ಶೃಂಗೇರಿ ಬಂದ್‌ಗೆ ಉತ್ತಮ ಪ್ರತಿಕ್ರಿಯೆ. ರಸ್ತೆಗಿಳಿಯದ ಆಟೋ, ಖಾಸಗಿ ಸಾರಿಗೆ ಬಸ್ ಸಂಚಾರ ಸ್ಥಗಿತ

ಶೃಂಗೇರಿ ಅ 23 : ನೂರು ಹಾಸಿಗೆ ಆಸ್ಪತ್ರೆ ನಿರ್ಮಾಣಕ್ಕೆ ಒತ್ತಾಯಿಸಿ ವಿವಿಧ ಸಂಘಟನಗಳು ಕರೆ ನೀಡಿದ್ದ ಶೃಂಗೇರಿ ಬಂದ್ ಶುಕ್ರವಾರ ಸಂಪೂರ್ಣವಾಗಿ ಯಶಸ್ವಿಯಾಯಿತು.

ಮೆಡಿಕಲ್, ಪೆಟ್ರೋಲ್ ಬಂಕ್, ಶ್ರೀಮಠ ಎಂದಿನಂತೆ ಕಾರ್ಯ ನಿರ್ವಹಿಸಿದರೆ, ಮಾಲೀಕರು ಸ್ವಯಂ ಪ್ರೇರಿತವಾಗಿ ಅಂಗಡಿ, ಮುಂಗಟ್ಟುಗಳ ಬಾಗಿಲು ಮುಚ್ಚಿ ಬಂದ್‌ಗೆ ಬೆಂಬಲ ವ್ಯಕ್ತಪಡಿಸಿದರು. ಖಾಸಗಿ ಬಸ್ ಮತ್ತು ಆಟೋಗಳು ರಸ್ತೆಗಿಳಿಯಲಿಲ್ಲ, ರಾಜ್ಯ ರಸ್ತೆಸಾರಿಗೆ ಸಂಸ್ಥೆ ಬಸ್ ಓಡಾಡಿದವು.

ನೂರು ಬೆಡ್ ಆಸ್ಪತ್ರೆ ಹೋರಾಟ ಸಮಿತಿ ನೀಡಿದ್ದ ಬಂದ್ ಕರೆಗೆ ಹೋಟೆಲ್‌ಗಳು, ಶಾಲಾ-ಕಾಲೇಜು,ಬಸ್ಸು, ಟ್ಯಾಕ್ಸಿ, ಆಟೋ, ಲಾರಿ ಮಾಲೀಕರು ಹಾಗೂ ಚಾಲಕರು ನೈತಿಕ ಬೆಂಬಲ ಸೂಚಿಸಿದರು. ಬೆಳಗ್ಗೆ 8 ಗಂಟೆಯಿಂದ ಸಂಜೆವರೆಗೂ ಬಂದ್ ಆಗಿದ್ದರಿಂದ ಪಟ್ಟಣ ಹಾಗೂ ಗ್ರಾಮಾಂತರ ಪ್ರದೇಶ ಸ್ತಬ್ಧಗೊಂಡಿತ್ತು.

ಪ್ರತಿಭಟನಾ ಮೆರವಣಿಗೆ ವೆಲ್‌ಕಮ್ ಗೇಟ್‌ನಿಂದ ಮುಖ್ಯರಸ್ತೆಗಳಲ್ಲಿ ಸಾಗಿ ಸಂತಮಾರ್ಕೆಟ್ ಸಮೀಪತನಕ ಸಾಗಿಬಂತು. ಸುಮಾರು 25ಕ್ಕೂ ಸಂಘಟನೆಗಳು ಬಂದ್‌ಗೆ ಸಾಥ್ ನೀಡಿದವು.

