#SSLC 625ಕ್ಕೆ 624: ಒಂದು ಅಂಕಕ್ಕಾಗಿ ಮತ್ತೆ ಅರ್ಜಿ

ಕೋವಿಡ್ ಭೀತಿಯಲ್ಲಿ ನಡೆದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶ ಸೋಮವಾರ ಪ್ರಕಟವಾಗಿದೆ. ಸುಮಾರು 6 ವಿಧ್ಯಾರ್ಥಿಗಳು 625 ಕ್ಕೆ 625 ಅಂಕ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. ಆದರೆ ಇಲ್ಲೊಬ್ಬ ವಿಧ್ಯಾರ್ಥಿನಿ 625 ಕ್ಕೆ 624 ಅಂಕ ಗಳಿಸಿದ್ದರೂ ಒಂದು ಅಂಕಕ್ಕಾಗಿ ಮರುಮೌಲ್ಯಮಾಪನಕ್ಕೆ ಅರ್ಜಿ ಹಾಕಿದ್ದಾರೆ. 

ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಸುರಭಿ ಶೆಟ್ಟಿ 624 ಅಂಕ ಗಳಿಸಿ ರಾಜ್ಯದಲ್ಲಿ ಎರಡನೇ ಸ್ಥಾನ ಗಳಿಸಿದ 12 ವಿಧ್ಯಾರ್ಥಿಗಳಲ್ಲಿ ಒಬ್ಬರಾಗಿದ್ದಾರೆ. ಸಮಾಜ ವಿಜ್ಞಾನ ಹೊರೆತು ಪಡೆಸಿ ಎಲ್ಲಾ ಭಾಷೆಗಳಲ್ಲೂ ಫುಲ್ ಮಾರ್ಕ್ಸ್ ಅನ್ನು ಸುರಭಿ ಗಳಿಸಿದ್ದಾರೆ. ಆದರೆ ಎಲ್ಲದರಲ್ಲು ಪೂರ್ತಿ ಅಂಕಗಳಿಸುತ್ತೇನೆ ಎಂಬ ಭರವಸೆಯಲ್ಲಿದ್ದ ಸುರಭಿ ಇದೀಗ ನಿರಾಸೆ ಹೊಂದಿದ್ದು ಮರುಮೌಲ್ಯಮಪಾನಕ್ಕೆ ಅರ್ಜಿ ಹಾಕುವುದಾಗಿ ಹೇಳಿದ್ದಾರೆ. 

ಈ ಸಂಧರ್ಭದಲ್ಲಿ ಮಾತಾನಡಿದ ಸುರಭಿ ಲಾಕ್ಡೌನ್  ವೇಳೆ ಏಕಾಗ್ರತೆಯಿಂದ ಓದಲು ಬಹಳ ಕಷ್ಟವಾಗುತ್ತಿತ್ತು. ಆದರು ದಿನಕ್ಕೆ 6-8 ಗಂಟೆಗಳ ಓದುತ್ತಿದ್ದೆ ಎಂದು ಸುರಭಿ ಹೇಳಿದ್ದಾರೆ. ನನ್ನ ತಂದೆ ತಾಯಿ ನನಗೆ ಬಹಳ ಪ್ರೋತ್ಸಾಹಿಸಿದ್ದಾರೆ ಅದಕ್ಕಾಗಿ ನಾನು ಅವರಿಗೆ  ಧನ್ಯವಾದ ಹೇಳುತ್ತೇನೆ. ನನಗೆ ನನ್ನ ಮೇಲೆ ನಿರೀಕ್ಷೆ ಇರಲ್ಲಿಲ್ಲ ಆದರೆ ನನ್ನ ಶಾಲೆಯ ಗುರುಗಳು ನನ್ನ ಮೇಲೆ ಭರವಸೆ ಇಟ್ಟು ಪ್ರೋತ್ಸಾಹಿಸಿದ್ದಕ್ಕೆ ಕೃತಜ್ಞತೆ ತಿಳಿಸುತ್ತೇನೆ ಉನ್ನತ್ತ ವಿಧ್ಯಾಭ್ಯಾಸವನ್ನು ಮಂಗಳೂರಿನಲ್ಲಿ ಮುಂದುವರಿಸಿ ಮುಂದೆ ವೈದ್ಯೆಯಾಗಲು ಬಯಸುತ್ತೇನೆ ಎಂದು ತಮ್ಮ ಆಸೆಯನ್ನು ಸುರಭಿ ವ್ಯಕ್ತಪಡಿಸಿದ್ದಾರೆ.    
Exit mobile version