ಟೋಕಿಯೋ ಒಲಂಪಿಕ್ಸ್: ಕ್ವಾರ್ಟರ್ ಫೈನಲ್ ಪ್ರವೇಶಿಸಿದ ಭಾರತದ ಪುರುಷರ ಹಾಕಿ ತಂಡ: ಅರ್ಜೈಂಟಿನಾ ವಿರುದ್ಧ 3-1 ಅಂತರದ ಜಯ

ಟೋಕಿಯೋ: ಟೋಕಿಯೋ ಒಲಂಪಿಕ್ಸ್‌ನ ಪುರುಷರ ಹಾಕಿ ವಿಭಾಗದಲ್ಲಿ ಭಾರತ ತಂಡದ ಗೆಲುವಿನ ಅಭಿಯಾನ ಮುಂದುವರಿದಿದ್ದು, ಹಾಲಿ ಚಾಂಪಿಯನ್‌ ಅರ್ಜೈಂಟಿನಾ ವಿರುದ್ಧ 3-1 ಗೋಲುಗಳಿಂದ ಸೋಲಿಸಿದ ಭಾರತ, ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ.

ಗುರುವಾರ ಮುಂಜಾನೆ ನಡೆದ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ ಭಾರತದ ಪರ, ವರುಣ್ ಕುಮಾರ್, ವಿವೇಕ್ ಪ್ರಸಾದ್ ಹಾಗೂ ಹರ್ಮನ್ಪ್ರೀತ್ ಸಿಂಗ್ ತಲಾ ಒಂದೊಂದು ಗೋಲು ಬಾರಿಸುವ ಮೂಲಕ ರಿಯೋ ಒಲಂಪಿಕ್ಸ್ ನಲ್ಲಿ ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದ ಅರ್ಜೆಂಟಿನಾಗೆ ಸೋಲಿನ‌ ರುಚಿ ತೋರಿಸಿತು. ಈ ಗೆಲುವಿನಿಂದ ಮೂರು ಪಂದ್ಯಗಳಲ್ಲಿ ಒಂಭತ್ತು ಪಾಯಿಂಟ್ಸ್ ಸಂಪಾದಿಸಿರುವ ಭಾರತ, 3ನೇ ಸ್ಥಾನದಲ್ಲಿರುವ ಸ್ಪೇನ್ ತಂಡಕ್ಕಿಂತ ಮೇಲುಗೈ ಹೊಂದಿದೆ.

ಪಂದ್ಯದ ಮೊದಲಾರ್ಧದಲ್ಲಿ ಭಾರತ ಪ್ರಾಬಲ್ಯ ಮೆರೆಯಿತು.‌ ಎರಡೂ ತಂಡಗಳಿಗೂ ಸಾಕಷ್ಟು ಅವಕಾಶ ದೊರೆತರು, ಗೋಲು ಬಾರಿಸಲು ಸಾಧ್ಯವಾಗಲಿಲ್ಲ. ಆದರೆ ಪಂದ್ಯದ 43ನೇ ನಿಮಿಷದಲ್ಲಿ ವರುಣ್ ಕುಮಾರ್ ಮೊದಲ ಗೋಲು ಬಾರಿಸಿ ಭಾರತಕ್ಕೆ ಮುನ್ನಡೆ ತಂದುಕೊಟ್ಟರು. ನಂತರ 59ನೇ ನಿಮಿಷದಲ್ಲಿ ವಿವೇಕ್ ಪ್ರಸಾದ್ ತಂಡದ ಪರ ಎರಡನೇ ಗೋಲು ಬಾರಿಸಿದರೆ, ಮರು ನಿಮಿಷದಲ್ಲೇ ಹರ್ಮನ್ಪ್ರೀತ್ ಸಿಂಗ್ ಕೂಡ ಒಂದು ಗೋಲು ಬಾರಿಸಿದರು. ಪರಿಣಾಮ ಭಾರತ 3-0 ಮುನ್ನಡೆ ಸಾಧಿಸಿತು. ಈ ಹಂತದಲ್ಲಿ ಆಕ್ರಮಣಕಾರಿ ಆಟಕ್ಕೆ ಮುಂದಾದ ಅರ್ಜೆಂಟಿನಾ ಪರ ಕಸೆಲ್ಲಾ 61ನೇ ನಿಮಿಷದಲ್ಲಿ ಒಂದು ಗೋಲು ಬಾರಿಸುವ ಮೂಲಕ ತಂಡದ ಗೆಲುವಿನ ಅಂತರ ಕಡಿಮೆ ಮಾಡಿದರು.

Exit mobile version