ಟೋಕಿಯೋ‌ ಒಲಂಪಿಕ್ಸ್: ಕುಸ್ತಿಯಲ್ಲಿ ಬೆಳ್ಳಿ ಪದಕ ಗೆದ್ದ ಭಾರತದ ರವಿಕುಮಾರ್ ದಹಿಯಾ

ಟೋಕಿಯೋ, ಆ. 05: ಭಾರೀ ನಿರೀಕ್ಷೆ ಮೂಡಿಸಿದ್ದ ಒಲಂಪಿಕ್ಸ್ ಟೂರ್ನಿಯ ಪುರುಷರ 57 ಕೆ.ಜಿ. ವಿಭಾಗದ ಕುಸ್ತಿ ಫೈನಲ್ ಪಂದ್ಯದಲ್ಲಿ ಭಾರತದ ರವಿಕುಮಾರ್ ದಹಿಯಾ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ.

ಅತ್ಯಂತ ಪೈಪೋಟಿಯಿಂದ ಕೂಡಿದ್ದ ರೋಚಕ ಫೈನಲ್ ಹಣಾಹಣಿಯಲ್ಲಿ ರಷ್ಯಾದ ಜೌರ್ ಉಗೇವ್ ವಿರುದ್ಧ 4-7 ಅಂತರದಿಂದ ಸೋಲು ಅನುಭವಿಸಿದರು. ಇದರೊಂದಿಗೆ ಭಾರತದ ಚಿನ್ನದ ಪದಕದಾಸೆ ಕಮರಿ ಹೋದರು ಮತ್ತೊಂದು ಬೆಳ್ಳಿ ಪದಕ ಸಿಕ್ಕಿದೆ.

ಆರಂಭದಿಂದಲೂ ಉಗೇವ್ ಮೇಲುಗೈ ಹೊಂದಿದ್ದರು. ಆದರೆ ಕೊನೆಯ ಹಂತದಲ್ಲಿ ರವಿ ಎರಡು ಅಂಕ ಗಳಿಸುವಲ್ಲಿ ಯಶಸ್ವಿಯಾದರೂ ಅಷ್ಟರಲ್ಲಾಗಲೇ ಉಗೇವ್ ಸಾಕಷ್ಟು ಮುಂದಿದ್ದರು. ಇದರೊಂದಿಗೆ ಸುಶೀಲ್ ಕುಮಾರ್ ಬಳಿಕ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಪದಕ ಗೆದ್ದ ಕುಸ್ತಿಪಟು ಎಂಬ ಗೌರವಕ್ಕೆ ರವಿಕುಮಾರ್ ಪಾತ್ರರಾದರು.

ಪ್ರಧಾನಿ ಮೋದಿ ಅಭಿನಂದನೆ ಕುಸ್ತಿ ಪಂದ್ಯದಲ್ಲಿ ಬೆಳ್ಳಿಪದಕ ಪಡೆದ ರವಿಕುಮಾರ್ ದಹಿಯಾ ಸಾಧನೆಗೆ ಪ್ರಧಾನಿ ಮೋದಿ ಸೇರಿದಂತೆ ಹಲವು ರಾಜಕೀಯ ನಾಯಕರು ಮೆಚ್ಚುಗೆ ವ್ಯಕ್ತಪಡಿಸುವ ಜೊತೆಗೆ ಶುಭಾಶಯ ಸಲ್ಲಿಸಿದ್ದಾರೆ.

ಪುನಿಯಾ ಕೈತಪ್ಪಿದ ಕಂಚು
ಒಲಂಪಿಕ್ಸ್ ಟೂರ್ನಿಯ ಪುರುಷರ 86 ಕೆಜಿ ಫ್ರೀಸ್ಟೈಲ್ ವಿಭಾಗದಲ್ಲಿ ಕಂಚಿನ‌ ಪದಕದ ನಿರೀಕ್ಷೆ ಮೂಡಿಸಿದ್ದ ದೀಪಕ್ ಪುನಿಯಾ ನಿರಾಸೆ ಅನುಭವಿಸಿದರು. ಸ್ಯಾನ್ ಮರಿನೋದ 24 ವರ್ಷದ ಕುಸ್ತಿಪಟು ಮೈಲ್ಸ್ ಅಮಿನ್ ವಿರುದ್ಧದ‌ ಸೆಣೆಸಾಟದಲ್ಲಿ ದೀಪಕ್​ ಪೂನಿಯಾ ಆರಂಭಿಕ ಪ್ರಾಬಲ್ಯ ಸಾಧಿಸಿದ್ದರು. ಆದರೆ‌ ಕೊನೆಯ 10 ಸೆಕೆಂಡ್ ಗಳಲ್ಲಿ ಹಿನ್ನಡೆ ಅನುಭವಿಸಿದ ಪೂನಿಯಾ, ಪಂದ್ಯವನ್ನು ಸೋತು ಪದಕದ ಆಸೆಯನ್ನ ಕೈಚಲ್ಲಿದರು‌.

Exit mobile version