ಉದ್ಯೋಗಾವಕಾಶ: ಪ್ರವಾಸೋದ್ಯಮದಲ್ಲಿ 14 ಕೋಟಿ ಉದ್ಯೋಗಾವಕಾಶ ಸೃಷ್ಟಿ, ಮೋದಿ ಭರವಸೆ

New Delhi: ಪ್ರಧಾನಿ ನರೇಂದ್ರ ಮೋದಿ (tourism dept job announcement) ಅವರು ದೇಶದ ಆರ್ಥಿಕತೆಯು ಪ್ರಗತಿಯ ಹಾದಿಯತ್ತ ಸಾಗುತ್ತಿದ್ದು, 2030ರ ವೇಳೆಗೆ ಪ್ರವಾಸೋದ್ಯಮ,

ಆಟೋಮೊಬೈಲ್‌ (Auto Mobiles), ಔಷಧ, ಆಹಾರ ಸಂಸ್ಕರಣೆ ಕ್ಷೇತ್ರದಲ್ಲಿ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ ಎಂದು ಅಭಿಪ್ರಾಯ ಪಟ್ಟಿದ್ದಾರೆ. 2030ರ ವೇಳಗೆ ದೇಶದ ಆರ್ಥಿಕತೆಗೆ

ಪ್ರವಾಸೋದ್ಯಮ ವಲಯವೊಂದೇ 20 ಲಕ್ಷ ಕೋಟಿ ರೂ.ಗೂ ಹೆಚ್ಚಿನ ಆದಾಯ ನೀಡುವ ಸಾಧ್ಯತೆ ಇದೆ ಎಂದಿರುವ ಅವರು ಈ ವಲಯದಲ್ಲಿ 13-14 ಕೋಟಿ ಹೊಸ ಉದ್ಯೋಗ ಅವಕಾಶಗಳು

ಹುಟ್ಟಿಕೊಳ್ಳಲಿವೆ ಎಂದು (tourism dept job announcement) ವಿಶ್ವಾಸ ವ್ಯಕ್ತಪಡಿಸಿದ್ದಾರೆ.

8ನೇ ಆವೃತ್ತಿಯ ರೋಜ್‌ಗಾರ್‌ (Rozgar) ಮೇಳವನ್ನು ಉದ್ದೇಶಿಸಿ 51 ಸಾವಿರ ಯುವಕರಿಗೆ ಉದ್ಯೋಗ ನೇಮಕಾತಿ ಪತ್ರವನ್ನು ಸಾಂಕೇತಿಕವಾಗಿ ವಿತರಿಸಿ ವರ್ಚುವಲ್‌ ಆಗಿ ಮಾತನಾಡಿದ ಮೋದಿ

ಅವರು ದೇಶ ಸೇವೆ ಮಾಡಲು ಯುವಕರು ತುದಿಗಾಲ ಮೇಲೆ ನಿಂತಿದ್ದು, ನೇಮಕಾತಿ ಪತ್ರ ಪಡೆದ ಎಲ್ಲರಿಗೂ ಶುಭವಾಗಲಿ ಎಂದು ಹಾರೈಸಿದ್ದು, ಈ ಅಮೃತ ಕಾಲದಲ್ಲಿ ನೇಮಕಾತಿ ಪತ್ರ ಪಡೆದವರು

‘ಅಮೃತ ರಕ್ಷಕ’ (Amrita Rakshaka) ಎಂದು ವರ್ಣಿಸಿದರು.

ರಾಜ್ಯದ 9 ವಿಶ್ವವಿದ್ಯಾಲಯಗಳಿಗೆ ಆನ್ಲೈನ್ ಕೋರ್ಸ್ ಆರಂಭಿಸಲು ಅನುಮತಿ ನೀಡಿದ ಯುಜಿಸಿ

ಭಾರತವು ಈ ದಶಕದ ಅಂತ್ಯದ ಹೊತ್ತಿಗೆ ವಿಶ್ವದ ಮೂರು ಬಲಿಷ್ಠ ಆರ್ಥಿಕತೆ ಹೊಂದಿದ ರಾಷ್ಟ್ರಗಳಲ್ಲಿ ಒಂದೆನಿಸಿಕೊಳ್ಳಲಿದೆ ಎಂದು ಭರವಸೆ ವ್ಯಕ್ತಪಡಿಸಿದ ಪ್ರಧಾನಿ ಮೇಡ್‌ ಇನ್‌ ಇಂಡಿಯಾ (Made in India)

