ಹೊಸ ವರ್ಷಾಚರಣೆಗೆ ಎಲ್ಲೆಡೆ ಕಟ್ಟೆಚ್ಚರ: ನಂದಿಬೆಟ್ಟ ಸೇರಿದಂತೆ ಕೆಲವು ಪ್ರವಾಸಿ ತಾಣಗಳಿಗೆ 3ದಿನ ಪ್ರವೇಶವಿಲ್ಲ

Bengaluru: ಇನ್ನೇನು ಹೊಸ ವರ್ಷಕ್ಕೆ (New Year) ಎರಡೇ ದಿನಗಳು ಬಾಕಿ ಉಳಿದಿರುವ ಹಿನ್ನೆಲೆ ಬೆಂಗಳೂರು ಗ್ರಾಮಾಂತರ ಪೊಲೀಸರು ಅಲರ್ಟ್ (Alert) ಆಗಿದ್ದು, ಡಿಸೆಂಬರ್ 30, 31 ಮತ್ತು ಜನವರಿ (January)1ರ ವರೆಗೆ ಮೂರು ದಿನಗಳ ಕಾಲ ಸಾರ್ವಜನಿಕರಿಗೆ ಬೆಟ್ಟಗಳ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. ಹಾಗಾಗಿ ಬೆಂಗಳೂರು ಗ್ರಾಮಾಂತರ ವ್ಯಾಪ್ತಿಯಲ್ಲಿ ಬರುವ ಬೆಟ್ಟಗಳಿಗೆ ಈ ಮೂರು ದಿನ ಪ್ರವೇಶವಿರುವುದಿಲ್ಲ.

ವರ್ಷಾಚರಣೆ ವೇಳೆ ಯಾವುದೇ ರೀತಿಯ ಸಮಸ್ಯೆಗಳು, ಅಹಿತಕರ ಘಟನೆಗಳು ನಡೆಯದಂತೆ ಹದ್ದಿನ ಕಣ್ಣಿಡಲಾಗುತ್ತಿದ್ದು, ಬೆಂಗಳೂರು ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇರುವ ಶಿವಗಂಗೆ (Shivagange), ಕುಂತಿಬೆಟ್ಟ (Kunti Betta), ಸಿದ್ದರಬೆಟ್ಟ (Siddara Betta) ಸೇರಿ ಇತರ ಬೆಟ್ಟಗಳಿಗೆ ಹೊಸ ವರ್ಷದ ರಾತ್ರಿ ಸಾರ್ವಜನಿಕರಿಗೆ ಪ್ರವೇಶ ಇಲ್ಲದಂತೆ ತೀರ್ಮಾನ ಕೈಗೊಳ್ಳಲಾಗಿದೆ.

ನಗರದ ಹೊರಗಡೆ ನಡೆಯುವ ಪಾರ್ಟಿ, ಡ್ಯಾನ್ಸ್, ಡಿಜೆ ನೈಟ್ಸ್​ (Party, dance, DJ Nights)ಗಳ ಮೇಲೆ ನಿಗಾ ಇಡಲು ಮುಂದಾಗಿದ್ದು, ನಂದಿ ಹಿಲ್ಸ್ ರಸ್ತೆಯಲ್ಲಿ ಪರಿಶೀಲನೆ ಮಾಡಲಾಗುತ್ತಿದೆ. ಡಿಸೆಂಬರ್ (December) 30, 31 ಮತ್ತು ಜನವರಿ 1ರ ವರೆಗೆ ಮೂರು ದಿನಗಳ ಕಾಲ ಸಾರ್ವಜನಿಕರಿಗೆ ಬೆಟ್ಟಗಳ ಪ್ರವೇಕ್ಕೆ ನಿರ್ಬಂಧ ಹೇರಲಾಗಿದ್ದು, ಬೆಂಗಳೂರು ಗ್ರಾಮಾಂತರ ವ್ಯಾಪ್ತಿಯಲ್ಲಿ ಬರುವ ಬೆಟ್ಟಗಳಿಗೆ ಈ ಮೂರು ದಿನ ಪ್ರವೇಶವಿರುವುದಿಲ್ಲ ಎಂದು ಬೆಂಗಳೂರು ಗ್ರಾಮಾಂತರ ಎಸ್​ಪಿ ಮಲ್ಲಿಕಾರ್ಜುನ ಬಾಲದಂಡಿ (SP Mallikarjun Baladandi) ತಿಳಿಸಿದ್ದಾರೆ.

