ಸಿಎಂ ಸ್ಥಾನಕ್ಕೆ ರಾಜಿನಾಮೆ ನೀಡಿದ ಉತ್ತರಾಖಂಡ್‌ ಸಿಎಂ

ಉತ್ತರಾಖಂಡ್‌, ಜು. 03: ನಾಲ್ಕು ತಿಂಗಳ ಹಿಂದಷ್ಟೇ ಅಧಿಕಾರದ ಚುಕ್ಕಾಣಿ ಹಿಡಿದಿರುವ ಉತ್ತರಾಖಂಡ್‌ನ ಮುಖ್ಯಮಂತ್ರಿ ತೀರಥ್‌ ಸಿಂಗ್‌ ರಾವತ್‌ ತನ್ನ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ. ಇದರ ಬೆನ್ನಲ್ಲೇ ಉತ್ತರಾಖಂಡ್‌ ರಾಜ್ಯದಲ್ಲಿ ನಾಯಕತ್ವದ ಬಿಕ್ಕಟ್ಟು ಉಲ್ಬಣಗೊಂಡಿದೆ.

ಸಿಎಂ ಆಗಲು ಶಾಸಕರಾಗಿರಬೇಕು ಎಂಬ ನೀತಿಯ ಅನುಸಾರ ಪ್ರಸ್ತುತ ಸಂಸದರಾಗಿರುವ ರಾವತ್‌ ಸಿಎಂ ಆಗಿ ಮುಂದುವರಿಯಲು ಮುಂಬರುವ ಸೆಪ್ಟೆಂಬರ್‌ 10ರೊಳಗೆ ಆಸಕರಾಗಿ ಆಯ್ಕೆಯಾಗಬೇಕಾದ ಪರಿಸ್ಥಿತ ಒದಗಿಬಂದಿದೆ.

ಚುನಾವಣಾ ಆಯೋಗವು ಕೊರೋನಾ ಕಾರಣದಿಂದಾಗಿ ಮುಂದೂಡಿರುವ ಗಂಗೋತ್ರಿ ಹಾಗೂ ಹಲ್ದವಾನಿ ಕ್ಷೇತ್ರಗಳ ಉಪಚುನಾವಣೆ, ರಾವತ್‌ ಪಾಲಿಗೆ ಕಬ್ಬಿಣದ ಕಡಲೆಯಾಗಿದೆ.

ಒಂದು ವೇಳೆ ಉಪಚುನಾವಣೆ ನಡೆಯದಿದ್ದರೆ ಬಿಜೆಪಿ ಹೈಕಮಾಂಡ್​​ಗೂ ನಾಯಕತ್ವ ಬದಲಾವಣೆ ಅನಿವಾರ್ಯವಾಗಲಿದ್ದು, ಶಾಸಕರಲ್ಲಿ ಒಬ್ಬರನ್ನು ಮುಖ್ಯಮಂತ್ರಿಯನ್ನಾಗಿ ಮಾಡಬೇಕಿದೆ.

ಇಂದು ಡೆಹ್ರಾಡೂನ್​​ನಲ್ಲಿ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ, ಮುಂದಿನ ಸಿಎಂ ಆಯ್ಕೆ ಕೂಡ ನಡೆಯಲಿದೆ.‌

Exit mobile version