• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಮನರಂಜನೆ

ಸೂಪರ್ ಸ್ಟಾರ್ ಜೊತೆ ಸುಂದರಂ ಮಾಸ್ಟರ್

Sharadhi by Sharadhi
in ಮನರಂಜನೆ
ಸೂಪರ್ ಸ್ಟಾರ್ ಜೊತೆ ಸುಂದರಂ ಮಾಸ್ಟರ್
0
SHARES
0
VIEWS
Share on FacebookShare on Twitter

ರಿಯಲ್ ಸ್ಟಾರ್ ಉಪೇಂದ್ರ ಅವರ ಅಣ್ಣನ ಮಗ ನಿರಂಜನ್ ಸುಧೀಂದ್ರ ನಾಯಕನಾಗಿ ನಟಿಸುತ್ತಿರುವ ‘ಸೂಪರ್ ಸ್ಟಾರ್’ ಚಿತ್ರದಲ್ಲಿ ಖ್ಯಾತ ನೃತ್ಯ ನಿರ್ದೇಶಕ ಸುಂದರಂ ಮಾಸ್ಟರ್ ನಟಿಸಿರುವ ದೃಶ್ಯಗಳ ಚಿತ್ರೀಕರಣ ಇತ್ತೀಚೆಗಷ್ಟೇ ನೆರವೇರಿದೆ.

ಸುಂದರಂ ಮಾಸ್ಟರ್ ಒಬ್ಬರು ಕೊರಿಯೋಗ್ರಾಫರ್ ಮಾತ್ರವಲ್ಲ, ಖ್ಯಾತ ನಟ, ಕೊರಿಯೋಗ್ರಾಫರ್ ಪ್ರಭುದೇವ ಅವರ ತಂದೆಯೂ ಹೌದು. ಅವರು ತಮ್ಮ 86ನೇ ವಯಸ್ಸಿನಲ್ಲೂ ಉತ್ಸಾಹದಿಂದ ಚಿತ್ರೀಕರಣದಲ್ಲಿ ಪಾಲ್ಗೊಂಡಿರುವುದು ವಿಶೇಷ. ಅಂದಹಾಗೆ ಸುಂದರಂ ಮಾಸ್ಟರ್, ಈ ಚಿತ್ರದಲ್ಲೂ ನೃತ್ಯ ನಿರ್ದೇಶಕನ‌ ಪಾತ್ರದಲ್ಲೇ ಕಾಣಿಸಿಕೊಳ್ಳುತ್ತಿದ್ದಾರೆ.
ಇತ್ತೀಚೆಗೆ ಇವರ ಅಭಿನಯದ ಭಾಗದ ಚಿತ್ರೀಕರಣ ಬೆಂಗಳೂರಿನಲ್ಲಿ ನಡೆಯಿತು.

ಈ ವಯಸ್ಸಿನಲ್ಲೂ ಯಾರಿಗೂ ಕಮ್ಮಿ ಇಲ್ಲದ ಹಾಗೆ ನಟಿಸಿರುವ ಸುಂದರಂ ಮಾಸ್ಟರ್ ಚಿತ್ರೀಕರಣದ ವೇಳೆ ಪಾಲ್ಗೊಂಡ ಕೆಲವು ಸನ್ನಿವೇಶಗಳನ್ನು ಚಿತ್ರತಂಡ ಮೇಕಿಂಗ್ ಟೀಸರ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆ ಮಾಡಿದೆ. ರಮೇಶ್ ವೆಂಕಟೇಶ್ ಬಾಬು ನಿರ್ದೇಶನದ ಈ ಚಿತ್ರದ ಎರಡು ಹಂತಗಳ ಚಿತ್ರೀಕರಣ ‌ಮುಕ್ತಾಯವಾಗಿದೆ.‌ ಮೂರನೇ ಹಂತದ ಚಿತ್ರೀಕರಣ ಸದ್ಯದಲ್ಲೇ ಆರಂಭವಾಗಲಿದೆ.‌

