ಷೇರು ಪೇಟೆ ಸೂಚ್ಯಂಕದಲ್ಲಿ ಭಾರೀ ಜಿಗಿತ 55 ಸಾವಿರ ದಾಟಿದ ಸೆನ್ಸೆಕ್ಸ್

ಕೊರೊನಾದಿಂದ ಒಂದೆಡೆ ಷೇರುಪೇಟೆಯ ಸೂಚ್ಯಂಕದಲ್ಲಿ ಇತ್ತೀಚೆಗೆ ಸಾಕಷ್ಟು ಇಳಿತಗಳು ಕಾಣುತ್ತಿದ್ದವು. ಆದರೆ ಇಂದು ಮುಂಬೈ ಷೇರುಪೇಟೆ ಸೆನ್ಸೆಕ್ಸ್ ಸೂಚ್ಯಂಕ 593.31 ಅಂಕಗಳ ಏರಿಕೆಯೊಂದಿಗೆ ಸಾರ್ವಕಾಲೀಕ ಗರಿಷ್ಠ 55.437.29 ಅಂಕಗಳನ್ನು ತಲುಪಿ ಭಾರೀ ಜಿಗಿತವನ್ನು ಕಂಡುಕೊಂಡಿದೆ. ಎನ್ ಎಸ್ ಸಿ ಸೂಚ್ಯಂಕ ನಿಫ್ಟಿ 164.70 ಅಂಕ ಏರಿಕೆಗೊಂಡು 16,529.10 ಅಂಕಗಳಿಗೆ ಜಿಗಿತಕಂಡಿದೆ.

ಟಾಟಾ ಕನ್ಸೂಮರ್ ಪ್ರಾಡಕ್ಟ್ಸ್‌, ಟಿಸಿಎಸ್, ಎಲ್‌&ಟಿ, ಭಾರ್ತಿ ಏರ್‌ಟೆಲ್, ಎಚ್‌ಸಿಎಲ್‌ ಟೆಕ್ನಾಲಜೀಸ್‌ ನಿಫ್ಟಿಯಲ್ಲಿ ಹೆಚ್ಚು ಲಾಭಗಳಿಸಿದ ಷೇರುಗಳಾಗಿದ್ದು, ಐಷರ್ ಮೋಟಾರ್ಸ್, ಡಾ. ರೆಡ್ಡಿ ಲ್ಯಾಬ್ಸ್‌, ಸಿಪ್ಲಾ, ಪವರ್‌ಗ್ರಿಡ್ ಕಾರ್ಪ್‌ ಮತ್ತು ಬ್ರಿಟಾನಿಯಾ ಇಂಡಸ್ಟ್ರೀಸ್ ಷೇರುಗಳು ಕುಸಿತಗೊಂಡಿವೆ.
ದಿನದ ವಹಿವಾಟು ಅಂತ್ಯಕ್ಕೆ 1412 ಷೇರುಗಳು ಏರಿಕೆಗೊಂಡಿದ್ದು . 1583 ಷೇರುಗಳು ಖುಸಿತಕಂಡಿವೆ ಮತ್ತು 81 ಷೇರುಗಳ ಮೌಲ್ಯದಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ .

Exit mobile version