Bengaluru: ಸದನಕ್ಕೆ ಅಪಮಾನ ಮಾಡಿ, ಸದನದ ನಡಾವಳಿಗಳನ್ನು ಉಲ್ಲಂಘನೆ ಮಾಡಿದ ಆರೋಪದ ಮೇಲೆ 10 ಬಿಜೆಪಿ (suspension of 10 BJP MLAs) ಶಾಸಕರನ್ನು ಅಧಿವೇಶನದಿಂದ
ಅಮಾನತುಗೊಳಿಸಿ, ಸ್ಪೀಕರ್ ಯು.ಟಿ.ಖಾದರ್ (U T Khadar) ಆದೇಶ ಹೊರಡಿಸಿದ್ದಾರೆ.ವಿಧಾನಸಭೆಯಲ್ಲಿ ಇಂದು ಭಾರೀ ಗದ್ದಲ ಏರ್ಪಟ್ಟ ಹಿನ್ನೆಲೆ ಸದನದ ಸ್ಪೀಕರ್ ಯು.ಟಿ. ಖಾದರ್ ಅವರು
318 ನಿಯಮದ ಹಕ್ಕನ್ನು ಚಲಾಯಿಸಿ 10 ಸದಸ್ಯರನ್ನು ಅಧಿವೇಶನದಿಂದ ಅಮಾನತುಗೊಳಿಸಿದ್ದಾರೆ. ಅಮಾನತುಗೊಂಡ 10 ಬಿಜೆಪಿ (BJP) ಸದಸ್ಯರನ್ನು ಮಾರ್ಷಲ್ಗಳು ವಿಧಾನಸಭೆಯಿಂದ ಹೊರಹಾಕಿದ್ದಾರೆ.
ಇದನ್ನು ಓದಿ: INDIA VS NDA : ಈ ಕದನದಲ್ಲಿ ಗೆಲ್ಲುವವರು ಯಾರು ? ಸೋಲುವವರು ಯಾರು?
ಇಂದು ನಡೆದ ಅಧಿವೇಶನದಲ್ಲಿ ಎರಡು ಪಕ್ಷಗಳ ನಡುವೆ ಭಾರೀ ಹೈಡ್ರಾಮಾ ನಡೆದಿದ್ದು, ಸ್ಪೀಕರ್ (Speaker) ಪೀಠವನ್ನು ಅಲಂಕರಿಸಿದ್ದ ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ (Rudrappa lambani)
ಮೇಲೆ ವಿಧೇಯಕ ಪ್ರತಿಯನ್ನು ಹರಿದು ಬಿಸಾಡಿದ ಘಟನೆ ನಡೆಯಿತು. ಸದನದಲ್ಲಿ ಇಂದು ಎರಡು ಪಕ್ಷಗಳ ನಡುವಿನ ಶಾಸಕರ ನಡುವೆ ತೀವ್ರ ಮಾತಿನ ಚಕಮಕಿ ನಡೆಯಿತು.
ಸರ್ಕಾರದ ವಿದೇಯಕವನ್ನು ವಿರೋಧಿಸಿದ ಬಿಜೆಪಿ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸುವ ವೇಳೆ, ವಿದೇಯಕದ (suspension of 10 BJP MLAs) ಪ್ರತಿಯನ್ನು ಹರಿದು, ಉಪಸಭಾಧ್ಯಕ್ಷ
ರುದ್ರಪ್ಪ ಲಮಾಣಿ ಮೇಲೆ ಎಸೆದರು. ನಂತರ ಸದನಕ್ಕೆ ಆಗಮಿಸಿದ ಸ್ಪೀಕರ್ ಯು.ಟಿ.ಖಾದರ್, ಸ್ಪೀಕರ್ ಪೀಠವನ್ನು ಅವಮಾನಿಸಿದ ಆರೋಪದ ಮೇಲೆ 10 ಬಿಜೆಪಿ ಸದಸ್ಯರನ್ನು ಅಮಾನತು ಮಾಡಿದರು.
ಅಮಾನತುಗೊಂಡ ಬಿಜೆಪಿ ಶಾಸಕರು : ಧೀರಜ್ ಮುನಿರಾಜು, ವೇದವ್ಯಾಸ್ ಕಾಮತ್, ಆರ್. ಅಶೋಕ್, ಅಶ್ವಥ್ ನಾರಾಯಣ್, ಯಶಪಾಲ್ ಸುವರ್ಣ, ಅರವಿಂದ ಬೆಲ್ಲದ್, ಸುನಿಲ್ ಕುಮಾರ್,
ಉಮಾನಾಥ್ ಕೋಟ್ಯನ್, ಆರಗ ಜ್ಞಾನೇಂದ್ರ, ಭರತ್ ಶೆಟ್ಟಿ