ಆರೋಪಿಗಳ ಹೇಳಿಕೆಯಿಂದ ಶ್ರೀಕಿಯ ಮತ್ತಷ್ಟು ಬಣ್ಣ ಬಯಲು

What are the secrets of BitCoin? ಬಿಟ್‌ಕಾಯಿನ್ ಸೀಕ್ರೇಟ್‌ ಏನು? ಬಿಟ್‌ ಕಾಯಿನ್‌ ಉರಳು, ಯಾರ ಕೊರಳಿಗೆ ಬೀಳುತ್ತೆ

ಬೆಂಗಳೂರು ನ 15 : ರಾಜ್ಯದಲ್ಲಿ ಸಂಚಲನ ಸೃಷ್ಟಿಸಿರುವ ಬಿಟ್ ಕಾಯಿನ್ ಪ್ರಕರಣ ಕುತೂಹಲ ಮೂಡಿಸುತ್ತಿದೆ. ಒಂದೆಡೆಯಲ್ಲಿ ರಾಜಕೀಯದ ಕೆಸರೆರಚಾಟ ನಡೆಯುತ್ತಿದ್ರೆ, ಇನ್ನೊಂದೆಡೆಯಲ್ಲಿ ಪೊಲೀಸರ ತನಿಖೆ ಮುಂದುವರಿದಿದೆ. ಈಗಾಗಲೇ ಬೆಂಗಳೂರು ನಗರ ಪೊಲೀಸ್‌ ಆಯುಕ್ತರ ಕಚೇರಿಯಿಂದ ಪ್ರಕಣಕ್ಕೆ ಸ್ಪಷ್ಟನೆಯನ್ನು ನೀಡಲಾಗಿದೆ. ಇನ್ನೊಂದೆಡೆಯಲ್ಲಿ ಪ್ರಕರಣದ ಆರೋಪಿಗಳು ಪೊಲೀಸರ ಮುಂದೆ ನೀಡಿರುವ ಹೇಳಿಕೆಯ ಮಾಹಿತಿ ಬಯಲಾಗಿದೆ.

Kannada live news Bitcoin

ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸದ್ಯ 1 ಬಿಟ್ ಕಾಯಿನ್ ಬೆಲೆ 56 ಲಕ್ಷ ಮೌಲ್ಯವಿದೆ. ಬಿಟ್‌ ಕಾಯಿನ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಆರೋಪಿಗಳು ಬಿಟ್‌ ಕಾಯಿನ್‌, ಗೇಮಿಂಗ್‌ ಆಪ್‌ ಹ್ಯಾಕಿಂಗ್‌, ಡ್ರಗ್ಸ್‌ ಸೇವನೆಗೆ ಸಂಬಂಧಿಸಿದಂತೆ ಮಹತ್ವದ ಹೇಳಿಕೆಯನ್ನು ನೀಡಿದ್ದಾರೆ. 

ಪ್ರಕರಣದ ಆರೋಪಿ ಸಮೀಷ್‌ ಹೆಗ್ಡೆಹೇಳಿದ ವಿವರ ಇಂತಿದೆ.

