ಮುಸ್ಕಾನ್ ವಿರುದ್ಧ ತನಿಖೆ ಕೈಗೊಳ್ಳುವುದರಲ್ಲಿ ತಪ್ಪೇನು ಇಲ್ಲ : ಸಂಸದೆ ಸುಮಲತಾ ಅಂಬರೀಶ್!

sumalatha ambareesh

ಹಿಜಾಬ್(Hijab) ಸಂಘರ್ಷದಲ್ಲಿ ಮಂಡ್ಯದ ಪಿ.ಇ.ಎಸ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿ ಮುಸ್ಕಾನ್(Muskan) ಅಲ್ಲಾಹು ಅಕ್ಬರ್ ಘೋಷಣೆ ಕೂಗುವ ಮೂಲಕ ತೀವ್ರ ಚರ್ಚೆಗೆ ಒಳಗಾಗಿದ್ದರು. ಕಳೆದ ವಾರ ಅಲ್‍ಖೈದಾ(Al-Khaida) ಮುಖ್ಯಸ್ಥರು ಅಲ್ಲಾಹು ಅಕ್ಬರ್ ಘೋಷಣೆ ಕೂಗಿದ್ದ ಮುಸ್ಕಾನ್, ಭಾರತದ ಉದಾತ್ತ ಮಹಿಳೆ, ಧೈರ್ಯದಲ್ಲಿ ಸ್ಪೂರ್ತಿ ಹಾಗೂ ಮಾದರಿ ಎಂದು ಹೇಳಿ ಎಲ್ಲರ ಕೆಂಗಣ್ಣಿಗೂ ಗುರಿಯಾದರು.

ಸದ್ಯ ಈ ಚರ್ಚೆಗಳ ಬೆನ್ನಲ್ಲೇ ಮತ್ತೇ ಮುಸ್ಕಾನ್ ಹೆಸರು ಪ್ರಮುಖವಾಗಿ ಕೇಳಿಬಂದಿದ್ದು, ಮಂಡ್ಯ ಸಂಸದೆ ಸುಮಲತಾ ಅಂಬರೀಶ್(Sumalatha Ambareesh) ಅವರು ವಿದ್ಯಾರ್ಥಿನಿ ಮುಸ್ಕಾನ್ ವಿರುದ್ಧ ತನಿಖೆ ನಡೆಸುವುದರಲ್ಲಿ ತಪ್ಪೇನಿಲ್ಲ ಎಂದು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಅಲ್‍ಖೈದಾ ಮುಖ್ಯಸ್ಥ ಕೊಟ್ಟ ಹೇಳಿಕೆ ನಂತರ ವಿದ್ಯಾರ್ಥಿನಿ ಮುಸ್ಕಾನ್ ವಿರುದ್ಧ ತನಿಖೆ ಕೈಗೊಳ್ಳಬೇಕು ಎಂದು ಬಿಜೆಪಿ(BJP) ನಾಯಕರು ಆಗ್ರಹಿಸಿದ್ದಾರೆ.

ಈ ಹೇಳಿಕೆಯ ಪ್ರಹಾರದ ನಡುವೆ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದೆ ಸುಮಲತಾ ಅಂಬರೀಶ್ ಅವರು, “ತನಿಖೆ ಕೈಗೊಳ್ಳುವುದರಲ್ಲಿ ತಪ್ಪೇನು ಇಲ್ಲ, ವಿದ್ಯಾರ್ಥಿನಿ ಕುರಿತು ಅವರು ಮಾತನಾಡಿರುವ ಆ ಒಂದು ವೀಡಿಯೋ ನಿಜವಾ ಅಥವಾ ಉದ್ದೇಶ ಪೂರ್ವಕವಾಗಿ ಯರಾದರೂ ಸೃಷ್ಟಿ ಮಾಡಿರುವುದಾ ಎಂಬುದು ತನಿಖೆಯಿಂದಲೇ ಹೊರಬರಬೇಕು, ಆಗ ಸತ್ಯ ತಿಳಿಯುತ್ತದೆ” ಎಂದು ಹೇಳಿದ್ದಾರೆ.

Exit mobile version