ಅಮೆರಿಕ ವಿಮಾನ ಪತನದಲ್ಲಿ ಟಾರ್ಜನ್ ನಟ ಜೋ ಲಾರಾ ಸಾವು

ವಾಷಿಂಗ್ಟನ್, ಮೇ. 31: ಅಮೆರಿಕದ ನಾಶ್ ವಿಲ್ ನಗರದ ಸಮೀಪ ಶನಿವಾರ ಸಂಭವಿಸಿದ ವಿಮಾನ ದುರಂತದಲ್ಲಿ ಮೃತಪಟ್ಟ ಏಳು ಮಂದಿಯಲ್ಲಿ ಟಾರ್ಜನ್ ನಟ ಜೋ ಲಾರಾ ಮತ್ತು ಅವರ ಪತ್ನಿಯೂ ಇರುವುದು ತಿಳಿದುಬಂದಿದೆ.

ನಾಶ್ ವಿಲ್ ನಗರದಿಂದ 19 ಕಿಲೋಮೀಟರ್‌ ದೂರದಲ್ಲಿರುವ ಪೆರ್ಸಿ ಪ್ರೀಸ್ಟ್‌ ಸರೋವರದಲ್ಲಿ ವಿಮಾನ ಪತನಗೊಂಡು ಎಲ್ಲ 7 ಮಂದಿ ಪ್ರಯಾಣಿಕರು ಮೃತಪಟ್ಟಿದ್ದರು.

ಸ್ಮಿರ್ನಾದ ಟೆನ್ನೆಸ್ಸೀ ವಿಮಾನ ನಿಲ್ದಾಣದಿಂದ ಫ್ಲಾರಿಡಾದ ಪಾಮ್ ಬೀಚ್‌ಗೆ ಹೊರಟಿದ್ದ ಲಘು ವಿಮಾನ ಟೇಕಾಫ್ ಆದ ಕೆಲವೇ ಕ್ಷಣಗಳಲ್ಲಿ ಪತನವಾಗಿದೆ ಎಂದು ರುದರ್ ಫೋರ್ಡ್‌ ಕೌಂಟಿಯ ಅಗ್ನಿಶಾಮಕ ಮತ್ತು ರಕ್ಷಣಾ ದಳದ ಅಧಿಕಾರಿಗಳು ತಿಳಿಸಿದ್ದರು.

Exit mobile version