ಹೆಲ್‌ಮಂಡ್‌ನಲ್ಲಿ ಇನ್ನು ಮುಂದೆ ಗಡ್ಡ ತೆಗೆಯುವದು ಮತ್ತು ಆಕರ್ಷಕಗೊಳಿಸುವುದನ್ನು ನಿಷೇಧಗೊಳಿಸಿದ ತಾಲಿಬಾನ್ ಸರ್ಕಾರ

ಪ್ರಸ್ತುತ ತಾಲಿಬಾನಿಗಳ ಆಡಳಿತದಲ್ಲಿರುವ ಅಫ್ಘಾನಿಸ್ತಾನದ ದಕ್ಷಿಣ ಪ್ರಾಂತ್ಯದ ಹೆಲ್‌ಮಂಡ್‌ನಲ್ಲಿ ಇನ್ನು ಮುಂದೆ ಗಡ್ಡ ತೆಗೆಯುವದು ಮತ್ತು ಆಕರ್ಷಕಗೊಳಿಸುವುದನ್ನು ತಾಲಿಬಾನ್ ಸರ್ಕಾರ ನಿಷೇಧಿಸಿದೆ

ಈ ಬಗ್ಗೆ ತಾಲಿಬಾನ್ ಸರ್ಕಾರ ಸ್ಪಷ್ಟಪಡಿಸಿದ್ದು ಗಡ್ಡ ತೆಗೆಯುವುದು, ಆಕರ್ಷಕಗೊಳಿಸುವುದು ಶರಿಯಾ ಅಥವಾ ಇಸ್ಲಾಮಿಕ್ ಕಾಯ್ದೆಗೆ ವಿರುದ್ಧವಾಗಿದೆ ಎಂದು ಅಫ್ಘಾನಿಸ್ತಾನದ ಹೆಲ್‌ಮಂಡ್ ಪ್ರಾಂತ್ಯದ ಸ್ಥಳೀಯ ತಾಲಿಬಾನ್ ಸರ್ಕಾರ ಆದೇಶದಲ್ಲಿ ಪ್ರತಿಪಾದಿಸಿದೆ.

ತಾಲಿಬಾನಿಗಳು ಅಧಿಕಾರಕ್ಕೆ ಬಂದಾಗಲೇ 90ರ ದಶಕದ ಆಡಳಿತ ಮರಳಲಿದೆ ಎಂದು ಅಂದಾಜಿಸಲಾಗಿತ್ತು. ಆದು ಈಗ ಅವರ ಒಂದೊಂದೆ ಕಾನೂನುಗಳು ಜಾರಿಗೆ ಬರುತ್ತಿವೆ. ಆ ದಿನಗಳು ಮರಳುವುದರ ಸೂಚನೆಯಾಗಿ ಶನಿವಾರ ತಾಲಿಬಾನ್ ಯೋಧರು ನಾಲ್ವರು ಅಪಹರಣಕಾರರನ್ನು ಕೊಂದು ಬಳಿಕ ಸಾರ್ವಜನಿಕವಾಗಿ ಶವಗಳನ್ನು ನೇತುಹಾಕಿದ್ದರು. ಈಗ ಗಡ್ಡ, ಕ್ಷೌರ ಕುರಿತ ಆದೇಶ ಬಂದಿದೆ. ನಿಯಮ ಉಲ್ಲಂಘಿಸಿದವರನ್ನು ಕಟುಶಿಕ್ಷೆಗೆ ಗುರಿಪಡಿಸಲಾಗುವುದು, ದೂರು ಕೊಡುವಂತೆ ಇಲ್ಲ ಎಂದು ಕ್ಷೌರಿಕರನ್ನು ಉದ್ದೇಶಿಸಿ ನೀಡಿದ ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ. ಆದರೆ ಶಿಕ್ಷೆಯ ಸ್ವರೂಪವನ್ನು ತಿಳಿಸಿಲ್ಲ.

ಈ ಬಗ್ಗೆ ಸ್ಥಳೀಯರಾದ ಬಿಲಾಲ್ ಅಹ್ಮದ್ ಪ್ರತಿಕ್ರಿಯಿಸಿ  ಈ ಸುದ್ದಿ ಕೇಳಿದಾಗಿನಿಂದ ನನ್ನ ಹೃದಯ ಚೂರಾದಂತಾಗಿದೆ. ಈ ನಗರದಲ್ಲಿ ಎಲ್ಲರೂ ತಮ್ಮಿಷ್ಟದ ಜೀವನಶೈಲಿ ಅನುಸರಿಸುತ್ತಿದ್ದರು, ಇಷ್ಟದಂತೆ ಬದುಕುತ್ತಿದ್ದರು ಎಂದು ಅವರ ನೋವನ್ನು ಹೊರಹಾಕಿದರು.

Exit mobile version