ನಿರಂಜನ್ ಸುಧೀಂದ್ರ ಈ ಚಿತ್ರಕ್ಕಾಗಿ ಸಾಕಷ್ಟು ವರ್ಕ್ ಔಟ್ ಮಾಡಿದ್ದಾರೆ. ಜಾರ ಎಸ್ಮಿನ್ ಈ ಚಿತ್ರದ ನಾಯಕಿ. ಅಚ್ಯುತ ಕುಮಾರ್, ರಂಗಾಯಣ ರಘು, ದೇವಿಯಾನಿ, ಸುಧಾ ಬೆಳವಾಡಿ, ಅವಿನಾಶ್, ಸೂರಜ್ ಮುಂತಾದವರ ತಾರಾಬಳಗ ಈ ಚಿತ್ರದಲ್ಲಿದೆ. RVB ಸಿನಿಮಾಸ್ ಲಾಂಛನದಲ್ಲಿ ಮೈಲಾರಿ ಎಂ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ರಾಘವೇಂದ್ರ ವಿ ಸಂಗೀತ ನೀಡುತ್ತಿದ್ದಾರೆ. ಭರ್ಜರಿ ಚೇತನ್ ಕುಮಾರ್ ಹಾಡುಗಳನ್ನು ಬರೆದಿದ್ದಾರೆ. ಯೋಗಿ ಛಾಯಾಗ್ರಹಣ, ವಿಜಯ್ ಕುಮಾರ್ ಸಂಕಲನ ಹಾಗೂ ಮೋಹನ್ ಬಿ ಕೆರೆ ಅವರ ಕಲಾ ನಿರ್ದೇಶನ ಈ ಚಿತ್ರಕ್ಕಿದೆ.

Related News

ಅರ್ಜುನ್​ ಸರ್ಜಾ ವಿರುದ್ಧ ಮೀ ಟೂ ಕೇಸ್‌ಗೆ ಬಿಗ್ ಟ್ವಿಸ್ಟ್ : ಶ್ರುತಿ ಹರಿಹರನ್‌ಗೆ ನೋಟಿಸ್​ ಜಾರಿ ಮಾಡಿದ ಖಾಕಿ
ಮನರಂಜನೆ

ಅರ್ಜುನ್​ ಸರ್ಜಾ ವಿರುದ್ಧ ಮೀ ಟೂ ಕೇಸ್‌ಗೆ ಬಿಗ್ ಟ್ವಿಸ್ಟ್ : ಶ್ರುತಿ ಹರಿಹರನ್‌ಗೆ ನೋಟಿಸ್​ ಜಾರಿ ಮಾಡಿದ ಖಾಕಿ

June 9, 2023
dashan
ಮನರಂಜನೆ

ಅಭಿಷೇಕ್ ಅಂಬರೀಶ್-ಅವಿವಾ ರಿಸೆಪ್ಷನ್ ಗೆ ಯಾರ್ಯಾರು ಬಂದಿದ್ದರು ಗೊತ್ತಾ ?

June 8, 2023
ಒಟಿಟಿಗೆ ಈ ವಾರ ಬರುತ್ತಿವೆ ಸೂಪರ್ ಹಿಟ್ ಸಿನಿಮಾಗಳು
ಮನರಂಜನೆ

ಒಟಿಟಿಗೆ ಈ ವಾರ ಬರುತ್ತಿವೆ ಸೂಪರ್ ಹಿಟ್ ಸಿನಿಮಾಗಳು

June 8, 2023
ಸೂಪರ್‌ಸ್ಟಾರ್ ರಜನಿಕಾಂತ್, ಶಿವರಾಜ್‌ಕುಮಾರ್ ನಟನೆಯ ಜೈಲರ್’ ಶೂಟಿಂಗ್ ಮುಕ್ತಾಯ ; ‘ಥಿಯೇಟರ್‌ನಲ್ಲಿ ಸಿಗೋಣ..’ ಎಂದ ‘ತಲೈವಾ’
ಪ್ರಮುಖ ಸುದ್ದಿ

ಸೂಪರ್‌ಸ್ಟಾರ್ ರಜನಿಕಾಂತ್, ಶಿವರಾಜ್‌ಕುಮಾರ್ ನಟನೆಯ ಜೈಲರ್’ ಶೂಟಿಂಗ್ ಮುಕ್ತಾಯ ; ‘ಥಿಯೇಟರ್‌ನಲ್ಲಿ ಸಿಗೋಣ..’ ಎಂದ ‘ತಲೈವಾ’

June 5, 2023

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
Menu
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
Menu
  • About Us
  • Contact Us
  • For Advertisement

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.