ಉಕ್ರೇನ್‌ನಲ್ಲಿ ಸಿಲುಕಿರುವ 50ಕ್ಕೂ ಹೆಚ್ಚು ಭಾರತೀಯ ವಿದ್ಯಾರ್ಥಿಗಳು!

ಕಳೆದ ಹಲವು ದಿನಗಳಿಂದ ರಷ್ಯಾ ಮತ್ತು ಉಕ್ರೇನ್ ನಡುವೆ ನಡೆಯುತ್ತಿದ್ದ ಶೀತಲ ಸಮರ, ಇದೀಗ ಯುದ್ದಕ್ಕೆ ಪರಿವರ್ತನೆಯಾಗಿದೆ. ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಗುರುವಾರ ಉಕ್ರೇನ್ನಲ್ಲಿ “ಮಿಲಿಟರಿ ಕಾರ್ಯಾಚರಣೆ” ಘೋಷಿಸಿದ್ದಾರೆ. ಈ ಮೂಲಕ ರಷ್ಯಾ ಮತ್ತು ಉಕ್ರೇನ್ ನಡುವೆ ಯುದ್ಧ ಆರಂಭವಾಗಿಯೇ ಬಿಟ್ಟಿದೆ. ಪಾಶ್ಚಿಮಾತ್ಯ ಆಕ್ರೋಶ ಮತ್ತು ಯುದ್ಧವನ್ನು ಪ್ರಾರಂಭಿಸಬೇಡಿ ಎಂಬ ಜಾಗತಿಕ ಮನವಿಯನ್ನು ಧಿಕ್ಕರಿಸಿ ಪುಟಿನ್ ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಪುಟಿನ್ ಅವರು ಟಿವಿ ಮಾಧ್ಯಮದ ಮೂಲಕ ಯುದ್ಧದ ಉದ್ದೇಶಗಳನ್ನು ಘೋಷಿಸಿ ಎಲ್ಲರಲ್ಲೂ ಅಚ್ಚರಿ ಮತ್ತು ಆತಂಕ ಸೃಷ್ಟಿಸಿದ್ದಾರೆ. ನಾನು ಮಿಲಿಟರಿ ಕಾರ್ಯಾಚರಣೆಯ ನಿರ್ಧಾರವನ್ನು ಮಾಡಿದ್ದೇನೆ. ಈ ವಿಷಯದಲ್ಲಿ ಮಧ್ಯ ಪ್ರವೇಶಿಸುವ ಯಾರ ಮೇಲೆಯೂ ಪ್ರತೀಕಾರ ತೆಗೆದುಕೊಳ್ಳುವ ಪ್ರತಿಜ್ಞೆ ಮಾಡುತ್ತೇನೆ ಎಂದಿದ್ದಾರೆ.

ಅಲ್ಲದೇ ಉಕ್ರೇನ್ ಮಿಲಿಟರಿಗೆ ಶಸ್ತ್ರಾಸ್ತ್ರಗಳನ್ನು ತ್ಯಜಿಸುವಂತೆ ಅವರು ಕರೆ ನೀಡಿದ್ದಾರೆ. ರಷ್ಯಾ ಸಂಸತ್ತಿನ ಮೇಲ್ಮನೆಯು ಉಕ್ರೇನ್ ವಿರುದ್ಧ ಸೇನಾ ಕಾರ್ಯಾಚರಣೆ ನಡೆಸಲು ಮತ್ತು ಎರಡು ದೇಶಗಳ ನಡುವಿನ ಗಡಿಭಾಗದಲ್ಲಿ ಸೇನೆ ಜಮಾವಣೆ ಮಾಡಲು ಪುಟಿನ್ ಅವರಿಗೆ ಸಮ್ಮತಿ ನೀಡಿತ್ತು. ಈ ಹಿನ್ನೆಲೆಯಲ್ಲಿ ಅವರು ಉಕ್ರೇನ್ನಲ್ಲಿ ‘ಮಿಲಿಟರಿ ಕಾರ್ಯಾಚರಣೆ’ ಘೋಷಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಪೂರ್ವ ಉಕ್ರೇನ್ನಲ್ಲಿನ ಬಂಡಾಯ ನಾಯಕರು ಉಕ್ರೇನ್ ವಿರುದ್ಧ ಮಿಲಿಟರಿ ಸಹಾಯಕ್ಕಾಗಿ ರಷ್ಯಾವನ್ನು ಕೇಳಿಕೊಂಡಿದ್ದಾರೆ ಎನ್ನಲಾಗಿದೆ.


ಸಂಕಷ್ಟಕ್ಕೆ ಸಿಲುಕಿರುವ ಭಾರತೀಯರು :

ಜನರು ಆಹಾರ ಮತ್ತು ನೀರನ್ನು ಸಂಗ್ರಹಿಸಲು ಹೆಣಗಾಡುತ್ತಿದ್ದಾರೆ ಎಂದು ರಾಜಧಾನಿ ಕೀವ್ ನಲ್ಲಿ ಸಿಕ್ಕಿಬಿದ್ದ ವಿದ್ಯಾರ್ಥಿ ನಿಲೇಶ್ ಹೇಳಿದ್ದಾರೆ. ವಾಯುಪ್ರದೇಶವನ್ನು ಮುಚ್ಚಿದ ನಂತರ ಏರ್ ಇಂಡಿಯಾ ವಿಮಾನಗಳು ಸಹ ಹಿಂದಿರುಗಿವೆ. ಇಂತಹ ಪರಿಸ್ಥಿತಿಯಲ್ಲಿ ಅವರ ಸುರಕ್ಷತೆಗೆ ವ್ಯವಸ್ಥೆ ಮಾಡಬೇಕು ಎಂದು ವಿದ್ಯಾರ್ಥಿಗಳು ಕೇಳಿಕೊಂಡಿದ್ದಾರೆ. 50 ರಿಂದ 60 ಭಾರತೀಯ ವಿದ್ಯಾರ್ಥಿಗಳು ಹಾಸ್ಟೆಲ್ ನಲ್ಲಿ ಸಿಕ್ಕಿಬಿದ್ದಿದ್ದಾರೆ ಮತ್ತು 1-2 ದಿನಗಳ ಕಾಲ ತಮ್ಮ ಮನೆಗಳಲ್ಲಿ ಇರಲು ನೀರು ಪಡೆಯಲು ಸರದಿಯಲ್ಲಿ ನಿಂತಿದ್ದಾರೆ. ಎಲ್ಲಾ ಸೂಪರ್ ಮಾರ್ಕೆಟ್ ಗಳಲ್ಲಿ ಆಹಾರ ಮತ್ತು ಪಾನೀಯ ಖಾಲಿಯಾಗಿದೆ ಎಂದು ನಿಲೇಶ್ ಹೇಳಿದರು. ರಷ್ಯಾ ಮತ್ತು ಉಕ್ರೇನ್ ನಡುವೆ ನಡೆಯುತ್ತಿರುವ ವಿವಾದ ಇದೀಗ ಯುದ್ಧ ಸ್ವರೂಪ ಪಡೆದುಕೊಂಡಿದೆ.

Exit mobile version