ಉಚಿತ ಯೋಜನೆಗಳನ್ನು ನಿಲ್ಲಿಸಿ ; ಇಲ್ಲದಿದ್ರೆ ರಾಜ್ಯಗಳು ಶ್ರೀಲಂಕಾ ಆಗುತ್ತವೆ!

srilanka crisis

ಭಾರತದ ಒಕ್ಕೂಟದಲ್ಲಿರುವ ಅನೇಕ ರಾಜ್ಯಗಳು ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಅನೇಕ ಉಚಿತ ಯೋಜನೆಗಳನ್ನು(Free Plans) ಜನರಿಗೆ ನೀಡುತ್ತಿವೆ. ಈ ಉಚಿತ ಯೋಜನೆಗಳು ಹೀಗೆ ಮುಂದುವರೆದರೆ ಭಾರತ ಕೂಡಾ ಗೀಸ್(Ghis) ಮತ್ತು ಶ್ರೀಲಂಕಾದಲ್ಲಾದಂತ(Srilanka) ಆರ್ಥಿಕ ದಿವಾಳಿತನವನ್ನು ಎದುರಿಸಬೇಕಾಗುತ್ತದೆ ಎಂದು ಕೇಂದ್ರ ಸರ್ಕಾರದ(Central Government) ಅನೇಕ ಹಿರಿಯ ಅಧಿಕಾರಿಗಳು ಪ್ರಧಾನಿ(Primeminister) ಮೋದಿಯವರಿಗೆ(Narendra Modi) ಎಚ್ಚರಿಕೆ ನೀಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಅಧಿಕೃತ ಕಚೇರಿಯಲ್ಲಿ ಕೇಂದ್ರ ಸರ್ಕಾರದ ಎಲ್ಲ ಇಲಾಖೆಗಳ ಕಾರ್ಯದರ್ಶಿಗಳ ಜೊತೆ ಸುದಿರ್ಘ ಚರ್ಚೆ ನಡೆಸಿದ್ದಾರೆ. ಈ ವೇಳೆ ಸರ್ಕಾರದ ನೀತಿಗಳಲ್ಲಿನ ದೋಷಗಳ ಕುರಿತು ತಿಳಿಸುವಂತೆ ಕೇಳಿದಾಗ ಬಹುತೇಕ ಅಧಿಕಾರಿಗಳು ರಾಜ್ಯ ಸರ್ಕಾರಗಳು ನೀಡುತ್ತಿರುವ ಉಚಿತ ಯೋಜನೆಗಳನ್ನು ನಿಲ್ಲಿಸಬೇಕೆಂದು ಸೂಚಿಸಿದ್ದಾರೆ.

ಎಲ್ಲ ರಾಜಕೀಯ ಪಕ್ಷಗಳು ಅಧಿಕಾರ ಹಿಡಿಯಲು ಅನೇಕ ಉಚಿತ ಯೋಜನೆಗಳನ್ನು ಘೋಷಣೆ ಮಾಡುತ್ತವೆ. ಹೀಗೆ ಉಚಿತ ಯೋಜನೆಗಳನ್ನು ನೀಡುವುದರಿಂದ ರಾಜ್ಯ ಮತ್ತು ಕೇಂದ್ರದ ಹಣಕಾಸಿನ ವ್ಯವಸ್ಥೆಯ ಮೇಲೆ ದೀರ್ಘಾವಧಿ ಪರಿಣಾಮವನ್ನು ಉಂಟುಮಾಡುತ್ತದೆ. ರಾಜ್ಯಗಳು ದಿವಾಳಿಯಾದರೆ ಅದರ ನೇರ ಪರಿಣಾಮ ಕೇಂದ್ರದ ಮೇಲಾಗುತ್ತದೆ. ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯಗಳು ಕೂಡಾ ಆರ್ಥಿಕ ವ್ಯವಸ್ಥೆಯನ್ನು ಗಟ್ಟಿಗೊಳಿಸಲು ಶ್ರಮಿಸಬೇಕು.

ಆದರೆ ಇತ್ತೀಚಿನ ವರ್ಷಗಳಲ್ಲಿ ಭಾರತದಲ್ಲಿ ಅನೇಕ ರಾಜ್ಯಗಳು ಉಚಿತ ಯೋಜನೆಗಳನ್ನು ನೀಡುತ್ತಿವೆ. ಈ ಪರಿಸ್ಥಿತಿ ಹೀಗೆ ಮುಂದುವರೆದರೆ ಭಾರತದ ಬಹುತೇಕ ರಾಜ್ಯಗಳು ಶ್ರೀಲಂಕಾ ಆಗುತ್ತದೆ. ಶ್ರೀಲಂಕಾದ ಇಂದಿನ ಪರಿಸ್ಥಿತಿಗೆ ಉಚಿನ ಯೋಜನೆಗಳೇ ಪ್ರಮುಖ ಕಾರಣ. ಉಚಿತ ಯೋಜನೆಗಳನ್ನು ನೀಡುವುದರಿಂದ ರಾಜ್ಯಗಳು ಸಾಲದ ಸುಳಿಗೆ ಸಿಲುಕುತ್ತವೆ. ಪ್ರತಿವರ್ಷ ಸಾಲ ಹೆಚ್ಚಾಗುತ್ತಲೇ ಸಾಗುತ್ತದೆ. ಹೀಗಾದಾಗ ಆರ್ಥಿಕ ದಿವಾಳಿತನ ಸೃಷ್ಟಿಯಾಗುತ್ತದೆ.

ಇನ್ನು ಸದ್ಯ ಭಾರತದ ಅನೇಕ ರಾಜ್ಯಗಳು ಮೂಲಸೌಕರ್ಯ, ಶಿಕ್ಷಣ, ಆರೋಗ್ಯ, ತಂತ್ರಜ್ಞಾನದ ಮೇಲೆ ಖರ್ಚು ಮಾಡುವುದಕ್ಕಿಂತ ಉಚಿತ ಯೋಜನೆಗಳಿಗಾಗಿಯೇ ಹೆಚ್ಚಿನ ಹಣವನ್ನು ವ್ಯಯಿಸುತ್ತಿವೆ. ವಿದ್ಯುತ್, ನೀರು, ಸಂಚಾರ, ಆಹಾರ ಸೇರಿದಂತೆ ಅನೇಕ ವಸ್ತುಗಳನ್ನು ಕೆಲ ರಾಜ್ಯಗಳು ಉಚಿತವಾಗಿ ನೀಡುತ್ತಿವೆ. ದೀರ್ಘಾವಧಿಯಲ್ಲಿ ಇದು ಆರ್ಥಿಕ ದುಸ್ಥಿತಿಗೆ ಕಾರಣವಾಗುತ್ತದೆ ಎಂದು ಅಧಿಕಾರಿಗಳು ಪ್ರಧಾನಿಗಳಿಗೆ ವಿವರಿಸಿದ್ದಾರೆ ಎನ್ನಲಾಗಿದೆ.

Exit mobile version