ಮಹಿಳೆಯರಿಗೆ ಸರ್ಕಾರಿ ಉದ್ಯೋಗದಲ್ಲಿ ಭರ್ಜರಿ ಆದ್ಯತೆ ನೀಡಿದ ತಮಿಳುನಾಡು ಸರ್ಕಾರ.

ಚೆನ್ನೈ ಸೆ 15 :  ಮಹಿಳೆಯರಿಗೆ ಇತ್ತೀಚಿನ ದಿನಗಳಲ್ಲಿ ಸರ್ಕಾರ ಸಾಕಷ್ಟು ಸವಲತ್ತುಗಳನ್ನು ನೀಡುತ್ತಿದೆ. ಹಾಗೆ ತಮಿಳನಾಡು ಸರ್ಕಾರವು ಕೂಡ ಮಹಿಳೆಯರಿಗೆ ಸರ್ಕಾರಿ ಉದ್ಯೋಗಗಳಲ್ಲಿ ಮಹಿಳಾ ಮೀಸಲಾತಿಯನ್ನು ಸರ್ಕಾರ ಶೇ.30ರಿಂದ ಶೇ.40ಕ್ಕೆ ಏರಿಕೆ ಮಾಡಿದ್ದು ಮಹಿಳಾ ಅದ್ಯತ್ಯಗೆ ಒತ್ತು ನೀಡಿದೆ.

ಈ ಬಗ್ಗೆ ತಮಿಳುನಾಡು ಮಾನವ ಸಂಪನ್ಮೂಲ ನಿರ್ವಹಣಾ ಸಚಿವ ಪಳನಿವೆಲ್‌ ತ್ಯಾಗ ರಾಜನ್‌ ವಿಧಾನಸಭೆಯಲ್ಲಿ ಈ ಘೋಷಣೆ ಮಾಡಿದ್ದಾರೆ. ಬದಲಾವಣೆಯನ್ನು ತರುವಲ್ಲಿ ಲಿಂಗ ಸಮಾನತೆ ಮಹತ್ವದ ಪಾತ್ರವನ್ನು ವಹಿಸಲಿದೆ. ಸರ್ಕಾರಿ ಉದ್ಯೋಗಗಳಲ್ಲಿ ಮಹಿಳೆಯರಿಗೆ ಮೀಸಲು ಹೆಚ್ಚಿಸುವ ಸಂಬಂಧ ಕಾಯ್ದೆಗೆ ಅಗತ್ಯ ತಿದ್ದುಪಡಿಗಳನ್ನು ಮಾಡಲಾಗುವುದು ಎಂದು ಹೇಳಿದ್ದಾರೆ.

ಸದ್ಯ ತಮಿಳುನಾಡು ಲೋಕಸೇವಾ ಆಯೋಗ ಮತ್ತು ಶಿಕ್ಷಕರ ನೇಮಕಾತಿ ಮಂಡಳಿ (ಟಿಆರ್‌ಬಿ) ಮೂಲಕ ಖಾಲಿ ಹುದ್ದೆಗಳ ಭರ್ತಿಗೆ ಸರ್ಕಾರ ಸಮಾನಾಂತರ ಮೀಸಲಾತಿ ಸೂತ್ರವನ್ನು ಅನುಸರಿಸುತ್ತಿದೆ. ಅಂದರೆ ಮಹಿಳೆಯರಿಗೆ ಶೇ.50ರಷ್ಟುಸಮಾನಾಂತರ ಮೀಸಲು ನಿಗದಿ ಮಾಡಿದರೆ, ಸರ್ಕಾರಿ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳ ಪೈಕಿ ಅರ್ಧದಷ್ಟುಮಂದಿ ಮಹಿಳೆಯರೇ ಆಗಿರಬೇಕು ಎಂಬ ನಿಯಮವನ್ನು ಕೂಡ ಜಾರಿಗೊಳಿಸಿದೆ.

Exit mobile version