ನಿರೀಕ್ಷಿತ ಮೂರನೇ ಅಲೆ ಯುವ ಜನಸಂಖ್ಯೆಯ ಮೇಲೆ ಪರಿಣಾಮ ಬೀರಲಿದೆ

ನಾಗ್ಪುರ, ಮೇ. 04: ದೇಶದಲ್ಲಿ ಕೊರೊನಾ 2ನೇ ಸೃಷ್ಟಿಸ್ತಿರುವ ಭೀಕರತೆಯ ನಡುವೆ ತಜ್ಞರು ಬೆಚ್ಚಿ ಬೀಳಿಸುವ ಎಚ್ಚರಿಕೆಯನ್ನ ನೀಡಿದ್ದು, ಸೆಪ್ಟೆಂಬರ್ʼ ತಿಂಗಳಲ್ಲಿ ದೇಶಕ್ಕೆ ಕೋವಿಡ್-19 ರ ಮೂರನೇ ಅಲೆ ಎದುರಾಗಿಲಿದೆ ಎಂದಿದ್ದಾರೆ.

ಮಕ್ಕಳ ಮತ್ತು ಸಾಂಕ್ರಾಮಿಕ ರೋಗಗಳ ಕ್ಷೇತ್ರದ ತಜ್ಞರು, ಸರ್ಕಾರ ಮಕ್ಕಳ ಲಸಿಕೆಯನ್ನು ತ್ವರಿತಗೊಳಿಸಬೇಕು ಇಲ್ಲದಿದ್ದರೆ ಕೋವಿಡ್-19ರ ನಿರೀಕ್ಷಿತ ಮೂರನೇ ಅಲೆಯು 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಯುವ ಜನಸಂಖ್ಯೆಯ ಮೇಲೆ ಪರಿಣಾಮ ಬೀರಲಿದೆ. ಅಲ್ಲದೇ ಇದು ಕೋವಿಡ್-19 ರ ‘ತುಂಬಾ ಗಂಭೀರ’ ರೂಪವಾಗಿರುತ್ತದೆ ಎಂದು ಎಚ್ಚರಿಸಿದ್ದಾರೆ.

‘ಮಕ್ಕಳ ಲಸಿಕೆ ಹೊರ ತರುವುದು ತುಂಬಾನೇ ಮುಖ್ಯ. ಇಲ್ಲದಿದ್ದರೆ ಮೂರನೇ ಅಲೆಯು 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಲಸಿಕೆ ಪಡೆಯದ ಜನರ ಮೇಲೆ ಪರಿಣಾಮ ಬೀರುತ್ತದೆ’ ಎಂದು ಸಾಂಕ್ರಾಮಿಕ ರೋಗ ತಜ್ಞ ಡಾ. ನಿತಿನ್ ಶಿಂಧೆ ಹೇಳಿದರು. ’18ರಿಂದ 44 ವರ್ಷ ವಯಸ್ಸಿನ ನಾಗರಿಕರಿಗೆ ಲಸಿಕೆ ಈಗಾಗಲೇ ಪ್ರಾರಂಭವಾಗಿದೆ. ಈ ವಯೋಮಾನದ ಅನೇಕ ಜನರು ಈಗಾಗಲೇ ಲಸಿಕೆ ರಕ್ಷಣೆಯನ್ನ ಪಡೆದಿದ್ದಾರೆ. ಆದ್ದರಿಂದ ಈಗ, ವೈರಸ್ ಈ ರಕ್ಷಣೆ ಇಲ್ಲದವರನ್ನು ಗುರಿಯಾಗಿಸುತ್ತದೆ’ ಎಂದು ಡಾ. ಶಿಂಧೆ ಹೇಳಿದರು.

ಕೋವಿಡ್-19 ಪ್ರಸ್ತುತ ಮಕ್ಕಳಲ್ಲಿ ಗಂಭೀರ ತೊಡಕುಗಳನ್ನ ಸೃಷ್ಟಿಸುವುದಿಲ್ಲವಾದರೂ, ಸೋಂಕಿತ ಮಕ್ಕಳ ಸಂಖ್ಯೆ ಎರಡನೇ ಅಲೆಯಲ್ಲಿ ಬೆಳೆಯುತ್ತಿದೆ. ‘ಮುಂಬೈ ಮತ್ತು ಪುಣೆಯಂತಹ ನಗರಗಳಲ್ಲಿ ಮೊದಲ ಅಲೆಗೆ ಹೋಲಿಸಿದರೆ ಪ್ರಸ್ತುತ ಅಲೆಯಲ್ಲಿ ಕೋವಿಡ್-19 ಸೋಂಕಿಗೆ ಒಳಗಾದ ಹೆಚ್ಚಿನ ಮಕ್ಕಳನ್ನ ನೋಡಲಾಗಿದೆ’ ಎಂದು ಜಿಎಂಸಿಎಚ್ ನ ಮಕ್ಕಳ ವಿಭಾಗದ ಎಚ್ ಒಡಿ ಡಾ. ದೀಪ್ತಿ ಜೈನ್ ಹೇಳಿದರು. ‘ಮಕ್ಕಳು ತೀವ್ರ ಕಾಯಿಲೆಗಳಿಗೆ ತುತ್ತಾಗದಿದ್ದರೂ, ಅವರು ಸೋಂಕಿನ ವಾಹಕರಾಗಿದ್ದಾರೆ. ಅವರು ವೃದ್ಧರಿಗೆ ಸೋಂಕು ಉಂಟು ಹರಡಬಹುದು. ಇದನ್ನ ತಪ್ಪಿಸಲು, ನಮಗೆ ಮಕ್ಕಳಿಗೆ ಲಸಿಕೆಯ ಅಗತ್ಯವಿದೆ,’ ಎಂದು ಅವರು ಸೆಪ್ಟೆಂಬರ್ ವೇಳೆಗೆ ಮೂರನೇ ಅಲೆ ಎದುರಾಗುವ ನಿರೀಕ್ಷೆ ಎಂದರು.

Exit mobile version