ಭರವಸೆಯ ಯುವ ಕುಸ್ತಿಪಟು ರಿತಿಕಾ ಫೋಗಟ್ ಆತ್ಮಹತ್ಯೆ

ಹೊಸದಿಲ್ಲಿ, ಮಾ. 18: ಭಾರತದ ಕುಸ್ತಿಪಟುಗಳಾದ ಗೀತಾ ಮತ್ತು ಬಬಿತಾ ಫೋಗಟ್ ಅವರ ಸೋದರ ಸಂಬಂಧಿ ರಿತಿಕಾ ಫೋಗಟ್ ಆತ್ಮಹತ್ಯೆಗೆ ಶರಣಾಗಿದ್ದಾರೆ.

ರಿತಿಕಾ ಅವರು ಕುಸ್ತಿ ಪಂದ್ಯಾವಳಿಯ ಅಂತಿಮ ಪಂದ್ಯದಲ್ಲಿ ಸೋತಿದ್ದು, ಸೋಲಿನ ನೋವನ್ನು ತಾಳಲಾಗದೇ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಭರತ್‌ಪುರದಲ್ಲಿ ನಡೆದ ಕುಸ್ತಿ ಟೂರ್ನಮೆಂಟ್‌ನ ಫೈನಲ್ ಪಂದ್ಯದಲ್ಲಿ ಸೋತ ಹಿನ್ನೆಲೆಯಲ್ಲಿ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗುತ್ತಿದೆ.

ವರದಿ ಪ್ರಕಾರ ಮಾ.12 ಮತ್ತು 14ರಂದು ರಾಜಸ್ಥಾನದಲ್ಲಿ ರಾಜ್ಯಮಟ್ಟದ ಕುಸ್ತಿ ಸ್ಪರ್ಧೆಯಲ್ಲಿ ರಿತಿಕಾ ಭಾಗವಹಿಸಿದ್ದರು. ಇನ್ನು ಇವರ ಸಹೋದರಿಯರ ಜೀವನಾಧಾರಿತ ಚಿತ್ರ ‘ದಂಗಲ್’ ಚಿತ್ರ ಬಾಲಿವುಡ್‌ನಲ್ಲಿ ತೆರೆಕಂಡಿತ್ತು. ಅಮೀರ್ ಖಾನ್ ಈ ಸಿನೆಮಾದ ನಾಯಕನಟನಾಗಿ ಅಭಿನಯಿಸಿದ್ದರು. ಕುಸ್ತಿಯಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತರಾದ ಗೀತಾ ಫೋಬಟ್ ಹಾಗೂ ಬಬಿತಾ ಫೋಬಟ್ ಅವರ ಸೋದರ ಸಂಬಂಧಿ. ಕೇವಲ 17ರ ಹರೆಯದ ರಿತಿಕಾ ಫೋಗಟ್ ಕುಸ್ತಿಯಲ್ಲಿ ದೊಡ್ಡ ಹೆಸರು ಮಾಡುವ ಭರವಸೆಯನ್ನು ಮೂಡಿಸಿದ್ದರು.

Exit mobile version