ಆ್ಯಂಬುಲೆನ್ಸ್ ಸೈರನ್ ಹಾರ್ನ್ ಬದಲಾವಣೆಗೆ ಕೇಂದ್ರ ಚಿಂತನೆ

ನಾಸಿಕ್ಅ 8  : ಆ್ಯಂಬುಲೆನ್ಸ್‌ ಸೈರನ್‌ ಬದಲಾವಣೆಗೆ ಯೋಚಿಸಿದ್ದು ಪ್ರಸ್ತುತ ಇರುವ ಸೈರನ್‌ಗೆ ಬದಲಾಗಿ ಆಕಾಶವಾಣಿಯಲ್ಲಿ ಮುಂಜಾನೆ ಕೇಳಿಬರುವ ಟ್ಯೂನ್‌ ಬಳಕೆ ಬಗ್ಗೆ ಯೋಚಿ​ಸ​ಲಾ​ಗು​ತ್ತಿ​ದೆ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್‌ ಗಡ್ಕರಿ ಹೇಳಿದ್ದಾರೆ.ವಾಹನಗಳು ಹಾರ್ನ್‌ ಮಾಡಿದಾಗ ಉಂಟಾಗುವ ಕರ್ಕಶ ಶಬ್ಧವನ್ನು ತಪ್ಪಿಸಲು ಹಾರ್ನ್‌ಗಳಿಗೆ ಶಾಸ್ತ್ರೀಯ ವಾದ್ಯಗಳ ಶಬ್ದ ಬಳಸಲಾಗುವುದು ಎಂದು ಕೆಲವು ದಿನಗಳ ಹಿಂದೆ ಅವರು ಹೇಳಿದ್ದರು.

ಗುರುವಾರ ನಾಸಿಕ್‌ನಲ್ಲಿ ನಡೆದ ಸಮಾ​ರಂಭ​ವೊಂದ​ರಲ್ಲಿ ಮಾತ​ನಾ​ಡಿದ ಅವರು, ಈ ನಿಯಮ ಜಾರಿಗೆ ಬಂದರೆ ಆ್ಯಂಬುಲೆನ್ಸ್‌ ಜಾಗತಿಕವಾಗಿ ಬಳಸಲ್ಪಡುತ್ತಿರುವ ಸೈರನ್‌ಗೆ  ಬದಲಾಗಿ ಶಾಸ್ತ್ರೀಯ ಸಂಗೀತ ಕೇಳಿಬರಲಿದೆ. ಹಾರ್ನ್‌ಗಳು ಕರ್ಕಶವಾಗಿದ್ದು ಮಾನಸಿಕ ನೆಮ್ಮದಿಯನ್ನು ಹಾಳು ಮಾಡುತ್ತವೆ. ಹಾಗಾಗಿ ಶಾಸ್ತ್ರೀಯ ಸಂಗೀತ ವಾದ್ಯಗಳ ಶಬ್ಧ ಬಳಕೆ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ. ಇದರೊಂದಿಗೆ ಆ್ಯಂಬುಲೆನ್ಸ್‌ಗಳಲ್ಲಿ ಬಳಸುವ ಸೈರನ್‌ ಅನ್ನು ಸಹ ಬದಲಾಯಿಸಲಾಗುವುದು. ಈಗಿರುವ ಸೈರನ್‌ಗೆ ಬದಲಾಗಿ ಆಕಾಶವಾಣಿಯಲ್ಲಿ ಮುಂಜಾನೆ ಕೇಳಿಬರುವ ಸಂಗೀತ ಅಳವಡಿಸಿದರೆ ಜನರ ಮನಸ್ಸಿಗೆ ಆಪ್ಯಾಯಮಾನವಾದ ಶಬ್ಧ ಕೇಳಿಸುತ್ತದೆ ಎಂದ​ರು.

ಇನ್ಮುಂದೆ ಬರಲಿದೆ ಸಂಗೀತ ಮಾದರಿಯ ಹಾರ್ನ್

ವಾಹನಗಳ ಹಾರ್ನ್‌ ಮಾಡಿದಾಗ ಅದರಿಂದ ಹೊರಹೊಮ್ಮುವ ಕರ್ಕಶ ಧ್ವನಿಗೆ ಬೇಸರ ಪಡುವವರೇ ಹೆಚ್ಚು. ಆದರೆ ಮುಂದಿನ ದಿನಗಳಲ್ಲಿ ಇಂತಹ ಕರ್ಣಕಠೋರ ಶಬ್ದಕ್ಕೆ ಬದಲಾಗಿ ಭಾರತೀಯ ಸಂಗೀತದ ವಾದ್ಯಗಳು ಕೇಳಿಬರುವ ಸಾಧ್ಯತೆ ಇದೆ ಅಂದರೆ ತಬಲಾ, ಪಿಟೀಲು, ಕೊಳಲು ಸೇರಿದಂತೆ ನಾನಾ ವಾದ್ಯಗಳ ಮಧುರ ಧ್ವನಿ ಕೇಳಿಬರಲಿದೆ. ಈ ಕುರಿತು ಮಾಹಿತಿ ನೀಡಿರುವ ಕೇಂದ್ರ ರಸ್ತೆ ಸಾರಿಗೆ ಖಾತೆ ಸಚಿವ ನಿತಿನ್‌ ಗಡ್ಕರಿ, ‘ನಾನು ನಾಗಪುರದಲ್ಲಿರುವ ಕಟ್ಟಡದಲ್ಲಿ 11ನೇ ಅಂತಸ್ತಿನಲ್ಲಿ ವಾಸಿಸುತ್ತಿದ್ದೇನೆ. ಆದರೂ ಮುಂಜಾನೆ ಪ್ರಾಣಾಯಾಮ ಮಾಡುವಾಗ ವಾಹನಗಳ ಹಾರ್ನ್‌ ಏಕಾಗ್ರತೆ ಹಾಳು ಮಾಡುತ್ತದೆ. ಎಂದು ಈ ಹಿಂದೆ ಹೇಳಿದ್ದರು.

 ಹಾಗಾಗಿ ಇಂತಹ ಕರ್ಕಶ ಧ್ವನಿಗಳನ್ನು ಸರಿಪಡಿಸುವ ಅಗತ್ಯ ಅರಿವಾಗಿತ್ತು. ಈ ಬಗ್ಗೆ ಅಧಿಕಾರಿಗಳ ಜೊತೆ ಚರ್ಚೆ ವೇಳೆ ಸಂಗೀತ ವಾದ್ಯಗಳ ಧ್ವನಿ ಅಳವಡಿಕೆ ಬಗ್ಗೆ ಪ್ರಸ್ತಾಪ ಬಂದಿತ್ತು. ಅದನ್ನು ಜಾರಿ ಮಾಡುವ ಹಾದಿಯಲ್ಲಿ ಇದೀಗ ಅಧಿಕಾರಿಗಳು ತೊಡಗಿಸಿಕೊಂಡಿದ್ದಾರೆ. ಈ ಸಂಬಂಧ ನಾವು ಹೊಸ ಕಾಯ್ದೆ ಜಾರಿ ಮಾಡಲಿದ್ದೇವೆ ಎಂದು ಹೇಳಿದ್ದಾರೆ.

Exit mobile version