• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ದೇಶ-ವಿದೇಶ

ಟ್ವಿಟರ್‌ ಬಳಸಿ ೯ ಕೊಲೆ; ಗಲ್ಲು ಶಿಕ್ಷೆ ವಿಧಿಸಿದ ಕೋರ್ಟ್

Sharadhi by Sharadhi
in ದೇಶ-ವಿದೇಶ, ಪ್ರಮುಖ ಸುದ್ದಿ
ಟ್ವಿಟರ್‌ ಬಳಸಿ ೯ ಕೊಲೆ; ಗಲ್ಲು ಶಿಕ್ಷೆ ವಿಧಿಸಿದ ಕೋರ್ಟ್
0
SHARES
0
VIEWS
Share on FacebookShare on Twitter

ಟೋಕಿಯೊ, ಡಿ. 15: ಇಲ್ಲೊಬ್ಬ  ಟ್ವಿಟರ್​ ಕಿಲ್ಲರ್​. ಟ್ವಿಟರ್​ನಲ್ಲಿಯೇ ಜನರನ್ನು ಪರಿಚಯ ಮಾಡಿಕೊಂಡು ತನ್ನೆದುರು ಕರೆಸಿಕೊಂಡು ಹತ್ಯೆ ಮಾಡುತ್ತಿದ್ದ! ನಂಬಲು ಅಸಾಧ್ಯ ಎನಿಸುವ ಕೃತ್ಯ ಎಸಗುತ್ತಿದ್ದ ಈ ಯುವಕನ ಹೆಸರು ಟಕಹಿರೋ ಶಿರೇಷಿ. 27 ವರ್ಷದ ಈ ಯುವಕ ಟ್ವಿಟರ್​ ಬಳಸಿ ಒಟ್ಟೂ ಒಂಬತ್ತು ಮಂದಿಯನ್ನು ಕೊಲೆ ಮಾಡಿದ್ದಾನೆ! ಅದಕ್ಕಾಗಿಯೇ ಇವರಿಗೆ ಟ್ವಿಟರ್​ ಕಿಲ್ಲರ್​ ಎಂಬ ಹೆಸರು.

ಅಂದಹಾಗೆ ಈಗ ಜಪಾನ್​ನ ಟೋಕಿಯೊ ನಿವಾಸಿ. ಅತ್ಯಂತ ನಿಗೂಢವಾಗಿಯೇ ಉಳಿದಿದ್ದ ಒಂಬತ್ತು ಮಂದಿಯ ಕೊಲೆ ಪ್ರಕರಣವನ್ನು ಭೇದಿಸಿದ್ದ ಜಪಾನ್​ ಪೊಲೀಸರಿಗೆ ಕೊನೆಗೂ ಈ ಯುವಕ ಸಿಕ್ಕಿಬಿದ್ದಿದ್ದಾನೆ. ಅತ್ಯಂತ ವಿಚಿತ್ರ ರೀತಿಯಲ್ಲಿ ಈತ 9 ಮಂದಿಯನ್ನು ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ. ಈತನಿಗೆ ಜಪಾನ್​ ಕೋರ್ಟ್​ ಇದೀಗ ಗಲ್ಲುಶಿಕ್ಷೆ ವಿಧಿಸಿದೆ. ಎಂಟು ಮಂದಿ ಯುವತಿಯರು ಹಾಗೂ ಒಬ್ಬ ಯುವಕ ಸೇರಿದಂತೆ ಒಂಬತ್ತು ಮಂದಿಯನ್ನು ಕೊಲೆ ಮಾಡಿರುವ ಹೇಯ ಕೃತ್ಯ ಎಸಗಿದವನಿಗೆ ಇದೇ ಸರಿಯಾದ ಶಿಕ್ಷೆ ಎಂದು ಕೋರ್ಟ್​ ಹೇಳಿದೆ.2009ರಿಂದ 2011ರವರೆಗೆ ಸೂಪರ್ ಮಾರ್ಕೆಟ್​ನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಟಕಹಿರೋ ಶಿರೇಷಿ ಕೆಲಸವನ್ನು ಬಿಟ್ಟಿದ್ದ. ನಂತರ ಕೆಲಸಕ್ಕಾಗಿ ತುಂಬಾ ಪ್ರಯತ್ನಪಟ್ಟಿದ್ದರೂ ಯಾವ ಕೆಲಸವೂ ಸಿಕ್ಕಿರಲಿಲ್ಲ, ಇದರಿಂದ ಮಾನಸಿಕವಾಗಿ ಕುಗ್ಗಿದ್ದ, ಜತೆಗೆ ವಿಚಿತ್ರವಾಗಿ ವರ್ತಿಸತೊಡಗಿದ್ದ.ಇದೇ ಅವನಲ್ಲಿ ವಿಕೃತ ಮನೋಭಾವಕ್ಕೆ ಕಾರಣವಾಗಿತ್ತು. ಸದಾ ಟ್ವಿಟರ್​ನಲ್ಲಿ ನಿತರನಾಗುತ್ತಿದ್ದ ಈತನಿಗೆ, ಕೆಲವರು ಪರಿಚಯವಾಗಿದ್ದರು. ಬದುಕಿನಲ್ಲಿ ತನ್ನಂತೆಯೇ ಹತಾಶರಾಗಿದ್ದು, ಟ್ವಿಟರ್​ನಲ್ಲಿ ಹೇಳಿಕೆಗಳನ್ನು ಪೋಸ್ಟ್​ ಮಾಡುವವರು ಇವನಿಗೆ ಟಾರ್ಗೆಟ್​ ಆದರು.

