ದೇಶದ 500 ಜಿಲ್ಲೆಗಳಲ್ಲಿ ಗಣರಾಜ್ಯೋತ್ಸವಕ್ಕೆ ರೈತರಿಂದ ಟ್ರ್ಯಾಕ್ಟರ್ ಪರೇಡ್

ದೇಶದಾದ್ಯಂತ ಸುಮಾರು 500 ಜಿಲ್ಲೆಗಳಲ್ಲಿ ಗಣರಾಜ್ಯೋತ್ಸವ (Republic Day)ದಿನದಂದು ಟ್ರ್ಯಾಕ್ಟರ್ ಪರೇಡ್ ನಡೆಸಲಿದೆ ಎಂದು ಸಂಯುಕ್ತ ಕಿಸಾನ್ ಮೋರ್ಚಾ (Samyukta Kisan Morcha) ಸಂಘಟನೆಯು ಗುರುವಾರ ಪ್ರಕಟಣೆಯಲ್ಲಿ ತಿಳಿಸಿದ್ದು, ರಾಷ್ಟ್ರ ರಾಜಧಾನಿಯಲ್ಲಿ ಔಪಚಾರಿಕ ಗಣರಾಜ್ಯೋತ್ಸವ ಪರೇಡ್‌ನ (Pared) ಮುಕ್ತಾಯದ ನಂತರ ಟ್ರ್ಯಾಕ್ಟರ್ ಪರೇಡ್ ನಡೆಯಲಿದೆ ಎಂದು ಅದು ಹೇಳಿದೆ.

ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಜಿಲ್ಲಾ ಮಟ್ಟದಲ್ಲಿ ಜನವರಿ (January) 26,2024ರಂದು ಟ್ರಾಕ್ಟರ್ ಪರೇಡನ್ನು ಎಸ್‌ಕೆಎಂ ನಡೆಸಲಿದ್ದು, ಕನಿಷ್ಠ 500 ಜಿಲ್ಲೆಗಳಲ್ಲಿ ಪರೇಡ್ ನಡೆಯುವ ನಿರೀಕ್ಷೆಯಿದೆ. ರೈತರು ಹೆಚ್ಚಿನ ಸಂಖ್ಯೆಯಲ್ಲಿ ಮೆರವಣಿಗೆಯಲ್ಲಿ ಪಾಲ್ಗೊಳ್ಳುವಂತೆ ಎಸ್‌ಕೆಎಂ (SKM) ಮನವಿ ಮಾಡಿದ್ದು, ದೆಹಲಿಯಲ್ಲಿ ಗಣರಾಜ್ಯೋತ್ಸವದ ಔಪಚಾರಿಕ ಮೆರವಣಿಗೆಯ ಸಮಾರೋಪದ ಬಳಿಕ ಟ್ರ್ಯಾಕ್ಟರ್ ಪರೇಡ್ (Tractor Parade) ನಡೆಯಲಿದೆ” ಎಂದು ಸಂಘಟನೆ ಪ್ರಕಟನೆಯಲ್ಲಿ ಹೊರಡಿಸಿದೆ.

ರೈತರು ಸಂಘ, ಸಂಸ್ಥೆಗಳ ಧ್ವಜದೊಂದಿಗೆ ರಾಷ್ಟ್ರಧ್ವಜವನ್ನು ಪರೇಡ್‌ನಲ್ಲಿ ಹಾರಿಸಲಿದ್ದು, ಭಾರತದ ಸಂವಿಧಾನದಲ್ಲಿರುವ ಪ್ರಜಾಪ್ರಭುತ್ವ, ಒಕ್ಕೂಟ, ಜಾತ್ಯತೀತತೆ ಮತ್ತು ಸಮಾಜವಾದದ ತತ್ವಗಳನ್ನು ರಕ್ಷಿಸಲು ರೈತರು ಪ್ರತಿಜ್ಞೆ ಮಾಡಲಿದ್ದಾರೆ. ಟ್ರ್ಯಾಕ್ಟರ್‌ಗಳ ಜೊತೆಗೆ, ಇತರ ವಾಹನಗಳು ಮತ್ತು ಮೋಟಾರು ಸೈಕಲ್‌ಗಳು (Motor Cycle) ಕೂಡ ಪರೇಡ್‌ನಲ್ಲಿ ಸೇರಿಕೊಳ್ಳಲಿವೆ ಎಂದು ಎಸ್‌ಕೆಎಂ ಹೇಳಿದೆ.

