ಶ್ರೀ ಕ್ಷೇತ್ರ ಕಾರಿಂಜ ದೇವಸ್ಥಾನದ ಆವರಣ ಕುಸಿತ:

ಮಂಗಳೂರು: ಸ್ಥಳೀಯವಾಗಿ ಕಾರ್ಯನಿರ್ವಹಿಸುತ್ತಿರುವ ಬೃಹತ್‌ ಕಲ್ಲಿನ ಕೊರೆಯ ನಿರಂತರ ಸ್ಪೋಟಕ್ಕೆ ಸಮುದ್ರ ಮಟ್ಟಕ್ಕಿಂತ ಸುಮಾರು ಒಂಬೈನೂರು ಅಡಿ ಎತ್ತರದಲ್ಲಿ ಪ್ರತಿಷ್ಠಾಪನೆಗೊಂಡಿರುವ ಕಾರಿಂಜೇಶ್ವರನ ಸನ್ನಿಧಿಯೂ ಅಪಾಯದ ಅಂಚಿನಲ್ಲಿದೆ.

ಕೋರೆಗೆ ಪರವಾನಿಗೆ ನೀಡುವ ಮೊದಲೇ ಸ್ಥಳೀಯಾಡಳಿತವನ್ನು ಹೋರಾಟಗಾರರು ಎಚ್ಚರಿಸಿದ್ದು ಮಾತ್ರವಲ್ಲ ೨೦೦೮ರಲ್ಲೇ ದೇವಸ್ಥಾನದ ಸುತ್ತಮುತ್ತಲು ಸುಮಾರು ಹತ್ತು ಕಿಲೋಮೀಟರ್ ವ್ಯಾಪ್ತಿಯಲ್ಲಿ ಕೋರೆ ನಿಷೇಧಿಸಿ ಆದೇಶವಿದ್ದರೂ ಗಣಿಧಣಿಗಳು ತನ್ನ ಹಣಬಲ ಮತ್ತು ತೋಳ್ಬಲದಿಂದ ಅಧಿಕಾರಿಗಳ ಮತ್ತು ರಾಜಕಾರಣಿಗಳ ಕೃಪಾಕಟಾಕ್ಷದಿಂದ ನಿರಂತರವಾಗಿ ಗಣಿಗಾರಿಕೆ ನಡೆಸುತ್ತಿದ್ದು ಮುಂದೊಂದು ದಿನ ಸಂಪೂರ್ಣವಾಗಿ ಶಿಲೆಯ ಮೇಲೆ ನಿರ್ಮಿತವಾದ ದೇವಸ್ಥಾನ ಸಂಪೂರ್ಣವಾಗಿ ನೆಲಸಮವಾಗುವುದರಲ್ಲಿ ಯಾವುದೇ ಸಂಶಯವಿಲ್ಲ.

Exit mobile version