ಉತ್ತರಪ್ರದೇಶದ ಮದರಸಾಗಳಲ್ಲಿ ರಾಷ್ಟ್ರಗೀತೆ ಕಡ್ಡಾಯಗೊಳಿಸಿ ಆದೇಶ!

madaras

ಯೋಗಿ ಆದಿತ್ಯನಾಥ್(Yogi adityanath) ಎರಡನೇಯ ಅವಧಿಗೆ ಮತ್ತೇ ಮುಖ್ಯಮಂತ್ರಿಯಾಗಿ(ChiefMinister) ಅಧಿಕಾರ ಸ್ವೀಕರಿಸಿದ ನಂತರ ಉತ್ತರಪ್ರದೇಶದಲ್ಲಿ ಬದಲಾವಣೆಯ ಪರ್ವ ಶುರುವಾಗಿದೆ. ಚುನಾವಣೆಯ ಫಲಿತಾಂಶ ಘೋಷಣೆಯಾದ ನಂತರ ಅನೇಕ ಕ್ರಿಮಿನಲ್‍ಗಳು ಸ್ವತಃ ಬಂದು ಪೋಲಿಸರಿಗೆ ಶರಣಾಗಿದ್ದರು. ಇದೀಗ ಉತ್ತರಪ್ರದೇಶದಲ್ಲಿರುವ ಮದರಸಾಗಳಲ್ಲಿ ಪ್ರತಿದಿನ ರಾಷ್ಟ್ರಗೀತೆಯನ್ನು ಕಡ್ಡಾಯವಾಗಿ ಹಾಡಬೇಕು ಎಂದು ಉತ್ತರಪ್ರದೇಶ ಮದರಸಾ ಶಿಕ್ಷಣ ಮಂಡಳಿ ಹೊಸ ಆದೇಶ ಹೊರಡಿಸಿದೆ.

ಮದರಸಾ ಶಿಕ್ಷಣ ಮಂಡಳಿಯ ಅಧ್ಯಕ್ಷ ಇಫ್ತಿಕಾರ್ ಅಹ್ಮದ್ ಜಾವೇದ್ ಮಾತನಾಡಿ, ಮದರಸಾಗಳ ಮಕ್ಕಳು ಇನ್ನು ಮುಂದೆ ಪ್ರಾರ್ಥನೆಯ ಗೀತೆಯೊಂದಿಗೆ ರಾಷ್ಟ್ರಗೀತೆಯನ್ನು ಹಾಡಬೇಕು. ಮಕ್ಕಳಲ್ಲಿ ದೇಶ ಭಕ್ತಿಯನ್ನು ಜಾಗೃತಗೊಳಿಸುವ ನಿಟ್ಟಿನಲ್ಲಿ ಈ ಆದೇಶ ಹೊರಡಿಸಲಾಗಿದೆ. ನಮ್ಮ ಮಕ್ಕಳಿಗೆ ಈ ದೇಶದ ಇತಿಹಾಸ ಮತ್ತು ಸಂಸ್ಕøತಿಯನ್ನು ತಿಳಿಸುವುದು ತಮ್ಮ ಕರ್ತವ್ಯವಾಗಿದೆ ಎಂದಿದ್ದಾರೆ. ಇನ್ನು 2017ರಲ್ಲಿ ಮದರಸಾಗಳಲ್ಲಿ ಸ್ವಾತಂತ್ರ್ಯ ದಿನದಂದು ರಾಷ್ಟ್ರಗೀತೆ ಮತ್ತು ಧ್ವಜಾರೋಹಣ ಮಾಡುವುದನ್ನು ಕಡ್ಡಾಯಗೊಳಿಸಿ ಆದೇಶ ಹೊರಡಿಸಲಾಗಿತ್ತು.

ಇದೀಗ ಪ್ರತಿದಿನ ಮದರಸಾಗಳಲ್ಲಿ ರಾಷ್ಟ್ರಗೀತೆಯನ್ನು ಕಡ್ಡಾಯಗೊಳಿಸಿ ಆದೇಶ ಹೊರಡಿಸಲಾಗಿದೆ. ಮದರಸಾ ಶಿಕ್ಷಕರ ನೇಮಕಾತಿಗೆ ಟಿಇಟಿ. ಉತ್ತರಪ್ರದೇಶದಲ್ಲಿ ಮದರಸಾ ಶಿಕ್ಷಕರ ನೇಮಕಾತಿಯನ್ನು ಟಿಇಟಿ ಪರೀಕ್ಷೆಯ ಮೂಲಕ ನಡೆಸಲು ಮದರಸಾ ಶಿಕ್ಷಣ ಮಂಡಳಿ ತೀರ್ಮಾನಿಸಿದೆ. ಶಿಕ್ಷಕರ ಗುಣಮಟ್ಟ ನಿರ್ಧರಿಸಲು ಟಿಇಟಿ ನೆರವಾಗಲಿದೆ. ಈ ನೇಮಕಾತಿಯನ್ನು ಶಿಕ್ಷಕರ ನೇಮಕಾತಿ ಮಂಡಳಿ ನಡೆಸಲಿದ್ದು, ಪ್ರಸ್ತಾವನೆಯನ್ನು ಸರ್ಕಾರಕ್ಕೆ ಕಳುಹಿಸಲಾಗಿದೆ.

ಮದರಸಾ ಶಿಕ್ಷಕರಾಗಲು ಟಿಇಟಿ ಕಡ್ಡಾಯಗೊಳಿಸಿದ್ದು, ಟಿಇಟಿ ತೇರ್ಗಡೆಯಾದರೆ ಮಾತ್ರ ಮದರಸಾ ಶಿಕ್ಷಕರಾಗಬಹುದು. ವರ್ಷದಲ್ಲಿ ಎರಡು ಬಾರಿ ಅರ್ಹತಾ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ. ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ಮದರಸಾ ಶಿಕ್ಷಕರನ್ನು ಆಯ್ಕೆ ಮಾಡುವುದರಿಂದ ಶಿಕ್ಷಣದ ಗುಣಮಟ್ಟ ಸುಧಾರಣೆಯಾಗಲಿದೆ ಎಂದು ಮದರಸಾ ಶಿಕ್ಷಣ ಮಂಡಳಿ ತಿಳಿಸಿದೆ.

Exit mobile version