`ಟೈಗರ್ ಪ್ರಭಾಕರ್’ ಅವರ ಜನ್ಮದಿನದ ಸವಿನೆನಪಿಗೆ `ಕಲಾತ್ಮಕ ಉಡುಗೊರೆ’ ಕೊಟ್ಟ ಕಲಾವಿದ!

tiger prabhakar

80ರ ದಶಕದಲ್ಲಿ ಕನ್ನಡ ಚಿತ್ರರಂಗದ(Kannada Industry) ಅದ್ಬುತ ಖಳನಾಯಕ ಅಂದ್ರೆ ಅದು ಟೈಗರ್ ಎಂದೇ ಖ್ಯಾತಿ ಪಡೆದುಕೊಂಡಿದ್ದ ಟೈಗರ್ ಪ್ರಭಾಕರ್(Tiger Prabhakar) ಅವರು. ಟೈಗರ್ ಪ್ರಭಾಕರ್ ಅವರು ಯಾರಿಗೆ ಗೊತ್ತಿಲ್ಲ ಹೇಳಿ? ತಮ್ಮ ಕಟ್ಟುಮಸ್ತಾದ ದೇಹ, ಬೆಂಕಿಯಂತ ಕಣ್ಣುಗಳು, ಎತ್ತರದ ಹುಬ್ಬು, ಕೆಣಕುವಂತ ಕಣ್ಣೋಟ, ಉಕ್ಕಿನಂತ ತೋಳುಗಳೇ ಹೇಳುತ್ತಿತ್ತು ಈ ಮನುಷ್ಯನ ನಟನೆ ಏನು, ಯಾವ ರೀತಿ ಇತ್ತು ಎಂಬುದನ್ನು.

ಹೌದು, ಕನ್ನಡ ಚಿತ್ರರಂಗದಲ್ಲಿ ಟೈಗರ್ ಪ್ರಭಾಕರ್ ಅವರ ಹೆಸರು ಕೇಳಿದರೇ ಸಾಕು, ಸಿನಿಪ್ರೇಕ್ಷಕರಿಗೆ ಇವರೇ ಕಣ್ರೀ ಪಕ್ಕಾ ಖೇಡಿ ಎಂಬ ಮಾತುಗಳು ಕೇಳಿಬರುತ್ತಿತ್ತು. ಅಷ್ಟರ ಮಟ್ಟಿಗೆ ಹೆಸರುವಾಸಿಯಾಗಿದ್ದರು ಟೈಗರ್ ಪ್ರಭಾಕರ್ ಅವರು. ಅಂದಿನ ಸಮಯಕ್ಕೆ ಡಾ. ರಾಜ್‍ಕುಮಾರ್ ಅವರ ಅನೇಕ ಸಿನಿಮಾಗಳಲ್ಲಿ ಯಂಗ್ ಖೇಡಿಯಾಗಿ ಗುರುತಿಸಿಕೊಳ್ಳತ್ತಿದ್ದರು. ಹಸರಿಗೆ ಮಾತ್ರ ಟೈಗರ್ ಪ್ರಭಾಕರ್ ಆಗದೇ, ತಮ್ಮ ಪ್ರತಿ ಪಾತ್ರಗಳ ಅಭಿನಯದಲ್ಲೂ ಕನ್ನಡ ಸಿನಿಪ್ರೇಕ್ಷಕರಿಗೆ ಟೈಗರ್ ಆಕ್ರೋಶವನ್ನು ಪರಿಚಯಿಸುತ್ತಿದ್ದರು.

ಒಬ್ಬ ವಿಲನ್ ಎಂದಾಗ ಕಟ್ಟುಮಸ್ತಾದ ದೇಹ, ಕೆಂಡದಂತ ಆಕ್ರೋಶ ಅವರಲ್ಲಿ ಇರುತ್ತದೆ ಎಂಬ ಕಲ್ಪನೆಗಳನ್ನು ಸಿನಿಪ್ರೇಕ್ಷಕರು ಕಾಣುತ್ತಾರೆ. ಆದ್ರೇ, ಸಿನಿಪ್ರೇಕ್ಷಕರ ಕಲ್ಪನೆಯನ್ನು ನೈಜ ಮಾಡಿದ್ದು, ಟೈಗರ್ ಪ್ರಭಾಕರ್ ಅವರು. ಅಂದಿನಿಂದ ಇಂದಿನವರೆಗೂ ಟೈಗರ್ ಪ್ರಭಾಕರ್ ಅವರ ವಿಭಿನ್ನ ನಟನೆಯನ್ನು ಸಿನಿ ಅಭಿಮಾನಿಗಳು ಎಂದಿಗೂ ಮರೆಯಲು ಸಾಧ್ಯವಿಲ್ಲ! ವಿಶೇಷವಾಗಿ ಅವರು ಹೇಳುತ್ತಿದ್ದ ಡೈಲಾಗ್‍ಗಳ ಶೈಲಿಯಂತು ಇಂದಿಗೂ ಅಚ್ಚಾಗಿ ಉಳಿದುಕೊಂಡಿದೆ.

ಕನ್ನಡಿಗರು, ಕನ್ನಡ ಚಿತ್ರರಂಗದವರು, ಕನ್ನಡ ಚಿತ್ರರಂಗಕ್ಕೆ ಖಳನಾಯಕನಾಗಿ ಟೈಗರ್ ಪ್ರಭಾಕರ್ ಅವರು ಕೊಟ್ಟ ಸೇವೆಯನ್ನು ಎಂದಿಗೂ ಮರೆಯುವಂತಿಲ್ಲ! ಇಂದು ಮಾರ್ಚ್ 30 ಅವರ ಜನ್ಮದಿನದ ಸವಿನೆನಪಿನಲ್ಲಿ ಅಭಿಮಾನಿಗಳು ಆಚರಣೆ ಮಾಡುತ್ತಿದ್ದಾರೆ. ಬೆಂಗಳೂರಿನಲ್ಲಿ ಟೈಗರ್ ಪ್ರಭಾಕರ್ ಅವರ ಜನ್ಮದಿನದ ನೆನಪಿಗೆ ಅವರ ಅಭಿಮಾನಿಯೊಬ್ಬರು ಕಲಾಜೀವಿಯಾಗಿದ್ದು, ಕಲಾತ್ಮಕ ಕೃತಿಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಈ ನಿಟ್ಟಿನಲ್ಲಿ ತಮ್ಮ ನೆಚ್ಚಿನ ಕಲಾವಿದನಿಗೆ `ಕಲಾತ್ಮಕ’ವಾಗಿ ಅರ್ಪಿಸುವ ಮೂಲಕ ಕಲಾವಿದ ಬಾದಲ್ ನಂಜುಂಡಸ್ವಾಮಿ ಅವರು ಟೈಗರ್ ಪ್ರಭಾಕರ್ ಅವರನ್ನು ನೆನಪಿಸಿಕೊಂಡಿದ್ದಾರೆ.

Exit mobile version