ಟೋಕಿಯೊ, ಜು. 30: ಟೋಕಿಯೋ ಒಲಂಪಿಕ್ಸ್ ನಲ್ಲಿ ಭಾರತೀಯ ಕ್ರೀಡಾಪಟುಗಳ ಪದಕದ ಹೋರಾಟ ಮುಂದುವರಿದಿದ್ದು, ಕ್ರೀಡಾಕೂಟದ 8ನೇ ದಿನವಾದ ಶುಕ್ರವಾರ ಭಾರತದ ಆಟಗಾರರು ಮುನ್ನಡೆ ಸಾಧಿಸಿದ್ದು, ಪದಕದ ಆಸೆಯನ್ನ ಜೀವಂತ ಇರಿಸಿದ್ದಾರೆ.
ಭಾರತದ ಭರವಸೆಯ ಆಟಗಾರ್ತಿ ದೀಪಿಕಾ ಕುಮಾರಿ ಅವರು ಅರ್ಚರಿಯಲ್ಲಿ ಟೋಕಿಯೊ ಒಲಿಂಪಿಕ್ಸ್ನಲ್ಲಿ ಕ್ವಾರ್ಟರ್ ಫೈನಲ್ಗೆ ಲಗ್ಗೆಯಿಟ್ಟಿದ್ದಾರೆ. ಶುಕ್ರವಾರ ನಡೆದ ಪಂದ್ಯದಲ್ಲಿ ದೀಪಿಕಾ ಕುಮಾರಿ 6-5 ಕೆ.ಪೆರೊವಾ ವಿರುದ್ಧ ಜಯ ಸಾಧಿಸಿದ್ದಾರೆ. ಕ್ವಾರ್ಟರ್ ಫೈನಲ್ನಲ್ಲಿ ದೀಪಿಕಾ ಕುಮಾರಿ ಕೊರಿಯಾದ ಆ್ಯನ್ ಸ್ಯಾನ್ ಅವರೊಂದಿಗೆ ಸೆಣೆಸಲಿದ್ದಾರೆ.
ಇನ್ನೊಂದೆಡೆ ಮಹಿಳಾ ಬಾಕ್ಸಿಂಗ್ 69 ಕೆ.ಜಿ. ವಿಭಾಗದಲ್ಲಿ ಲವ್ಲಿನಾ ಬೊರ್ಗೊಹೈನ್ ಸೆಮಿಫೈನಲ್ ಪ್ರವೇಶಿಸಿದ್ದಾರೆ. ಆ ಮೂಲಕ ಭಾರತಕ್ಕೆ ಮತ್ತೊಂದು ಪದಕ ಖಾತರಿಪಡಿಸಿದ್ದಾರೆ. ಕನಿಷ್ಠ ಕಂಚಿನ ಪದಕ ಗ್ಯಾರಂಟಿಯಾಗಿದೆ. ಈ ಮೊದಲು ಮಹಿಳೆಯರ ವೇಟ್ಲಿಫ್ಟಿಂಗ್ನಲ್ಲಿ ಮೀರಾಬಾಯಿ ಚಾನು ಬೆಳ್ಳಿ ಪದಕ ಗೆದಿದ್ದರು.