20 ರಾಜ್ಯಗಳಲ್ಲಿನ ಎಸ್‌ಕೆಎಂ(SKM) ರಾಜ್ಯ ಘಟಕಗಳು ಮುಂದಿನ ವರ್ಷ ಜನವರಿ 10 ರಿಂದ 20 ರವರೆಗೆ ಭಾರತದಾದ್ಯಂತ ಮನೆ-ಮನೆ ಭೇಟಿ ಮತ್ತು ಕರಪತ್ರಗಳ ವಿತರಣೆಯ ಮೂಲಕ “ಜನ ಜಾಗರಣ”(“People’s Awakening”) ಅಭಿಯಾನವನ್ನು ನಡೆಸಲಿವೆ. ಕೇಂದ್ರ ಸರ್ಕಾರದ “ಕಾರ್ಪೊರೇಟ್ ಪರ ಆರ್ಥಿಕ ನೀತಿಗಳನ್ನು ಬಹಿರಂಗಪಡಿಸುವುದು” ಸಾಮೂಹಿಕ ಅಭಿಯಾನದ ಉದ್ದೇಶವಾಗಿದೆ ಎಂದು ಅದು ಮಾಹಿತಿ ನೀಡಿದೆ.

ಕೋಮುವಾದ,(communalism) ಜಾತಿವಾದಿ ಧ್ರುವೀಕರಣದ ಮೂಲಕ ಜನರನ್ನು ಶೋಷಿಸುವ ಮತ್ತು ವಿಭಜಿಸುವ ಕಾರ್ಪೊರೇಟ್-ಕೋಮುವಾದಿ (Corporate-Communist) ನಂಟು ತೊಡೆದುಹಾಕಲು ಅಭಿಯಾನ ಮತ್ತು ಮೆರವಣಿಗೆಯನ್ನು ಯಶಸ್ವಿಗೊಳಿಸುವಂತೆ ಎಸ್‌ಕೆಎಂ ಭಾರತದಾದ್ಯಂತ ರೈತರಿಗೆ ಕರೆ ನೀಡಿದ್ದು ಕೇಂದ್ರ ಸರ್ಕಾರ ನಮ್ಮ ಎಲ್ಲಾ ಬೇಡಿಕೆಗಳನ್ನು ಈಡೇರಿಸುವವರೆಗೆ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಕೇಂದ್ರದ ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸಬೇಕೆಂದು ಒತ್ತಾಯಿಸಿ ಜನವರಿ 26, 2021ರಂದು, ರೈತ ಸಂಘಗಳು ಆಯೋಜಿಸಿದ್ದ ಟ್ರ್ಯಾಕ್ಟರ್ ರ್‍ಯಾಲಿ ವೇಳೆ ಪ್ರತಿಭಟನಾನಿರತ ಸಾವಿರಾರು ರೈತರು ಮತ್ತು ಪೊಲೀಸ ನಡುವೆ ಘರ್ಷಣೆ ನಡೆದಿತ್ತು. ಕೆಲವು ಪ್ರತಿಭಟನಾಕಾರರು ಕೆಂಪು ಕೋಟೆ ಮೇಲೆ ಧಾರ್ಮಿಕ ಧ್ವಜಗಳನ್ನು ಹಾರಿಸಿದ್ದರು ಎಂದು ಆರೋಪಿಸಲಾಗಿದೆ.

ಭವ್ಯಶ್ರೀ ಆರ್ ಜೆ

Exit mobile version