ಮತದಾನಕ್ಕೆ ಸೈಕಲ್ ನಲ್ಲಿ ತೆರಳಿ ಗಮನಸೆಳೆದ ತಮಿಳು ನಟ ವಿಜಯ್

ಚೆನ್ನೈ, ಏ. 06; ತಮಿಳುನಾಡು ವಿಧಾನಸಭೆಯ 234 ಕ್ಷೇತ್ರಗಳಿಗೆ ಇಂದು ಒಂದೇ ಹಂತದಲ್ಲಿ ಚುನಾವಣೆ ನಡೆಯುತ್ತಿದೆ. ಈ ವೇಳೆ ತಮಿಳುನಾಡಿನ ಖ್ಯಾತ ನಟ ದಳಪತಿ ವಿಜಯ್​ ಚೆನ್ನೈನ ನೀಲಾಂಗರೈನಲ್ಲಿರುವ ತನ್ನ ಮನೆಯಿಂದ ಮತದಾನ ಕೇಂದ್ರಕ್ಕೆ ಸೈಕಲ್​ನಲ್ಲಿ ತೆರಳುವ ಮೂಲಕ ಗಮನ ಸೆಳೆದಿದ್ದಾರೆ.

ನಟ ವಿಜಯ್​ ಸೈಕಲ್​ನಲ್ಲಿ ಮತದಾನ ಕೇಂದ್ರಕ್ಕೆ ತೆರಳಿದ ತನ್ನ ಉದ್ದೇಶವನ್ನು ಈವರೆಗೆ ಬಹಿರಂಗಪಡಿಸಿಲ್ಲ. ಆದರೆ, ಕೇಂದ್ರ ಸರ್ಕಾರ ಸತತವಾಗಿ ತೈಲ ಬೆಲೆ ಏರಿಸುತ್ತಿದೆ. ಇದೇ ಕಾರಣಕ್ಕೆ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟಿಸುವ ನಿಟ್ಟಿನಿಂದಲೇ ನಟ ವಿಜಯ್ ಇಂದು ಸೈಕಲ್​ನಲ್ಲಿ ತೆರಳಿ ಮತ ಚಲಾಯಿಸಿದ್ದಾರೆ ಎಂದು ಅವರ ಅಭಿಮಾನಿಗಳು ಅಭಿಪ್ರಾಯಪಟ್ಟಿದ್ದಾರೆ.

ಸದ್ಯ ಈ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದ್ದು, ಈ ಕಾರಣವನ್ನು ಸ್ವತಃ ಅವರೇ ಸ್ಪಷ್ಟಪಡಿಸಬೇಕಾಗಿದೆ.

Exit mobile version