ಇನ್ನು ಹೊಸ ವರ್ಷ ವೇಳೆ ಬೆಂಗಳೂರಿನ ಎಂಜಿ ರೋಡ್ (MG Road), ಚರ್ಚ್ ಸ್ಟ್ರೀಟ್, ರೆಸಿಡೆನ್ಸಿ ರೋಡ್ (Residency Road)ಸೇರಿದಂತೆ ಹಲವೆಡೆ ಹೊಸ ವರ್ಷದ ಪಾರ್ಟಿ ಮಾಡಲು ಸಾವಿರಾರು ಸಂಖ್ಯೆಯಲ್ಲಿ ಜನ ಬರುತ್ತಾರೆ. ಹೀಗಾಗಿ ಕೆಲ ಕಠಿಣ ನಿಯಮಗಳನ್ನು ಪೊಲೀಸರು ಜಾರಿಗೊಳಿಸಿದ್ದಾರೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನಚ್ಚರಿಕೆ ವಹಿಸಲಾಗುತ್ತಿದೆ.

ರಾತ್ರಿ 1 ಗಂಟೆಗೆ ಎಲ್ಲಾ ಪಾರ್ಟಿಗಳು ಬಂದ್ ಆಗಬೇಕು. ಕ್ಲಬ್, ಪಬ್, ಹೊಟೆಲ್ (Club, Pub, Hotel) ಸೇರಿದಂತೆ ಎಲ್ಲಾ ಪಾರ್ಟಿಗೂ ರಾತ್ರಿ 1 ಗಂಟೆವರೆಗೆ ಮಾತ್ರ ಅವಕಾಶ ನೀಡಲಾಗಿದೆ. ನ್ಯೂ ಇಯರ್ ಸೆಲೆಬ್ರೆಷನ್ ಗೆ ಬರುಗ ಗ್ರಾಹಕರ ಆಧಾರ್ ಕಾರ್ಡ್, ಅಡ್ರೆಸ್ ಫ್ರೂಫ್ (Address Proof) ಪಡೆದು ಪಾಸ್ ನೀಡಲು ಪಬ್, ಕ್ಲಬ್, ರೆಸ್ಟೋರೆಂಟ್ ಮಾಲೀಕರು ಮುಂದಾಗಿದ್ದಾರೆ.

ಫುಲ್ ಟೈಟ್ ಆಗಿ ಅಸ್ವಸ್ಥರಾಗೋ ಕಸ್ಟಮರ್ಸ್ (Customers) ಮನೆಗೆ ತಲುಪಿಸಲು ಗ್ರಾಹಕರ ವಿಳಾಸ ಪಡೆಯುತ್ತಿದ್ದು, ವಿಳಾಸ, ಆಧಾರ ಕಾರ್ಡ್ (Aadhar Card) ಪಡೆದು ಪಾರ್ಟಿಗೆ ಎಂಟ್ರಿ ಕೊಡಬೇಕೆಂದು ನಿರ್ಧರಿಸಿದೆ. ಪಾರ್ಟಿಗೆ ಆಗಮಿಸುವ ಕಸ್ಟಮರ್ಸ್ ಸುರಕ್ಷತೆಗೆ ಹೆಚ್ಚಿನ ಆದ್ಯತೆ‌ ನೀಡಲಾಗುತ್ತಿದೆ. ಡ್ರಗ್ಸ್ ಸೇವನೆಗೆ ಕಡಿವಾಣ ಹಾಕಿದ್ದು, ರೇವ್ ಪಾರ್ಟಿಗಳ ಮೇಲೆ ಹದ್ದಿನ ಕಣ್ಣೀಡಲಾಗಿದೆ‌.

ಇದರ ಹೊರತಾಗಿ ನ್ಯೂ ಇಯರ್ ಸೆಲೆಬ್ರೆಷನ್ (Celebration) ಗೆ ಸುರಕ್ಷತೆಗೆ ಡ್ರೋನ್ ಕ್ಯಾಮೆರಾ ಹಾಗೂ ಬೆಂಗಳೂರಿನಾದ್ಯಂತ 6 ಸಾವಿರಕ್ಕೂ ಅಧಿಕ ಸಿಸಿ ಕ್ಯಾಮಾರಗಳು ಕಾರ್ಯಮಿರ್ವಹಿಸ್ತಿದ್ದು, ಮಫ್ತಿಯಲ್ಲೂ ಪೋಲಿಸರು ಸಜ್ಜಾಗಿರಲಿದ್ದಾರೆ. ಬೆಂಗಳೂರಿನಾದ್ಯಂತ ಭದ್ರತೆಗೆಂದು 7 ಸಾವಿರಕ್ಕೂ ಅಧಿಕ ಪೊಲೀಸರ ನಿಯೋಜನೆ ಮಾಡಲಾಕ್ತಿದೆ.

ಭವ್ಯಶ್ರೀ ಆರ್ ಜೆ

Exit mobile version