ಯೋಜನೆ ಅಡಿಯಲ್ಲಿ ಹೊಸ ಲ್ಯಾಪ್‌ಟಾಪ್‌ (Laptop) ಹಾಗೂ ಕಂಪ್ಯೂಟರ್‌ಗಳ (Computer) ಉತ್ಪಾದನೆಯತ್ತ ಸರ್ಕಾರ ಗಮನ ಕೇಂದ್ರಿಕರಿಸಿದೆ. ಇದರಿಂದ ಸ್ಥಳೀಯ ಮಟ್ಟದಲ್ಲಿ ಉತ್ಪಾದನೆ

ಹೆಚ್ಚುವುದರ ಜೊತೆಗೆ ಉದ್ಯೋಗ ಅವಕಾಶಗಳು ಸೃಷ್ಟಿಯಾಗಲಿವೆ ಎಂದು ತಿಳಿಸಿದರು.

ಸೋಮವಾರ ದೇಶದ ನಾನಾ ಭಾಗಗಳಿಂದ ಅರೆಸೇನಾ ಪಡೆ, ನಾರ್ಕೊಟಿಕ್ಸ್‌ ಕಂಟ್ರೋಲ್‌ ಬ್ಯುರೊ (Narcotics control Bureau), ದಿಲ್ಲಿ ಪೊಲೀಸ್‌ ಇಲಾಖೆಗಳಲ್ಲಿ ನೇಮಕವಾದವರಿಗೆ ಉದ್ಯೋಗ

ನೇಮಕಾತಿ ಪತ್ರವನ್ನು ವಿತರಣೆ ಮಾಡಲಾಗಿದೆ.

2030ರ ವೇಳೆಗೆ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಉದ್ಯೋಗ ಅವಕಾಶ: 13-14 ಕೋಟಿ ರೂ.

2030ರ ವೇಳೆಗೆ ದೇಶದ ಆರ್ಥಿಕತೆಗೆ ಪ್ರವಾಸೋದ್ಯಮ ವಲಯದ ಅಂದಾಜು ಕೊಡುಗೆ: 20 ಲಕ್ಷ ಕೋಟಿ ರೂ.

2030ರ ವೇಳೆಗೆ ದೇಶದ ಆರ್ಥಿಕತೆಗೆ ಔಷಧ ವಲಯದ ಅಂದಾಜು ಕೊಡುಗೆ: 10 ಲಕ್ಷ ಕೋಟಿ ರೂ.

ಸರ್ಕಾರದ ಮೂಲಗಳು ಬ್ಯಾಂಕಿಂಗ್‌ (Banking), ಆಹಾರ ಸಂಸ್ಕರಣೆ, ಪ್ರವಾಸೋದ್ಯಮ, ಆಟೋಮೊಬೈಲ್‌ (Automobile), ಔಷಧ ವಲಯದಲ್ಲಿ ಹೆಚ್ಚಿನ ಉದ್ಯೋಗ ಅವಕಾಶಗಳಿದ್ದು,

ವಾಣಿಜ್ಯ ವಹಿವಾಟು ವಿಸ್ತರಣೆಗೆ ಈ ವಲಯಗಳು ಸೂಕ್ತವಾಗಿದೆ. ಮುಂದಿನ ದಿನಗಳಲ್ಲಿ ಸ್ಟಾರ್ಟ್‌ಅಪ್‌ಗಳ (Startup) ಸಂಖ್ಯೆಯಲ್ಲಿ ಭಾರಿ ಹೆಚ್ಚಳವಾಗಲಿದೆ ಎಂದು ತಿಳಿಸಿವೆ.

ಭವ್ಯಶ್ರೀ ಆರ್.ಜೆ

Exit mobile version