ಹೊಸ ಕೃಷಿ ಕಾನೂನುಗಳನ್ನು ಸ್ವಾಗತಿಸಿದ ಅಮೇರಿಕಾ ಅಧ್ಯಕ್ಷ ಬೈಡನ್

ವಾಷಿಂಗ್ಟನ್, ಫೆ. 04: ಅಮೆರಿಕದ ನೂತನ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದ, ಬೈಡನ್ ಅವರ ಆಡಳಿತ ಭಾರತ ಸರ್ಕಾರದ ಜಾರಿಗೆ ತಂದಿರುವ ಕೃಷಿ ಕಾನೂನುಗಳು ಉತ್ತಮವಾಗಿದ್ದು, ಇವುಗಳನ್ನು ಸ್ವಾಗತಿಸುತ್ತೇವೆ. ಈ ಕಾಯ್ದೆಗಳು ರೈತರ ಆದಾಯ ಹೆಚ್ಚುವಲ್ಲಿ ಸಹಕಾರಿಯಾಗಲಿವೆ. ಇದಕ್ಕೆ ನಮ್ಮ ಸಹಮತವಿದೆ.

ಹೊಸ ಕೃಷಿ ಕಾಯಿದೆಗಳಿಂದ ಆ ಭಾರತದಲ್ಲಿ ಖಾಸಗಿ ಬಂಡವಾಳ ಹೂಡಿಕೆಯಲ್ಲಿ ಹೆಚ್ಚಾಗಲಿದೆ ಹಾಗೂ ರೈತರು ಹೆಚ್ಚಿನ ಮಾರುಕಟ್ಟೆ ಪ್ರವೇಶಿಸಲು ಅನುಕೂಲವಾಗಲಿದೆ. ರೈತರು ದೂರದ ಮಾರುಕಟ್ಟೆಯನ್ನು ಪ್ರವೇಶಿಸಲು ಹಾಗೂ ತಮ್ಮ ಉತ್ಪನ್ನಗಳನ್ನು ಉತ್ತಮ ಬೆಲೆಗೆ ಯಾರಿಗೆ ಬೇಕಾದರೂ ಮಧ್ಯವರ್ತಿಗಳ ಹಾವಳಿಯಿಲ್ಲದೆ ನೇರವಾಗಿ ಮಾರಾಟ ಮಾಡುವ ಸ್ವಾತಂತ್ರ್ಯ ಪಡೆಯಲಿದ್ದಾರೆ.

ಆ ದೇಶದಲ್ಲಿ ನಡೆಯುತ್ತಿರುವ ರೈತ ಪ್ರತಿಭಟನೆ ಅಂತ್ಯ ಹಾಡುವಲ್ಲಿ ನೀವು ಭಾರತ ಸರ್ಕಾರದ ಸಹಕರಿಸಲಿದ್ದೀರಾ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ವಿದೇಶಾಂಗ ಇಲಾಖೆ, ಪಕ್ಷಗಳ ನಡುವಿನ ಯಾವುದೇ ಭಿನ್ನಾಭಿಪ್ರಾಯಗಳನ್ನು ಸಂವಾದದ ಮೂಲಕ ಪರಿಹರಿಸಲು ಅಮೆರಿಕ ಸರ್ಕಾರದ ಸಹಕರಿಸುತ್ತದೆ ಎಂದಿದ್ದಾರೆ.

ಅಲ್ಲದೆ, ಆ ದೇಶದ ರೈತರ ಪ್ರತಿಭಟನೆ ಬಗ್ಗೆ ಕೆಲವು ವಿದೇಶೀ ಕೈವಾಡಗಳು ಸರ್ಕಾರದ ವಿರುದ್ಧ ತಪ್ಪು ಅಭಿಪ್ರಾಯ ಸೃಷ್ಟಿಸುವ ಪ್ರಯತ್ನ ಮಾಡುತ್ತಿವೆ. ಅದು ಅಲ್ಲಿನ ಸರ್ಕಾರ ಮತ್ತು ರೈತರ ನಡುವಿನ ಭಿನ್ನಾಭಿಪ್ರಾಯ ಅದನ್ನು ಅವರು ಪರಿಹರಿಸಿಕೊಳ್ಳುತ್ತಾರೆ. ಯಾವ ದೇಶಕ್ಕೂ ಅವರ ನಡುವೆ ಪ್ರವೇಶಿಸುವ ಹಕ್ಕಿಲ್ಲ. ಆ ರೀತಿ ಹುನ್ನಾರ ನಡೆಸುವ ಕ್ರಮ ಒಳ್ಳೆಯದಲ್ಲ. ಅದನ್ನು ತೀವ್ರವಾಗಿ ಖಂಡಿಸುತ್ತೇವೆ ಎಂದು ವಿದೇಶಾಂಗ ಇಲಾಖೆ ವಕ್ತಾರರು ಉತ್ತರಿಸಿದ್ದಾರೆ.

Exit mobile version