ಬಿಟ್‌ ಕಾಯಿನ್‌ ಪ್ರರಕಣದ ಪ್ರಮುಖ ಆರೋಪಿ ಶ್ರೀಕೃಷ್ಣ (ಶ್ರೀಕಿ) ನಿಗೆ ಸಹಕಾರ ನೀಡಿರುವ ಆರೋಪ ಹೊತ್ತಿರುವ ಮಂಗಳೂರು ಮೂಲಕ ಸುನೀಷ್‌ ಹೆಗ್ಡೆ ಸಿಸಿಬಿ ಪೊಲೀಸರ ಮುಂದೆ ಮಹತ್ವದ ಹೇಳಿಕೆಯನ್ನು ನೀಡಿದ್ದಾನೆ. ಬೆಂಗಳೂರಿನ ಸಂಜಯನಗರದ ನಿವಾಸಿಯಾಗಿರುವ ಸುನೀಷ್‌ ಹೆಗ್ಡೆ ಬೆಂಗಳೂರಿನ ಬಿಬಿಎಂಪಿ ಮತ್ತು ಕೆಐಎಡಿಬಿಯ ಕ್ಲಾಸ್ 1 ಕಂಟ್ರಾಕ್ಟರ್ ಆಗಿ ಕೆಲಸ ಮಾಡುತ್ತಿದ್ದೇನೆ. 2018 ರಲ್ಲಿ ನಡೆದ ನಲಪಾಡ್ ಕೇಸ್ ಬೆನ್ನಲ್ಲೇ ನನಗೆ ಶ್ರೀಕಿ (ಶ್ರೀಕೃಷ್ಣ) ತನಗೆ ಪರಿಚಿತನಾಗಿದ್ದಅಲ್ಲದೇ ಇದೇ ಶ್ರೀ ಕೃಷ್ಣನ ಕಡೆಯಿಂದ 2019 ರಲ್ಲಿ ರಾಬಿನ್ ಖಂಡೇಲಾವಾಲ್ ಪರಿಚಯವಾಗಿದ್ದ. ಇನ್ನು ಶ್ರೀಕಿ ಹ್ಯಾಕ್ ಮಾಡಿದ ಬಿಟ್ ಕಾಯಿನ್ ಗಳನ್ನು ಈತನಿಗೆ ನೀಡುತ್ತಿದ್ದನು
ಅದನ್ನು ರಾಬಿನ್ ಖಂಡೇಲಾ ವಾಲ್ ಬ್ಲಾಕ್ ಟೂ ವೈಟ್ ಮಾಡುತ್ತಿದ್ದ ನಾನು, ಪ್ರಸೀದ್ ಶೆಟ್ಟಿ, ಹೇಮಂತ್, ಸುಜಯ್, ಸುರೇಶ್ ಮತ್ತು ಶ್ರೀಕಿ ಗ್ಯಾಂಗ್ ಸೇರಿ ಐಶಾರಾಮಿ ಹೊಟೇಲ್ ನಲ್ಲಿ ಯಾವಾಗಲು ಪಾರ್ಟಿ ಮಾಡುತ್ತಿದ್ದವು. ಐಟಿಸಿ ಗಾರ್ಡೇನಿಯಾ, ಸೀಜನ್, ಶಾಂಗ್ರಿಲಾ, ಗೋಕುಲಂ ಗ್ರಾಂಡ್ ನಲ್ಲಿ ಪಾರ್ಟಿ ಮಾಡಿದ್ದೇವು. ಅಲ್ಲದೇ ಕೆಲವೊಂದು ಬಾರಿ ನನ್ನ ಫ್ಲ್ಯಾಟ್‌ನಲ್ಲಿ ಸೇರಿಕೊಂಡು ಪಾರ್ಟಿ ಮಾಡಿದ್ದೇವೆ ಎಂದಿದ್ದಾರೆ.

ಆರಂಭದಲ್ಲಿ ಆನ್‌ಲೈನ್‌ ಗೇಮ್‌ ಶೋ ಹ್ಯಾಕ್‌ ಮಾಡಿದ್ರೆ ಗೊತ್ತಾಗುತ್ತೆ ಅಂತಾ ಹೇಳಿದ್ದ. ನಂತರದಲ್ಲಿ ಆನ್‌ಲೈನ್‌ ಗೇಮ್‌ಗಳನ್ನು ಹ್ಯಾಕ್‌ ಮಾಡಿದ್ದಾನೆ. ಇದೇ ರೀತಿ ಯುನೋಕಾಯಿನ್ ಬಿಟ್ ಕಾಯಿನ್ಗಳ ಹ್ಯಾಕ್ ಮಾಡಿದ್ದಾನೆ
ನನ್ನ ಜೊತೆ ಇದ್ದರೆ ನಿನಗೆ ಬಿಟ್ ಕಾಯಿನ್ ನೀಡುವೆ ಅಂತಾ ಹೇಳಿದ್ದಅದರಿಂದ ಬಂದ ಹಣದಲ್ಲಿ ಪಾಲು ನೀಡುವೆ ಎನ್ನುತ್ತಿದ್ದ ಶ್ರೀಕಿ.  ಹೀಗಾಗಿ ಆತನ ಎಲ್ಲಾ ಖರ್ಚುಗಳನ್ನು ನಾನು ನೋಡಿಕೊಳ್ಳುತ್ತಿದ್ದೆ ಇಲ್ಲಿ ತನಕ ನಾನು ಶ್ರೀ ಕೃಷ್ಣನಿಗೆ 2 ಕೋಟಿ ಖರ್ಚು ಮಾಡಿದ್ದೆನೆ. ಇಷ್ಟೇ ಅಲ್ಲದೇ ಶ್ರೀಕಿ ಪೋಕರ್ ಬಾಜಿ ಗೇಮ್ ಹ್ಯಾಕ್ ಮಾಡಿ ಕಿರಿಕಿರಿ ಮಾಡಿದ್ದ. ಅದರ ಜೊತೆಗೆ ಪೋಕರ್‌ ಗೇಮ್‌ ಸುರಕ್ಷಿತ ಮಾಡುವ ನಿಟ್ಟಿನಲ್ಲಿ ಶ್ರೀಕಿ ನನಗೆ ಆಫರ್‌ ಕೊಟ್ಟಿದ್ದ. ನಂತರದಲ್ಲಿ  ಸಿಇಓ ಶ್ರೀಕಿ ಕರೆಯಿಸಿ ಅವರ ಗೇಮ್ ಗೆ ಶ್ರೀಕಿ ಸೇಫ್ ಮಾಡಿಕೊಟ್ಟ ಇದರಿಂದ ನಮಗೆ 50 ಲಕ್ಷ ಹಣ ದೊರಕಿತ್ತು ಎಂದು ಹೇಳಿದ್ದಾನೆ.

Exit mobile version