸಿದ್ದರು. ಇದೀಗ ಪ್ರಶಾಂತ ಕಿಶೋರ ಕಾಂಗ್ರೆಸ್ ಸೇರಲು ನಿರಾಕರಿಸಿದ ಬೆನ್ನಲ್ಲೇ ಕಾನುಗೋಲ ಕಾಂಗ್ರೆಸ್ ಸೇರಿದ್ದು, ಎಲ್ಲರ ಅಚ್ಚರಿಗೆ ಕಾರಣವಾಗಿದೆ. ಮುಂಬರುವ ಲೋಕಸಭಾ ಚುನಾವಣೆಯ ದೃಷ್ಟಿಯಿಂದ ಕಾಂಗ್ರೆಸ್ ಅನೇಕ ಕಾರ್ಯ ಯೋಜನೆಗಳನ್ನು ಹಮ್ಮಿಕೊಳ್ಳುತ್ತಿದೆ.

ಪ್ರಾದೇಶಿಕ ಪಕ್ಷಗಳೊಂದಿಗೆ ಮೈತ್ರಿಯತ್ತ ಹೆಚ್ಚು ಗಮನ ಹರಿಸದೇ ಏಕಾಂಗಿಯಾಗಿ ಹೋರಾಟ ನಡೆಸಲು ಕಾಂಗ್ರೆಸ್ ಮುಂದಾಗಿದೆ.

Exit mobile version