ಅಕ್ರಮ(Illegal) ಮತ್ತು ಗೌಪತ್ಯೆಗೆ(Confidential) ಹೆಸರಾಗಿರುವ ಸ್ವಿಜರ್ಲೆಂಡ್ ಬ್ಯಾಂಕುಗಳಲ್ಲಿ(Swizertland Bank) ಭಾರತೀಯರ ಹಣದ ಪ್ರಮಾಣ ಹೆಚ್ಚಳವಾಗಿದೆ ಎಂದು ವರದಿಯೊಂದು ಪ್ರಕಟವಾಗಿದೆ. ಭಾರತದಲ್ಲಿರುವ ಸ್ವಿಜರ್ಲೆಂಡ್ ಮೂಲದ ಬ್ಯಾಂಕುಗಳು ಮತ್ತು ಸಿಜರ್ಲೆಂಡ್‍ನಲ್ಲಿರುವ ಬ್ಯಾಂಕುಗಳಲ್ಲಿ ಭಾರತೀಯರ ಮತ್ತು ಭಾರತೀಯ ಮೂಲದ ಸಂಸ್ಥೆಗಳ ಹಣದ ಪ್ರಮಾಣ ಕಳೆದ ಹದಿನಾಲ್ಕು ವರ್ಷಗಳಲ್ಲೇ ಅತ್ಯಧಿಕ ಮಟ್ಟ ತಲುಪಿದೆ ಎಂದು ಸ್ವಿಸ್ ಸೆಂಟ್ರಲ್ ಬ್ಯಾಂಕಿನ ವಾರ್ಷಿಕ ವರದಿ ತಿಳಿಸಿದೆ.
ಸ್ವಿಸ್ ಸೆಂಟ್ರಲ್ ಬ್ಯಾಂಕಿನ ವಾರ್ಷಿಕ ವರದಿಯನ್ವಯ, 2020ರಲ್ಲಿ ಭಾರತೀಯರು ಮತ್ತು ಭಾರತೀಯ ಮೂಲದ ಸಂಸ್ಥೆಗಳ ಒಟ್ಟು ಠೇವಣಿಯ ಮೊತ್ತ 20,700 ಕೋಟಿ ರೂ.ಗಳಿಷ್ಟಿತ್ತು. ಅದೇ ರೀತಿ 2006ರಲ್ಲಿ ಒಟ್ಟು ಠೇವಣಿ ಮೊತ್ತ 50,000 ಕೋಟಿ ರೂ.ಗಳಿಷ್ಟಿತ್ತು. ಇದೀಗ ಈ ಒಟ್ಟು ಠೇವಣಿಯ ಮೊತ್ತ 30,500 ಕೋಟಿ.ಗಳಿಗೆ ಏರಿಕೆಯಾಗಿದೆ. ಕಳೆದ ಹದಿನಾಲ್ಕು ವರ್ಷಗಳಲ್ಲೇ ಅತ್ಯಧಿಕ ಠೇವಣಿಯನ್ನು ಭಾರತೀಯರು ಮತ್ತು ಭಾರತೀಯ ಮೂಲದ ಸಂಸ್ಥೆಗಳು ಸ್ವಿಸ್ ಮೂಲದ ಬ್ಯಾಂಕುಗಳಲ್ಲಿ ಇಟ್ಟಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಇನ್ನು ಸ್ವಿಸ್ ಬ್ಯಾಂಕುಗಳಲ್ಲಿ ಭಾರತೀಯರ ಉಳಿತಾಯ ಖಾತೆಯ ಮೊತ್ತ 4,800 ಕೋಟಿ ರೂ.ಗಳಿಗೆ ಏರಿಕೆಯಾಗಿದೆ. ಅದೇ ರೀತಿ 15,600 ಕೋಟಿ ರೂ.ಗಳ ಮೌಲ್ಯದ ಬಾಂಡ್ ಮತ್ತು ಭದ್ರತೆಗಳನ್ನು ಭಾರತೀಯರ ಹೆಸರಿನಲ್ಲಿ ಖರೀದಿಸಲಾಗಿದೆ. ಇನ್ನು ಭಾರತೀಯರು ಸ್ವಿಸ್ ಬ್ಯಾಂಕುಗಳಲ್ಲಿ ಇಟ್ಟಿರುವ ಈ ಹಣವನ್ನು ಕಪ್ಪು ಹಣವೆಂದು ಬಿಂಬಿಸಬಾರದು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಈ ಕುರಿತು ಕೆಲವು ಮಾಹಿತಿಗಳನ್ನು ನಾವು ಭಾರತ ಸರ್ಕಾರದೊಂದಿಗೆ ಹಂಚಿಕೊಂಡಿದ್ದೇವೆ ಎಂದು ವಾರ್ಷಿಕ ವರದಿಯಲ್ಲಿ ತಿಳಿಸಲಾಗಿದೆ.