Mangalore: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ವೇಣೂರಿನಲ್ಲಿ (Syed Bashir arrested) ಭಾನುವಾರ(ಜ.೨೮) ಪಟಾಕಿ ಗೋದಾಮಿನಲ್ಲಿ ನಡೆದ ಸ್ಪೋಟದಲ್ಲಿ ಮೂವರು ಮೃತಪಟ್ಟಿದ್ದ

ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳ್ತಂಗಡಿ ಪೊಲೀಸರು (Syed Bashir arrested) ಆರೋಪಿ ಸಯ್ಯದ್ ಬಶೀರ್ನನ್ನು ಬಂಧಿಸಿದ್ದಾರೆ.
ಪೋಲೀಸರ ವಶದಲ್ಲಿರುವ ಆರೋಪಿ ಬಶೀರ್ನನ್ನು ಅಜ್ಞಾತ ಸ್ಥಳದಲ್ಲಿ ವಿಚಾರಣೆ ಮಾಡಲಾಗುತ್ತಿದ್ದು, ವಿಚಾರಣೆ ಬಳಿಕ ನಿಜ ಸಂಗತಿ ಏನೆಂಬುದು ಬಯಲಾಗಲಿದೆ. ಇನ್ನು ಸ್ಫೋಟದ ತೀರ್ವತೆಗೆ
ಸುತ್ತಮುತ್ತಲಿನ ಮನೆಗಳಿಗೆ ಹಾನಿಯಾಗಿದ್ದು, ಅದೃಷ್ಟವಶಾತ್ ಪ್ರಾಣಪಾಯದಿಂದ ಪಾರಾದ ವೃದ್ಧ ದಂಪತಿ ಸಂಪೂರ್ಣವಾಗಿ ಕುಸಿದು ಬಿದ್ದಿದ್ದು, ಛಾವಣಿಯ ಶೀಟ್ಗಳು ತುಂಡು ತುಂಡಾಗಿ ಮುರಿದು
ಕೆಳಗೆ ಬಿದ್ದಿವೆ. ಒಟ್ಟು ಐದು ಬಾರಿ ಸ್ಫೋಟ ಸಂಭವಿಸಿತು. ಸ್ಫೋಟ ಆಗುತ್ತಿದ್ದಂತೆಯೇ ಕಣ್ಣು ಮಂಜಾಯಿತು. ಮನೆಯ ಶೀಟ್ಗಳು ಮುರಿದು ಕೆಳಗೆ ಬಿದ್ದವು. ಮನೆ ಜಖಂಗೊಂಡಿದೆ. ಈ ಹಿನ್ನೆಲೆಯಲ್ಲಿ ಸರಕಾರ
ಪರಿಹಾರ ನೀಡಬೇಕು ಎಂದು ವೃದ್ಧ ದಂಪತಿ ಆಗ್ರಹಿಸಿದ್ದಾರೆ.
ಟ್ರಯಲ್ ಬ್ಲಾಸ್ಟ್ ನಡೆದಿರಬಹುದು ಸ್ಥಳೀಯರ ಅನುಮಾನ
ಕಳೆದ ಎರಡು ತಿಂಗಳ ಹಿಂದೆ 9 ಜನ ಕಾರ್ಮಿಕರು ಬಂದು ಕೆಲಸ ಮಾಡುತ್ತಿದ್ದರು. ಯಾರನ್ನೂ ಗೋದಾಮಿನ ಹತ್ತಿರ ಬಿಡದೆ, ರೋಡ್ನಲ್ಲಿ ವಾಚ್ ಮಾಡುತ್ತಾ ಕೆಲಸ ಮಾಡುತ್ತಿದ್ದರು. ಇಲ್ಲಿ ಪಟಾಕಿ
ತಯಾರಿಸುವುದಾಗಿ ಬಶೀರ್ ಲೈಸೆನ್ಸ್ ತೆಗೆದುಕೊಂಡಿದ್ದನು. ಅದರೆ ಇಲ್ಲಿ ಬಾಂಬ್ ತಯಾರು ಮಾಡುತ್ತಿದ್ದರು ಅಂತ ಸ್ಥಳೀಯರು ಅನುಮಾನ ವ್ಯಕ್ತ ಪಡಿಸಿದ್ದಾರೆ.
ಕಳೆದ ಎರಡು ತಿಂಗಳ ಹಿಂದೆ ಸರಿಯಾಗಿ ಕೆಲಸ ನಡೆಯುತ್ತಿತ್ತು. ಆದರೆ ಎರಡು ತಿಂಗಳಿಂದ ಬೇರೆ ಏನೋ ನಡೆಯುತ್ತಿದೆ. ಇಲ್ಲಿ ರವಿವಾರ ಯಾವುದೋ ಟ್ರಯಲ್ ಬ್ಲಾಸ್ಟ್ ನಡೆದಿದೆ. ಸುತ್ತಾಮುತ್ತಾ ಸಾಕಷ್ಟು
ಮನೆಗಳಿಗೆ ಹಾನಿಯಾಗಿದೆ. ಮನೆಯಲ್ಲಿ ಮಕ್ಕಳು ಊಟ ಮಾಡುತ್ತಿಲ್ಲ. ಇನ್ಮುಂದೆ ಇಲ್ಲಿ ಪಟಾಕಿ ತಯಾರಿಕೆ ಮಾಡುವುದನ್ನು ನಿಲ್ಲಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಏನಿದು ಪ್ರಕರಣ:
ನಿನ್ನೆ ಬೆಳ್ತಂಗಡಿ ತಾಲೂಕಿನ ವೇಣೂರು ಗೋಳಿಯಂಗಡಿ ಸಮೀಪದ ಪಟಾಕಿ ತಯಾರಿಕ ಘಟಕದಲ್ಲಿ ಭೀಕರ ಸ್ಫೋಟ ಸಂಭವಿಸಿತ್ತು. ಐದು ಬಾರಿ ಸ್ಫೋಟ ಸಂಭವಿಸಿದ್ದರಿಂದ ಮೂವರು ಕಾರ್ಮಿಕರು
ದುರ್ಮಣಕ್ಕೀಡಾಗಿದ್ದರು. ಆದ್ರೆ ಈ ಸ್ಫೋಟದ ಸ್ಥಳದಲ್ಲಿ ಸಿಕ್ಕಿರುವ ವಸ್ತುಗಳು ಹಲವು ಅನುಮಾನಗಳನ್ನು ಹುಟ್ಟು ಹಾಕಿತ್ತು. ಹೀಗಾಗಿ ಪೊಲೀಸರು ಸಮಗ್ರ ತನಿಖೆಗೆ ಇಳಿದಿದ್ದರು, ಪಟಾಕಿ ತಯಾರಿಕ
ಘಟಕದ ಮಾಲೀಕ ಸಯ್ಯದ್ ಬಶೀರ್ನನ್ನು ವಿಚಾರಣೆ ನಡೆಸಲು ಮುಂದಾದರು. ಆದರೆ ಬಶೀರ್ ಪರಾರಿಯಾಗುತ್ತಿದ್ದ ವಿಚಾರ ತಿಳಿದು ಆತನನ್ನು ಪೊಲೀಸರು ಬಂಧಿಸಿದ್ದಾರೆ.
ಇದನ್ನು ಓದಿ: ಹೆಚ್ಚುತ್ತಿರುವ ಮಂಗನ ಕಾಯಿಲೆ: ಮಲೆನಾಡಿನಲ್ಲಿ ಆತಂಕ ಸೃಷ್ಟಿಸಿರುವ ಮಂಗನ ಕಾಯಿಲೆ