ವೈವಾಹಿಕ ಜೀವನಕ್ಕೆ ಕಾಲಿಡುತ್ತಿರುವ ‘ಲವ್ ಮಾಕ್ಟೇಲ್’ ಜೋಡಿ

ಬೆಂಗಳೂರು, ನ. 3: ಸ್ಯಾಂಡಲ್‌ವುಡ್‌ನಲ್ಲಿ ಲವ್‌ ಮಾಕ್ಟೇಲ್‌ ಜೋಡಿಯೆಂದೇ ಪ್ರಸಿದ್ಧವಾಗಿರುವ ಜೋಡಿಗಳು ಡಾರ್ಲಿಂಗ್‌ ಕೃಷ್ಣ ಹಾಗೂ ಮಿಲನಾ ನಾಗರಾಜ್‌. ಈ ಜೋಡಿಯೂ ಮುಂಬರುವ ಫ್ರೆಬ್ರವರಿ 14 ರಂದು ಹಸೆಮಣೆ ಏರಲಿದ್ದೇವೆ ಹರಿಸಿ ಹಾರೈಸಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ಕೊರೊನಾ ಲಾಕ್‌ಡೌನ್‌ಗಿಂತ ಮೊದಲು ‘ಲವ್‌ ಮಾಕ್ಟೇಲ್‌’ ಚಿತ್ರ ಬಿಡುಗಡೆಯಾಗಿದ್ದು, ಅತ್ಯಂತ ಯಶಸ್ವಿಯಾಗಿ ತೆರೆ ಕಂಡಿತ್ತು. ನೆಟ್ಟಿಗರು ತೆರೆಯಲ್ಲಿ ಈ ಜೋಡಿಯನ್ನು ಕಂಡು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಆದಾದ ಬಳಿಕ ಅನೇಕರು ಮದುವೆ ಯಾವಾಗ ಎಂಬ ಪ್ರಶ್ನೆಯನ್ನು ಈ ಜೋಡಿಗೆ ಕೇಳಿದ್ದರು. ಇಂದು ಈ ಪ್ರಶ್ನೆಗೆ ಸಂತೋಷದ ಸುದ್ದಿಯನ್ನು ಹಂಚಿಕೊಳ್ಳುವುದರ ಮೂಲಕ ತೆರೆ ಎಳೆದಿದ್ದಾರೆ.

Exit mobile version