ಇವರು ಕೂಡ ತನ್ನಂತೆಯೇ ಮಾನಸಿಕವಾಗಿ ಕುಗ್ಗಿದ್ದರಿಂದ, ನಿಧಾನವಾಗಿ ಅವರಿಗೆಲ್ಲಾ ಮೆಸೇಜ್​ ಮಾಡಲು ಶುರು ಮಾಡಿದ್ದ. ನಿಮಗೆ ಆತ್ಮಹತ್ಯೆ ಮಾಡಿಕೊಳ್ಳಬೇಕು ಎನ್ನಿಸುತ್ತಿದೆಯೆ? ಈ ರೀತಿ ಬದುಕುವುದಕ್ಕಿಂತ ಆತ್ಮಹತ್ಯೆಯೇ ಮೇಲು ಎಂದೆಲ್ಲಾ ಅಂಥವರಿಗೆ ಹೇಳುತ್ತಿದ್ದ. ಈತನ ಮಾತು ಕೇಳಿದವರಿಗೆ ಇನ್ನೂ ಆತ್ಮಹತ್ಯೆ ಮನೋಭಾವ ಕಾಡತೊಡಗುತ್ತಿತ್ತು.

ಅವರ ಬ್ರೇನ್​ವಾಷ್​ ಮಾಡಿದ ನಂತರ ಅವರು ಹೌದು ತಮಗೆ ಆತ್ಮಹತ್ಯೆ ಮಾಡಿಕೊಳ್ಳಬೇಕು ಎನ್ನಿಸುತ್ತಿದೆ ಎನ್ನುತ್ತಿದ್ದರು. ಆಗ ಅವರನ್ನು ತನ್ನ ಬಳಿಗೆ ಬರಲು ಹೇಳುತ್ತಿದ್ದ ಈ ಯುವಕ. ನಿಮಗೆ ಯಾವುದೇ ತೊಂದರೆ ಇಲ್ಲದಂತೆ ಆತ್ಮಹತ್ಯೆ ಮಾಡಿಕೊಳ್ಳುವುದು ಹೇಗೆ ಎಂದು ನಾನು ಹೇಳಿಕೊಡುವೆ ಎಂದು ಅವರನ್ನು ಕರೆಸಿಕೊಂಡು ನಂತರ ವಿಕೃತವಾಗಿ ಅವರನ್ನು ಕೊಲೆ ಮಾಡುತ್ತಿದ್ದ. ಹೀಗೆ ಎಂಟು ಮಂದಿ ಯುವತಿಯರು ಮತ್ತು ಒಬ್ಬ ಯುವಕ ಈತನಿಗೆ ಬಲಿಯಾದರು. 9 ಮಂದಿಯ ನಿಗೂಢ ಹತ್ಯೆಯನ್ನು ಭೇದಿಸಿದ ಪೊಲೀಸರು ನಂತರ ಖುದ್ದು ಟ್ವಿಟರ್​ ಮೂಲಕ ತಾವೇ ಆತನನ್ನು ಪರಿಚಯ ಮಾಡಿಕೊಂಡು ಆತನಿಗಾಗಿ ಬಲೆ ಬೀಸಿ ಹಿಡಿದಿದ್ದಾರೆ. ತಾನು ಮಾಡಿರುವ ಕೃತ್ಯಗಳನ್ನು ಆತ ಒಪ್ಪಿಕೊಂಡಿದ್ದಾನೆ. ಜಪಾನ್​ನಲ್ಲಿ ಅಪರಾಧ ಪ್ರಕರಣಗಳು ಅತ್ಯಂತ ಕಡಿಮೆ. ಆದರೆ ಈ ರೀತಿ ಒಂಬತ್ತು ಕೊಲೆಗಳು ಪೊಲೀಸರ ನಿದ್ದೆಗೆಡಿಸಿದ್ದವು ಎನ್ನಲಾಗಿದೆ. ಈತನಿಗೆ ಶಿಕ್ಷೆಯ ಪ್ರಮಾಣ ವಿಧಿಸುವುದನ್ನು ತಿಳಿಯುತ್ತಿದ್ದಂತೆಯೇ ಇಲ್ಲಿಯ ಕೋರ್ಟ್​ನಲ್ಲಿ ಹಿಂದೆಂದೂ ಕಾಣದಷ್ಟು ರೀತಿಯಲ್ಲಿ ಜನರು ಕಿಕ್ಕಿರಿದು ತುಂಬಿದ್ದರು ಎಂದು ವರದಿಯಾಗಿದೆ.

