ಸುಪ್ರೀಂ ಆದೇಶ ಹಿನ್ನಲೆ, ಮೈಸೂರು ಮಾತ್ರವಲ್ಲ ಹಲವು ಜಿಲ್ಲೆಯ ದೇವಾಲಯಗಳಿಗೆ ನೆಲಸಮ ಭೀತಿ

ಬೆಂಗಳೂರು ಸೆ 15 : ಸುಪ್ರೀಂಕೋರ್ಟ್ ಆದೇಶದ ಹಿನ್ನೆಲೆ ಮೈಸೂರಿನ ನಗರದ ಹಲವು ದೇವಾಲಯಗಳಿಗೆ ನೆಲಸಮ ಭೀತಿ ಎದುರಾಗಿದೆ. 

93 ದೇವಾಲಯಗಳನ್ನು ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ಮೈಸೂರು ಮಹಾನಗರ ಪಾಲಿಕೆ ಪಟ್ಟಿ ಮಾಡಿದೆ. ಇದರಲ್ಲಿ ಪ್ರಸಿದ್ಧ ಅಗ್ರಹಾರದ ನೂರೊಂದು ಗಣಪತಿ ದೇವಾಲಯವೂ ಸೇರಿದೆ. 

ಮೈಸೂರು ಜಿಲ್ಲೆ ನಂಜನಗೂಡಿನ ಹರದನಹಳ್ಳಿ ಉಚ್ಚಗಣಿಯ ಮಹದೇವಮ್ಮ ದೇಗುಲವನ್ನು ಮೈಸೂರು ಜಿಲ್ಲಾಡಳಿತ ರಾತ್ರೋರಾತ್ರಿ ಧ್ವಂಸ ಮಾಡಿತ್ತು. ಶತಮಾನಗಳ ಇತಿಹಾಸವಿರುವ ಈ ದೇವಾಲಯ ನೆಲಸಮ ಮಾಡಿದ್ದಕ್ಕೆ, ಗ್ರಾಮಸ್ಥರು ಮತ್ತು ಜನಪ್ರತಿನಿಧಿಗಳಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು.

ಸ್ವಪಕ್ಷೀಯರಿಂದಲೇ ಭಾರೀ ಒತ್ತಡ ಬರುತ್ತಿದ್ದಂತೆ, ಮುಂದಿನ ಆದೇಶದ ವರೆಗೆ ಈ ವಿಚಾರವನ್ನು ಮುಟ್ಟಬೇಡಿ ಎನ್ನುವ ಸ್ಪಷ್ಟ ಆದೇಶವನ್ನು ಸರಕಾರ, ಮೈಸೂರು ಜಿಲ್ಲಾಡಳಿತಕ್ಕೆ ನೀಡಿದೆ. ಆದರೆ ಸುಪ್ರೀಂ ಪಟ್ಟಿಯ ಪ್ರಕಾರ ರಾಜ್ಯದ ಹಲವು ಜಿಲ್ಲೆಯಲ್ಲಿರುವ ಹಲವು ದೇವಾಲಯಗಳು ಈ ಪಟ್ಟಿಯಲ್ಲಿವೆ.

ರಾಜ್ಯದಲ್ಲಿ ನೆಲಸಮಮಾಡಲು ಪಟ್ಟಿಮಾಡಿರುವ  ದೇವಾಲಯಗಳ ಸಂಖ್ಯೆ :

ನೆಲಸಮಗೊಳಿಸಲು ಗುರುತಿಸಲಾಗಿರುವ ಧಾರ್ಮಿಕ ಕೇಂದ್ರಗಳ ಪೈಕಿ ದಕ್ಷಿಣ ಕನ್ನಡ ಜಿಲ್ಲೆ ಮೊದಲ ಸ್ಥಾನದಲ್ಲಿದ್ದು 815 ಸಂಖ್ಯೆಯನ್ನು ಹೊಂದಿದೆ. ಇದಾದ ನಂತರ, ಧಾರವಾಡ ಜಿಲ್ಲೆಯ ಸುಮಾರು 220, ಬೆಂಗಳೂರು ನಗರ ವ್ಯಾಪ್ತಿಯ 40, ಬೆಳಗಾವಿಯ 150, ಕಲಬುರಗಿ ಜಿಲ್ಲೆಯ 135, ಬಳ್ಳಾರಿಯ ಸುಮಾರು ಮೂವತ್ತು, ಚಾಮರಾಜನಗರದ ಹದಿನೆಂಟು, ಚಿಕ್ಕಮಗಳೂರಿನ ಮೂರು ದೇವಾಲಯಗಳು ಈ ಪಟ್ಟಿಯಲ್ಲಿದೆ

Exit mobile version