ಶಾರುಖ್ ಖಾನ್ ಪುತ್ರಿ ಸುಹಾನಾ ಖಾನ್ ಇತ್ತೀಚಿಗೆ ತನ್ನ ಹಾಟ್ ಫೋಟೋಗಳ ಮುಖೇನ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದಾರೆ . ಕಾರಣ ಈ ಚಿತ್ರಗಳನ್ನು ನೋಡಿದ ಫ್ಯಾನ್ಸ್ ಸುಹಾನಾಗೆ ಬಾಲಿವುಡ್ ಪ್ರವೇಶ ಯಾವಾಗ ಎಂಬ ಹಳೆಯ ಪ್ರಶ್ನೆಯನ್ನೇ ಮತ್ತೆ ಮುಂದಿಟ್ಟಿದ್ದಾರೆ.ಬಾಲಿವುಡ್ ಖ್ಯಾತ ನಟ ಶಾರುಖ್ ಖಾನ್ ಪುತ್ರಿ ಸುಹಾನಾ ಖಾನ್ ಇನ್ನೂ ಬಾಲಿವುಡ್ಗೆ ಕಾಲಿಟ್ಟಿಲ್ಲ. ಆದರೆ ನಟಿಗೆ ಈಗಾಗಲೇ ಬರೋಬ್ಬರಿ 2 ಮಿಲಿಯನ್ಗೂ ಅಧಿಕ ಅಭಿಮಾನಿಗಳಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಆಕ್ಟಿವ್ ಇರುವ, ಇತ್ತೀಚೆಗೆ ಸಖತ್ ಬೋಲ್ಡ್ ಲುಕ್ನಲ್ಲಿ ಕಾಣಿಸಿಕೊಂಡಿರುವ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.

ಸುಹಾನಾ ಪೋಸ್ಟ್ಗಳಿಗೆ ಫ್ಯಾನ್ಸ್ ಚಕಿತರಾಗಿದ್ದು, ಬಾಲಿವುಡ್ ಪ್ರವೇಶ ಯಾವಾಗ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ನ್ಯೂಯಾರ್ಕ್ನಲ್ಲಿ ವಿದ್ಯಾಭ್ಯಾಸ ಮುಗಿಸಿ, ಮುಂಬೈನಲ್ಲಿ ಅವರು ನೆಲೆಸಿದ್ದಾರೆ. ಇವರಿಗೆ ನಟನೆಯಲ್ಲಿ ಆಸಕ್ತಿಯಿದೆ ಎಂದು ಸ್ವತಃ ಶಾರುಖ್ ಹೇಳಿದ್ದರು. ಇದರಿಂದ ಬಾಲಿವುಡ್ ಪ್ರವೇಶದ ಬಗ್ಗೆ ಅಪಾರ ನಿರೀಕ್ಷೆಗಳಿವೆ. ಸುಹಾನಾ ಅಭಿನಯ ತರಬೇತಿ ಮುಗಿಸಿದ್ದು, ಅವರ ನಟನೆಯ ಹಲವು ವಿಡಿಯೋಗಳು ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿ ಸಂಚಲನ ಮೂಡಿಸಿದೆ.