ಮನವಿ ಸ್ವೀಕರಿಸಿ ಉಪವಿಭಾಗಾಧಿಕಾರಿ ನಾಗರಾಜ್ ಮಾತನಾಡಿ, ಶೃಂಗೇರಿಗೆ ನೂರು ಬೆಡ್ ಆಸ್ಪತ್ರೆ ಹಾಗೂ ಮೆಡಿಕಲ್ ಕಾಲೇಜು ಆಗಬೇಕು ಎಂಬ ಕನಸು ನಮಗೂ ಇದೆ. ಇದಕ್ಕಾಗಿ ಕೂಡಲೇ ಅತ್ಯುತ್ತಮ ಜಾಗವನ್ನು ಗುರುತಿಸಿ 15ದಿನದೊಳಗೆ ಆಸ್ಪತ್ರೆಗೆ ಜಾಗ ಮಂಜೂರಾತಿ ಮಾಡಲು ಸಿದ್ಧರಾಗಿದ್ದೇವೆ ಎಂದರು. ಜಿಲ್ಲಾಧಿಕಾರಿಗಳು ಈ ಕುರಿತು ಹೆಚ್ಚಿನ ಆಸಕ್ತಿ ವಹಿಸಿದ್ದಾರೆ. ಸೋಮವಾರ ಅವರು ಶೃಂಗೇರಿಗೆ ಭೇಟಿ ನೀಡಲಿದ್ದು ಸಮಿತಿಯ ಸದಸ್ಯರು ಅವರ ಜೊತೆ ಮಾತನಾಡಲು ಅವಕಾಶವಿದೆ ಎಂದರು. ಈ ವೇಳೆ ತಹಶಿಲ್ದಾರ್ ಅಂಬುಜಾ ಕೂಡ ಹಾಜರಿದ್ದರು.

ಸಂತೆಮಾರ್ಕಟ್‌ನ ಸಮೀಪ ನಡೆದ ಪ್ರತಿಭಟನಾ ಸಭೆಯನ್ನು ಸಮಿತಿಯ ರಂಜಿತ್‌ ಮಾತನಾಡಿ, ನೂರು ಬೆಡ್ ಆಸ್ಪತ್ರೆಗಾಗಿ ಮಾಡುತ್ತಿದ್ದ ಹೋರಾಟಕ್ಕೆ ವರುಷ ಉರುಳಿದೆ 2007ರಂದು ತಾಲೂಕು ಆರೋಗ್ಯ ಕೇಂದ್ರವನ್ನು 100 ಬೆಡ್ ಆಸ್ಪತ್ರೆಯನ್ನಾಗಿಸಿ ಮೇಲ್ದರ್ಜೆಗೆ ಏರಿಸಬೇಕು ಎಂದು ಸರ್ಕಾರ ಆದೇಶ ಹೊರಡಿಸಿದೆ. ಆದರೆ ಈಗ ಸಾರ್ವಜನಿಕ ಆಸ್ಪತ್ರೆ ನಿರ್ಮಾಣ ಮಾಡುವುದಕ್ಕೆ ಜಾಗದ ಕೊರತೆ ಇದೆ. ಕಳೆದ ವರ್ಷ ಸಾಮಾಜಿಕ ಜಾಲತಾಣದ ಮೂಲಕ ಸುಸಜ್ಜಿತ ಅಸತ್ರೆಗಾಗಿ ಹೋರಾಟ ಆರಂಭಿಸಿದ್ದೆವು, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಗಮನ ಸೆಳೆದವು, ಆದರೆ ಹೋರಾಟ ಫಲಪ್ರದವಾಗಲು ಪ್ರತಿಭಟನೆ ಅನಿವಾರ್ಯವಾಗಿದೆ ಎಂದರು.

ಶಾತೀತವಾಗಿ ಕರೆನೀಡಿದ್ದ ಬಂದ್ ಹಿನ್ನೆಲೆಯಲ್ಲಿ ಬೆಳಗ್ಗೆ ಪಟ್ಟಣದ ಪ್ರವೇಶ ದ್ವಾರದಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆ ಮುನ್ನಡೆಯಲ್ಲಿ ಸಾಗಿ ಸಂತೆ ಮಾರುಕಟ್ಟೆ ಸಮೀಪ ಸಮಾವೇಶಗೊಂಡಿತು.

ಮೆರವಣಿಗೆಯಲ್ಲಿ ತಾಲೂಕಿನ 25ಕ್ಕೂ ಹೆಚ್ಚು ಸಂಘಟನೆ ಬೆಂಬಲ ನೀಡಿದವು ಹೋರಾಟ ಸಮಿತಿಯ ಅನಿರುದ್, ಶ್ರೇಯಸ್ಸು, ಆದರ್ಶ್, ಅಭಿಲಾಶ್ ಮೇಗೂರು, ಪ್ರವೀಣ್, ಅಂಜನ್, ಶಿವಪ್ರಸಾದ್,ಲಕ್ಷ್ಮೀಶ, ಅಭಿಲಾಷ್ ಹೆಗಡೆ, ನಿರಂಜನ್ ಮತ್ತಿತ್ತರು ಹಾಜರಿದ್ದರು.

Exit mobile version