ರಾಜ್ಯಗಳು ಒಬಿಸಿ ಪಟ್ಟಿ ತಯಾರಿಕೆಗೆ ಲೋಕಸಭೆಯಲ್ಲಿ ಅಂಗೀಕಾರ

ದೆಹಲಿ, ಆ. 09: ರಾಜ್ಯಗಳಿಗೆ ತಮ್ಮದೆ ಆದ ಒಬಿಸಿ ಪಟ್ಟಿಗಳನ್ನು ಮಾಡುವ ಅಧಿಕಾರವನ್ನು ನೀಡುವ ತಿದ್ದುಪಡಿ ಮಸೂದೆಯನ್ನು ಲೋಕಸಭೆಯಲ್ಲಿಂದು ಅಂಗೀಕರಿಸಲಾಯಿತು.

ಈ ಮಸೂದೆಯಿಂದ ರಾಜ್ಯಗಳಿಗೆ ಸಾಮಾಜಿಕ ಆರ್ಥಿಕವಾಗಿ ಹಿಂದುಳಿದ ವರ್ಗಗಳನ್ನು ಸೂಚಿಸುವ ಅಧಿಕಾರವನ್ನು ನೀಡಲಾಗಿದ್ದು ಇದರಿಂದ ಒಬಿಸಿ ಪಟ್ಟಿಗಳನ್ನು ಆಯಾ ರಾಜ್ಯಗಳೇ ಮಾಡುವ ಅಧಿಕಾರ ಮರಳಿ ಪಡೆಯುವ ತಿದ್ದುಪಡಿ ಮಸೂದೆಯನ್ನು ಕೇಂದ್ರ ಸಾಮಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ಡಾ. ವಿರೇಂದ್ರ ಕುಮಾರ್ ಲೋಕಸಭೆಯಲ್ಲಿ ಮಂಡಿಸಿದರು. ಈ ಮಸೂದೆಯನ್ನು 2018 ರಲ್ಲಿ ಕೇಂದ್ರ ಸರ್ಕಾರಕ್ಕೆ ಕಾನೂನಿನ ಪ್ರಕಾರ ಹಿಂದುಳಿದ ವರ್ಗಗಳ ಪಟ್ಟಿಯನ್ನು ರಚಿಸುವ  ಅಧಿಕಾರವನ್ನು ನೀಡಲಾಗಿತ್ತು. ಆಗ ಈ ಮಸೂದೆಯು ತಿದ್ದುಪಡಿಯನ್ನು ಮಾಡುವ ಅಧಿಕಾರ ರಾಜ್ಯಕ್ಕೆ ಇರಲಿಲ್ಲ ಹಾಗಾಗಿ ಯಾವುದೇ ಬದಲಾವಣೆಗಳಿದ್ದರೂ ರಾಜ್ಯ ಸರ್ಕಾರಗಳು ಕೇಂದ್ರಕ್ಕೆ ಮನವಿ ಮಾಡಿ ಕೊಳ್ಳಬಹುದಾಗಿತ್ತು. ಆದರೆ ಇದೀಗ ಪ್ರತಿಪಕ್ಷಗಳ ವಿರೋಧದ ನಡುವೆಯು ರಾಜ್ಯಗಳು ತಮ್ಮದೆ ಆದ ಒಬಿಸಿ ಪಟ್ಟಿಗಳನ್ನು ಮಾಡುವ ಆಧಿಕಾರವನ್ನು  ಲೋಕಸಭೆಯಲ್ಲಿ ಅಂಗೀಕರಿಸಲಾಯಿತು.

Exit mobile version