ರಷ್ಯಾ-ಉಕ್ರೇನ್ ಬಿಕ್ಕಟ್ಟಿನ ನಡುವೆ ; ಸುಮಿಯಿಂದ ಎಲ್ಲಾ ಭಾರತೀಯ ವಿದ್ಯಾರ್ಥಿಗಳನ್ನು ಸ್ಥಳಾಂತರಿಸಲಾಗಿದೆ ಎಂದು ಹೇಳಿದ ಎಂಇಎ

ukraine

ರಷ್ಯಾ ಮತ್ತು ಉಕ್ರೇನ್ ಮಧ್ಯೆ ನಡೆಯುತ್ತಿರುವ ಯುದ್ಧದ ಮಧ್ಯೆ ಸಾವಿರಾರು ಭಾರತೀಯ ವಿದ್ಯಾರ್ಥಿಗಳು ಸಿಲುಕಿಕೊಂಡಿದ್ದಾರೆ. ಭಾರತದ ಎಂಬೆಸ್ಸಿ ಮತ್ತು ಭಾರತ ಸರ್ಕಾರಕ್ಕೆ ವಿದ್ಯಾರ್ಥಿಗಳು ಕೈಮುಗಿದು ನಮ್ಮನ್ನು ಇಲ್ಲಿಂದ ಭಾರತಕ್ಕೆ ತಲುಪಿಸಿ ಎಂದು ಅಂಗಲಾಚಿ ಬೇಡಿಕೊಳ್ಳುತ್ತಿದ್ದಾರೆ. ಕಳೆದ ಒಂದು ವಾರದಿಂದ ಭಾರತ ಸರ್ಕಾರಕ್ಕೆ ಎಲ್ಲಾ ರೀತಿಯಲ್ಲೂ ವಿದ್ಯಾರ್ಥಿಗಳು ಮನವಿ ಮಾಡಿ ಕೇಳಿಕೊಂಡಿದ್ದಾರೆ.

ಆದ್ರೆ ಯುದ್ಧ ಭೀತಿ ಎದುರಾಗಿರುವ ಕಾರಣ ಎಷ್ಟೋ ವಿದ್ಯಾರ್ಥಿಗಳನ್ನು ಭಾರತಕ್ಕೆ ಕರೆಸಿಕೊಳ್ಳಲು ಭಾರತ ಸರ್ಕಾರ ವಿಫಲವಾಗುತ್ತಿದೆ. ವಿದ್ಯಾರ್ಥಿಗಳು ನಾವು ಇಲ್ಲೇ ಸುಮ್ಮನೆ ಕುಳಿತುಕೊಳ್ಳುವುದಿಲ್ಲ ನಾವು ಗಡಿಯವರೆಗೂ ಬರುತ್ತಿವಿ. ಈ ಮಧ್ಯೆ ನಮಗೆ ಏನಾದರೂ ಹೆಚ್ಚು ಕಡಿಮೆಯಾದರೆ ಭಾರತ ಎಂಬೆಸ್ಸಿ ಮತ್ತು ಭಾರತ ಸರ್ಕಾರವೇ ನೇರ ಹೊಣೆ ಎಂದು ಹೇಳಿದ್ದಾರೆ.

ಸದ್ಯ ಈಗ ಬಂದಿರುವ ವರದಿಯ ಅನುಸಾರ ಮುತ್ತಿಗೆ ಹಾಕಿದ ನಗರಗಳಿಂದ ನಾಗರಿಕರಿಗೆ ಪಲಾಯನ ಮಾಡಲು ಉಕ್ರೇನ್‌ನಲ್ಲಿ ಮಾನವೀಯ ಕಾರಿಡಾರ್‌ಗಳನ್ನು ಮಂಗಳವಾರ ತೆರೆಯಲು ರಷ್ಯಾ ಯೋಜಿಸಿದೆ. ಆದರೆ, ಕೈವ್ ಈ ಕ್ರಮವು ಪ್ರಚಾರದ ಸಾಹಸವಾಗಿದೆ ಮತ್ತು ಜನರು ತಪ್ಪಿಸಿಕೊಳ್ಳಲು ಸಾಧ್ಯವಾಗುವುದಿಲ್ಲ ಎಂದು ಖಡಕ್ ಸೂಚನೆ ಮೂಲಕ ತಿಳಿಸಿದೆ. ನಿವಾಸಿಗಳನ್ನು ಸ್ಥಳಾಂತರಿಸುವ ಮಾಸ್ಕೋದ ಪ್ರಸ್ತಾಪವನ್ನು ಖಂಡಿಸಲಾಗಿದೆ. ಏಕೆಂದರೆ ಹೆಚ್ಚಿನ ಮಾರ್ಗಗಳು ರಷ್ಯಾ ಅಥವಾ ಅದರ ಮಿತ್ರ ರಾಷ್ಟ್ರ ಬೆಲಾರಸ್‌ಗೆ ಕಾರಣವಾಯಿತು ಮತ್ತು ಆಕ್ರಮಣಕಾರಿ ಪಡೆಗಳು ವಿನಾಶಕಾರಿ ಶೆಲ್ ದಾಳಿಯನ್ನು ಎಸಗಿತು.

ಉಕ್ರೇನಿಯನ್ ಮಿಲಿಟರಿ ಮಂಗಳವಾರ, ಸುಮಾರು ಎರಡು ವಾರಗಳ ಯುದ್ಧದಲ್ಲಿ, ರಷ್ಯಾ ತನ್ನ ಪಡೆಗಳು ಮತ್ತು ಸಾಧನಗಳನ್ನು ಪ್ರಮುಖ ಸಂಘರ್ಷ ವಲಯಗಳ ಸುತ್ತಲೂ ಹೆಚ್ಚಿಸುತ್ತಿದೆ ಎಂದು ಹೇಳಿದೆ. ಅರಿಂದಮ್ ಬಾಗ್ಚಿ ಅವರು ಸುಮಿಯಿಂದ ಎಲ್ಲಾ ಭಾರತೀಯ ವಿದ್ಯಾರ್ಥಿಗಳನ್ನು ಹೊರತರಲು ನಮಗೆ ಸಾಧ್ಯವಾಗಿದೆ. ಈ ವಿಷಯ ತಿಳಿಸಲು ನಮಗೆ ಸಂತೋಷವಾಗಿದೆ.

ವಿದ್ಯಾರ್ಥಿಗಳು ಪ್ರಸ್ತುತ ಪೋಲ್ಟವಾ ಮಾರ್ಗದಲ್ಲಿದ್ದಾರೆ. ಅಲ್ಲಿಂದ ಅವರು ಪಶ್ಚಿಮ ಉಕ್ರೇನ್‌ಗೆ ತೆರೆಳಿ ರೈಲುಗಳನ್ನು ಹತ್ತಲಿದ್ದಾರೆ. ಅವರನ್ನು ಮನೆಗೆ ತವರಿಗೆ ಕರೆತರಲು #OperationGanga ಅಡಿಯಲ್ಲಿ ವಿಮಾನಗಳನ್ನು ಸಿದ್ಧಪಡಿಸಲಾಗಿದೆ ಎಂದು ಸುದ್ದಿಯನ್ನು ಟ್ವೀಟ್ ಮಾಡಿದ್ದಾರೆ.

Exit mobile version