Related News

12 ವರ್ಷ ವಾಹನ ಸಂಚಾರವನ್ನೇ ಮಾಡಲಿಲ್ಲ, ಇಲ್ಲಿವರೆಗೆ ಮೊಬೈಲೇ ಬಳಸಿಲ್ಲ: ಚಾರುಕೀರ್ತಿ ಭಟ್ಟಾರಕ ಶ್ರೀಗಳು ಬಿಚ್ಚಿಟ್ಟ ವಿಚಿತ್ರ ಸತ್ಯ
Vijaya Time

ಚಾರುಕೀರ್ತಿ ಭಟ್ಟಾರಕ ಶ್ರೀ ವಿಧಿವಶ: 12 ವರ್ಷ ವಾಹನ ಸಂಚಾರವನ್ನೇ ಮಾಡದ, ಮೊಬೈಲನ್ನೇ ಬಳಸದ ಸಂತರಿವರು

March 23, 2023
ರಾಹುಲ್ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿಯವರ  ಅತಿದೊಡ್ಡ TRP : ಮಮತಾ ಬ್ಯಾನರ್ಜಿ
ದೇಶ-ವಿದೇಶ

ರಾಹುಲ್ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿಯವರ  ಅತಿದೊಡ್ಡ TRP : ಮಮತಾ ಬ್ಯಾನರ್ಜಿ

March 20, 2023
ಬೆಂಗಳೂರಿನಲ್ಲಿ ಡ್ರಗ್ಸ್ ಜಾಲ ಪತ್ತೆ : 2.48 ಕೋಟಿ ಮೌಲ್ಯದಷ್ಟು ಜಪ್ತಿ ಮಾಡಿದ ಸಿಸಿಬಿ ಪೊಲೀಸರು.
ಪ್ರಮುಖ ಸುದ್ದಿ

ಬೆಂಗಳೂರಿನಲ್ಲಿ ಡ್ರಗ್ಸ್ ಜಾಲ ಪತ್ತೆ : 2.48 ಕೋಟಿ ಮೌಲ್ಯದಷ್ಟು ಜಪ್ತಿ ಮಾಡಿದ ಸಿಸಿಬಿ ಪೊಲೀಸರು.

March 20, 2023
ಇಬ್ಬರು ಹೆಂಡತಿಯರ ಮುದ್ದಿನ ಗಂಡ ಮಾಡಿಕೊಂಡಿದ್ದಾನೆ ಒಪ್ಪಂದ! ; ಮಾಡಿಕೊಂಡಿರುವ ಒಪ್ಪಂದವೇನು ಗೊತ್ತಾ?
ದೇಶ-ವಿದೇಶ

ಇಬ್ಬರು ಹೆಂಡತಿಯರ ಮುದ್ದಿನ ಗಂಡ ಮಾಡಿಕೊಂಡಿದ್ದಾನೆ ಒಪ್ಪಂದ! ; ಮಾಡಿಕೊಂಡಿರುವ ಒಪ್ಪಂದವೇನು ಗೊತ್ತಾ?

March 15, 2023

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
Menu
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
Menu
  • About Us
  • Contact Us
  • For Advertisement

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.