Offline UPI: ಇಂಟರ್ನೆಟ್ ಕನೆಕ್ಷನ್ ಇಲ್ಲದೆಯೂ ಯುಪಿಐ ಮೂಲಕ ಹಣ ಕಳುಹಿಸುವ ಟ್ರಿಕ್ ನಿಮಗೆ ಗೊತ್ತೇ?

Offline UPI Payments: ನಿಮ್ಮ ಮೊಬೈಲ್​ನಲ್ಲಿ ಡೇಟಾ ಖಾಲಿಯಾಗಿದ್ದು ಅಥವಾ ಇಂಟರ್‌ನೆಟ್‌ ಕನೆಕ್ಷನ್ ಇಲ್ಲದೆ ನೀವು ಯುಪಿಐ ಪಾವತಿ ಮಾಡಬೇಕಾದ ಸನ್ನಿವೇಶ ಎದುರಾದಗ ಎಲ್ಲರೂ ಸಂಕಷ್ಟ ಅನುಭವಿಸುತ್ತಾರೆ. ಆದರೆ ಇದಕ್ಕಾಗಿ ನೀವು ಚಿಂತಿಸಬೇಕಾಗಿಲ್ಲ.

UPI Payment

ಇಂದಿನ ಕಾಲದಲ್ಲಿ ಯುಪಿಐ (UPI) ಪಾವತಿ ಸೇವೆಗಳು ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿವೆ. ಅದರಲ್ಲೂ ಕೊರೊನಾ ವೈರಸ್ (Corona virus) ಬಂದ ಮೇಲೆ ದೇಶದಲ್ಲಿ ಹೆಚ್ಚಿನ ವ್ಯವಹಾರಗಳು ಆನ್​ಲೈನ್ (Online) ಮೂಲಕವೇ ನಡೆಯುತ್ತಿದೆ. ಹಣ ಪಾವತಿಗಳಿಗಾಗಿ ಜನರು ಡಿಜಿಟಲ್ ವ್ಯವಸ್ಥೆಯನ್ನೇ ಅವಲಂಬಿಸುತ್ತಿದ್ದಾರೆ. ಇದೇ ಕಾರಣಕ್ಕೆ ಮೊಬೈಲ್‌ ವ್ಯಾಲೆಟ್‌ ಬಳಕೆದಾರರ ಸಂಖ್ಯೆ ಹೆಚ್ಚಾಗಿದೆ. ಹೀಗೆ ಯುಪಿಐ ಪಾವತಿ ವ್ಯವಸ್ಥೆಗೆ ನಿಮ್ಮ ಫೋನ್‌ನಲ್ಲಿ ಇಂಟರ್‌ನೆಟ್‌ (Internet) ಅವಶ್ಯಕತೆ ಬೇಕಾಗುತ್ತದೆ. ಆದರೆ, ಇಂಟರ್‌ನೆಟ್‌ ಇಲ್ಲದ ಸಮಯದಲ್ಲೂ ನೀವು ಯುಪಿಐ ಪಾವತಿ ಮಾಡುವುದಕ್ಕೆ8+ ಅವಕಾಶವಿದೆ. ನೀವು ಮೊಬೈಲ್ ಯುಎಸ್‌ಎಸ್‌ಡಿ ಆಧಾರಿತ ಮೊಬೈಲ್ ಬ್ಯಾಂಕಿಂಗ್‌ ಮೂಲಕ ಯಾವುದೇ ಡೇಟಾ ಕನೆಕ್ಟಿವಿಟಿ ಇಲ್ಲದೆ UPI ಪಾವತಿ ಮೂಲಕ ಹಣವನ್ನು ಕಳುಹಿಸಬಹುದಾಗಿದೆ.

ನಿಮ್ಮ ಮೊಬೈಲ್​ನಲ್ಲಿ ಡೇಟಾ ಖಾಲಿಯಾಗಿದ್ದು ಅಥವಾ ಇಂಟರ್‌ನೆಟ್‌ ಕನೆಕ್ಷನ್ ಇಲ್ಲದೆ ನೀವು ಯುಪಿಐ ಪಾವತಿ ಮಾಡಬೇಕಾದ ಸನ್ನಿವೇಶ ಎದುರಾದಗ ಎಲ್ಲರೂ ಸಂಕಷ್ಟ ಅನುಭವಿಸುತ್ತಾರೆ. ಆದರೆ ಇದಕ್ಕಾಗಿ ನೀವು ಚಿಂತಿಸಬೇಕಾಗಿಲ್ಲ. ಇಂತಹ ಸನ್ನಿವೇಶದಲ್ಲಿ ಯುಎಸ್‌ಎಸ್‌ಡಿ ಆಧಾರಿತ *99# ಆಫ್‌ಲೈನ್ ಮೂಲಕ ಪೇಮೆಂಟ್‌ ಅನ್ನು ಮಾಡಬಹುದಾಗಿದೆ.

NPCI ಯುಪಿಐ ಪಾವತಿಗಳನ್ನು ಅಪ್‌ಗ್ರೇಡ್ ಮಾಡಿದ USSD ಸೌಲಭ್ಯವನ್ನು ಪರಿಚಯಿಸಿದ್ದು, ಇದರಿಂದ ಯುಪಿಐ ಪಾವತಿಯನ್ನು ಇಂಟರ್‌ನೆಟ್‌ ಇಲ್ಲದೆ ಮಾಡುವುದಕ್ಕೆ ಅವಕಾಶ ಸಿಗುತ್ತದೆ. ವಿಶೇಷ ಎಂದರೆ ಈ ಸೇವೆಯನ್ನು ಬಳಸಿಕೊಂಡು ನೀವು ಬೇಸಿಕ್‌ ಮೊಬೈಲ್‌ಗಳಲ್ಲೂ ಸಹ ಯುಪಿಐ ಪಾವತಿಯನ್ನು ಮಾಡಬಹುದು. ಪ್ರತಿಯೊಬ್ಬ ಸಾಮಾನ್ಯ ವ್ಯಕ್ತಿ ಕೂಡ ಮೊಬೈಲ್‌ ಬ್ಯಾಕಿಂಗ್‌ ಸೇವೆ ಬಳಸುವುದಕ್ಕೆ ಈ ಮೂಲಕ ಅವಕಾಶ ಇದೆ.

Exit mobile version