ಹಾಟ್‌ ಆಗಿ ಕಾಣಿಸಿಕೊಂಡು ಪಡ್ಡೆ ಹುಡುಗರ ನಿದ್ದೆಗೆಡಿಸಿರುವ ಶಾರುಖ್‌ ಪುತ್ರಿ

ಶಾರುಖ್ ಖಾನ್ ಪುತ್ರಿ ಸುಹಾನಾ ಖಾನ್ ಇತ್ತೀಚಿಗೆ ತನ್ನ ಹಾಟ್‌ ಫೋಟೋಗಳ ಮುಖೇನ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದಾರೆ  . ಕಾರಣ ಈ  ಚಿತ್ರಗಳನ್ನು ನೋಡಿದ ಫ್ಯಾನ್ಸ್ ಸುಹಾನಾಗೆ ಬಾಲಿವುಡ್ ಪ್ರವೇಶ ಯಾವಾಗ ಎಂಬ ಹಳೆಯ ಪ್ರಶ್ನೆಯನ್ನೇ ಮತ್ತೆ ಮುಂದಿಟ್ಟಿದ್ದಾರೆ.ಬಾಲಿವುಡ್​​ ಖ್ಯಾತ ನಟ ಶಾರುಖ್ ಖಾನ್ ಪುತ್ರಿ ಸುಹಾನಾ ಖಾನ್ ಇನ್ನೂ ಬಾಲಿವುಡ್​​ಗೆ ಕಾಲಿಟ್ಟಿಲ್ಲ. ಆದರೆ ನಟಿಗೆ ಈಗಾಗಲೇ ಬರೋಬ್ಬರಿ 2 ಮಿಲಿಯನ್​ಗೂ ಅಧಿಕ ಅಭಿಮಾನಿಗಳಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಆಕ್ಟಿವ್ ಇರುವ, ಇತ್ತೀಚೆಗೆ ಸಖತ್ ಬೋಲ್ಡ್​ ಲುಕ್​ನಲ್ಲಿ ಕಾಣಿಸಿಕೊಂಡಿರುವ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.

ಸುಹಾನಾ ಪೋಸ್ಟ್​​ಗಳಿಗೆ ಫ್ಯಾನ್ಸ್ ಚಕಿತರಾಗಿದ್ದು, ಬಾಲಿವುಡ್ ಪ್ರವೇಶ ಯಾವಾಗ ಎಂದು ಕಾಮೆಂಟ್ ಮಾಡುತ್ತಿದ್ದಾರೆ.  ನ್ಯೂಯಾರ್ಕ್​ನಲ್ಲಿ ವಿದ್ಯಾಭ್ಯಾಸ ಮುಗಿಸಿ, ಮುಂಬೈನಲ್ಲಿ ಅವರು ನೆಲೆಸಿದ್ದಾರೆ. ಇವರಿಗೆ  ನಟನೆಯಲ್ಲಿ ಆಸಕ್ತಿಯಿದೆ ಎಂದು ಸ್ವತಃ ಶಾರುಖ್ ಹೇಳಿದ್ದರು. ಇದರಿಂದ ಬಾಲಿವುಡ್​ ಪ್ರವೇಶದ ಬಗ್ಗೆ ಅಪಾರ ನಿರೀಕ್ಷೆಗಳಿವೆ. ಸುಹಾನಾ ಅಭಿನಯ ತರಬೇತಿ ಮುಗಿಸಿದ್ದು, ಅವರ ನಟನೆಯ ಹಲವು ವಿಡಿಯೋಗಳು ಜಾಲತಾಣದಲ್ಲಿ ಸಾಕಷ್ಟು ವೈರಲ್‌ ಆಗಿ ಸಂಚಲನ ಮೂಡಿಸಿದೆ.

Exit mobile version