ಉರ್ಫಿ ಜಾವೇದ್ : “ಜನರು ನನ್ನನ್ನು ಆತ್ಮಹತ್ಯೆ ಮಾಡಿಕೊಳ್ಳುವಂತೆ ಪ್ರೇರೇಪಿಸುತ್ತಿದ್ದಾರೆ”

Mumbai :ಮಹಾರಾಷ್ಟ್ರ(Maharashtra) ಬಿಜೆಪಿ ಪ್ರದೇಶ ಮಹಿಳಾ ಮೋರ್ಚಾ ಅಧ್ಯಕ್ಷೆ ಚಿತ್ರಾ ವಾಘ್ ಅವರನ್ನು ಗುರಿಯಾಗಿಸಿಕೊಂಡು ಈ ಜನರು ನನ್ನನ್ನು ‘ಆತ್ಮಹತ್ಯೆಗೆ’ ಪ್ರಚೋದಿಸುತ್ತಿದ್ದಾರೆ ಎಂದು ‘ಬಿಗ್ ಬಾಸ್ ಒಟಿಟಿ’ ಖ್ಯಾತಿಯ ಉರ್ಫಿ ಜಾವೇದ್(Urfi javed statement) ಆರೋಪಿಸಿದ್ದಾರೆ.

ಚಿತ್ರಾ ವಾಘ್ ಅವರು, ದೇಹದ ಅಂಗಾಂಗಗಳನ್ನ ಪ್ರದರ್ಶಿಸಿ ಮುಂಬೈನ ಬೀದಿಗಳಲ್ಲಿ ತಿರುಗಾಡುತ್ತಿರುವ ಈ ನಟಿ ವಿರುದ್ಧ ಕೂಡಲೇ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಇತ್ತೀಚೆಗಷ್ಟೇ ಮುಂಬೈ ಪೊಲೀಸ್ ಕಮಿಷನರ್ ವಿವೇಕ್ ಫನ್ಸಾಲ್ಕರ್ ಭೇಟಿ ಮಾಡಿ ದೂರು ದಾಖಲಿಸಿದ್ದರು .

ಇದಕ್ಕೆ ಪ್ರತಿಯಾಗಿ ಇದೀಗ ಉರ್ಫಿ ಪ್ರತಿಕ್ರಿಯಿಸಿದ್ದಾರೆ.

ಉರ್ಫಿ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ , ಸಂಜಯ್ ರಾಥೋಡ್(Sanjay Rathore) ಬಂಧನ ಪಡಿಸಬೇಕೆಂದು ಆಗ್ರಹಿಸುತ್ತಿದ್ದ ಚಿತ್ರಾ ವಾಘ್ ಎಂಬ ಮಹಿಳೆ,

ಪತಿಯನ್ನು ಲಂಚದ ಆರೋಪದಿಂದ ಉಳಿಸುವ ಸಲುವಾಗಿ ಚಿತ್ರಾ ವಾಘ್ ಅವರು ಬಿಜೆಪಿಗೆ ಸೇರಿದರು . ಅದಾದ ನಂತರ, ಸಂಜಯ್ ಮತ್ತು ಚಿತ್ರಾ ಉತ್ತಮ ಸ್ನೇಹಿತರಾದರು.

ಇದನ್ನೂ ಓದಿ : https://vijayatimes.com/state-congress-tweeted-against-bjp/

ನಾನು ಕೂಡ ಬಿಜೆಪಿ ಸೇರಿಕೊಂಡಿದ್ದರೆ ನಾನೂ ಹಾಗೂ ಸಂಜಯ್ ಉತ್ತಮ ಸ್ನೇಹಿತರಾಗಿರುತ್ತಿದ್ದೆವು’ ಎಂದು ತಮ್ಮಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪ್ರತಿಕ್ರಿಯಿಸಿದ್ದಾರೆ.

ಮತ್ತೊಂದು ಸ್ಟೋರಿಯಲ್ಲಿ, ಜನರು ನನ್ನನ್ನು ‘ಆತ್ಮಹತ್ಯೆ’ ಮಾಡಿಕೊಳ್ಳುವುದಾಗಿ ಪ್ರಚೋದಿಸುತ್ತಿದ್ದಾರೆ ಹಾಗೂ ರಾಜಕಾರಣಿ ವಿರುದ್ಧದ ವಿಚಾರವನ್ನು ಅಪ್‌ಲೋಡ್ ಮಾಡುವುದು ಕೂಡ ಅಪಾಯಕಾರಿಯಾಗಲಿದೆ ಎಂದು ಎಚ್ಚರಿಕೆ ನೀಡುತ್ತಿದ್ದಾರೆ.

‘ರಾಜಕಾರಣಿಗಳ ವಿರುದ್ಧದ ವಿಚಾರಗಳನ್ನು ಅಪ್‌ಲೋಡ್(Urfi javed statement) ಮಾಡುವುದು ತುಂಬಾ ಅಪಾಯಕಾರಿ ಎಂದು ನನಗೆ ಮೊದಲೆ ತಿಳಿದಿದೆ.

