ಡಾರ್ಲಿಂಗ್ ಕೃಷ್ಣ ಮತ್ತು ಮಿಲನ ಮದುವೆ ಖುಷಿಯಲ್ಲಿದ್ದಾರೆ ಬರುವ ೨೦೨೧ ರಂದು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಅದರಲ್ಲೂ ಪ್ರೇಮಿಗಳ ದಿನಾಚರಣೆಯಂದೇ ಈ ಜೋಡಿ ಸಪ್ತಪದಿ ತುಳಿಯುತ್ತಿರೋದು ವಿಶೇಷ .
ಇನ್ನು ಇಬ್ಬರು ಇದೀಗ ಮದುವೆ ತಯಾರಿಯಲ್ಲಿ ಬ್ಯುಸಿಯಾಗಿದ್ದಾರೆ. ಪ್ರೇಮ ಹಕ್ಕಿಗಳು ತಮಿಳುನಾಡಿನ ಕಾಂಚೀಪುರಂಗೆ ಎಂಟ್ರಿ ಕೊಟ್ಟಿದ್ದಾರೆ. ಮದುವೆಯ ಶಾಪಿಂಗಾಗಿ ಕಾಂಚೀಪುರಂಗೆ ಹೋಗಿರೋ ಜೋಡಿ ಸಾಮಾಜಿಕ ಜಾಲತಾಣದಲ್ಲಿ ಫೋಟೋವನ್ನು ಶೇರ್ ಮಾಡಿದ್ದಾರೆ.
ಕಾಂಚೀಪುರಂನಲ್ಲಿ ನಮ್ಮ ವಿಶೇಷ ದಿನಕ್ಕೆ ಶಾಪಿಂಗ್ ಮಾಡುತ್ತಿರುವ ವೇಳೆ ಎಂದು ಕ್ಯಾಪ್ಷನ್ ನೀಡಿದ್ದಾರೆ. ಸದ್ಯ ಲವ್ ಮಾಕ್ಟೇಲ್ ಚಿತ್ರದ ಯಶಸ್ಸಿನ ಖುಷಿಯಲ್ಲಿರೋ ಜೋಡಿ ಲವ್ ಮಾಕ್ಟೇಲ್ ೨ ಸಿನಿಮಾ ಶೂಟಿಂಗ್ ಬ್ಯುಸಿಯಲ್ಲಿದ್ದಾರೆ.