ಇಂದಿನಿಂದ ಚಿತ್ರರಂಗಕ್ಕೆ ವ್ಯಾಕ್ಸಿನ್ !

ಸಮಸ್ತ ಕನ್ನಡ ಚಿತ್ರರಂಗಕ್ಕಾಗಿ ವ್ಯಾಕ್ಸಿನ್ ಡ್ರೈವ್ ಇಂದಿನಿಂದ ಪ್ರಾರಂಭವಾಗಿದೆ. ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಇಂದು ದಿನಾಂಕ 31ಮತ್ತು ಜೂನ್ 1ರಂದು ಸೋಮವಾರ ಮತ್ತು ಮಂಗಳವಾರ ಈ ಎರಡು ದಿನ ಬೆಳಗ್ಗೆ 10.00 ಘಂಟೆ ಯಿಂದ ಸಂಜೆ 5.00 ಘಂಟೆಯ ವರೆಗೂ ಚಾಮರಾಜಪೇಟೆ ಎಲ್ಲಿರುವ ನಮ್ಮ ಕರ್ನಾಟಕ ಚಲನಚಿತ್ರ ಕಲಾವಿದರ ಸಂಘದಲ್ಲಿ “ಕೋವಿಶಿಲ್ಡ್” ಲಸಿಕೆಯನ್ನು ಉಚಿತವಾಗಿ ನೀಡಲಾಗುವುದು. ಹದಿನೆಂಟು ವರ್ಷ ಮೇಲ್ಪಟ್ಟ ಎಲ್ಲ ಕಲಾಬಂಧುಗಳು ಈ ಸದಾವಕಾಶ
ಬಳಸಿಕೊಳ್ಳಬೇಕೆಂದು ಪ್ರಕಟಣೆ ತಿಳಿಸಿದೆ.

ಈ ಸಂದರ್ಭದಲ್ಲಿ ಹಾಜರಾಗುವ ಪ್ರತಿಯೊಬ್ಬರೂ

1. ಕಡ್ಡಾಯವಾಗಿ ಆಧಾರ್ ಪತ್ರ ವನ್ನು ತರಬೇಕು,

  1. ಮಾಸ್ಕ್ ಧರಿಸಬೇಕು ಮತ್ತು
    ಸಾಮಾಜಿಕ ಅಂತರವನ್ನು ಕಾಯ್ದು ಕೊಳ್ಳಬೇಕು ಎಂದು ಪ್ರಕಟಣೆಯಲ್ಲಿ ಸೂಚಿಸಲಾಗಿದೆ. ಉದ್ಘಾಟನೆಯ ವೇಳೆ ಉಪ ಮುಖ್ಯಮಂತ್ರಿ ಅಶ್ವಥ್ ನಾರಾಯಣ್, ಸಂಸದೆ ಸುಮಲತಾ ಅಂಬರೀಶ್, ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನೀಲ್ ಪುರಾಣಿಕ್, ರಾಕ್ ಲೈನ್ ವೆಂಕಟೇಶ್, ದೊಡ್ಡಣ್ಣ, ಆರೋಗ್ಯ ಇಲಾಖೆಯ ಪ್ರಮುಖ ಅಧಿಕಾರಿ ಹಾಗೂ ಬಿಬಿಎಂಪಿ ಕಮಿಷನರ್ ಅವರು ಉಪಸ್ಥಿತರಿರುತ್ತಾರೆ ಎಂದು ಸಿನಿಮಾ ಇಂಡಸ್ಟ್ರಿಯ ವ್ಯಾಕ್ಸಿನೇಶನ್ ಡ್ರೈವ್ ನೋಡಲ್ ಅಧಿಕಾರಿ ರೂಪ ಅಯ್ಯರ್ ಶ್ರೀವತ್ಸ ಅವರು ಮಾಧ್ಯಮ ಪ್ರಟಕಣೆಯ ಮೂಲಕ ತಿಳಿಸಿದ್ದಾರೆ.
Exit mobile version