ಆದರೆ, ಈ ಜನರು ನನ್ನನ್ನು ಆತ್ಮಹತ್ಯೆಗೆ ಪ್ರಚೋದಿಸುತ್ತಿರುವುದು ತುಂಬಾ ಬೇಸರವನ್ನು ಉಂಟುಮಾಡಿದೆ. ಹಾಗಾಗಿ ನಾನು ಇದರಿಂದ ಹೊರಬರಲಾರದೆ ಮಾನಸಿಕ ಖಿನ್ನತೆಗೆ ಒಳಗಾಗುತ್ತೇನೆ ಜೊತೆಗೆ ನಾನು ಆತ್ಮಹತ್ಯೆ ಸಹ ಮಾಡಿಕೊಳ್ಳುತ್ತೇನೆ .

ಇದನ್ನೂ ಓದಿ : https://vijayatimes.com/156-rape-cases-registered/

ನಾನು ಯಾರಿಗೂ, ಯಾವುದೇ ತಪ್ಪು ಮಾಡಿಲ್ಲ. ಅವರಾಗಿಯೇ ಯಾವುದೇ ಕಾರಣವಿಲ್ಲದ್ದಿರೂ, ನನ್ನ ಬಳಿಗೆ ಬರುತ್ತಿದ್ದಾರೆ ಎಂದು ಪೋಸ್ಟ್ ಮಾಡಿದ್ದಾರೆ.

ಈ ಹಿಂದೆಯೂ ನನ್ನ ವಿಚಾರವಾಗಿ ಬಹಳಷ್ಟು ಟ್ವೀಟ್‌ಗಳನ್ನು ಮಾಡಿದ್ದರು. ಅದಲ್ಲದೆ ರಾಜಕರಣಿಯೊಬ್ಬರ ದೂರಿನ ಅನ್ವಯ ಪೋಲಿಸ್ ನನ್ನ ಮೇಲೆ ಚಾರ್ಜ ಶೀಟ್ ದಾಖಲಿಸಿದ್ದರೂ,

ನನ್ನ ಹೊಸ ವರ್ಷವನ್ನು ಪ್ರಾರಂಭಿಸಿದೆ! ಈ ರಾಜಕಾರಣಿಗಳಿಗೆ ಮಾಡಲು ನಿಜವಾಗಿಯೂ ಕೆಲಸವಿಲ್ಲವೇ? ಅಥವಾ ಈ ರಾಜಕಾರಣಿಗಳು ಮತ್ತು ವಕೀಲರು ದಡ್ಡರೇ? ಎಂದು ಪ್ರಶ್ನಿಸಿದ್ದಾರೆ.

ಯಾವುದೇ ವ್ಯಕ್ತಿಯನ್ನು ಏಕಾಏಕಿ ಜೈಲಿಗೆ ಹಾಕಲು ನಮ್ಮ ಸಂವಿಧಾನದಲ್ಲಿಯಾವುದೇ ಅವಕಾಶವಿಲ್ಲ ಜೊತೆಗೆ,

ನನ್ನ ಪೂರ್ತಿ ದೇಹವನ್ನು ನೋಡದ ಹೊರತು ನನ್ನನ್ನು ಜೈಲಿಗೆ ಕಳುಹಿಸಲು ಸಾಧ್ಯವೇ ಇಲ್ಲ ಎಂದಿದ್ದಾರೆ. ಮಾಧ್ಯಮದ(Media) ಗಮನವನ್ನು ಸೆಳೆಯುವುದ್ದಕ್ಕಾಗಿ ಜನರು ಈ ರೀತಿಯ ಕೆಲಸಗಳನ್ನು ಮಾಡುತ್ತಿದ್ದಾರೆ.

ನಾನು ಈ ಮೊದಲು ಮುಂಬೈನಲ್ಲಿ ನಡೆಯುತ್ತಿರುವ ಮಾನವ ಕಳ್ಳಸಾಗಣೆ ಮತ್ತು ಲೈಂಗಿಕ ಕಳ್ಳಸಾಗಣೆಯನ್ನು ಸಂಪೂರ್ಣವಾಗಿ ವಿರೋಧಿಸಿದೆ.

ಆದರೂ ಯಾವುದೇ ಬದಲಾವಣೆ ಇಲ್ಲದೆ ಇನ್ನೂ ಹೆಚ್ಚಾಗುತ್ತಲೇ ಇದೆ ಇಷ್ಟು ಮಾತ್ರವಲ್ಲದೆ ಮುಂಬೈನ ಎಲ್ಲೆಡೆ ಇರುವ ಅಕ್ರಮ ಡ್ಯಾನ್ಸ್ ಬಾರ್‌ಗಳು ಮತ್ತು ವೇಶ್ಯಾವಾಟಿಕೆಯೂ ಹೆಚ್ಚಾಗುತ್ತದೆ. ಇದನೆಲ್ಲಾ ನಿರ್ಣಾಮ ಮಾಡುವುದು ಹೇಗೆ? ಎಂದು ಗರಂ ಆಗಿ ಪ್ರಶ್ನಿಸಿದ್ದಾರೆ.

Exit mobile version